Total Pageviews

Sunday 18 March 2018

ಮನ್ವಂತರ

ಮನ್ವಂತರ
ಸ್ವಾಗತವು ನಿನಗೆ ಓ

ಯುಗದ ಆದಿಯೇ

ಭಾಗ್ಯವಂತರು ನಾವು

ಪ್ರಕೃತಿಯ ಮಕ್ಕಳು


ತುಂಬಿದೆ ವನಗಳಲಿ

ಮಾವಿನ ಪಲ್ಲವ

ಕರೆಯುತಿದೆ ಬೇವಿನ

ಕೆಂದಳಿರ ಕಲರವ
ಕಾಲವಿದು ಮನ್ವಂತರ

ನಿಸರ್ಗದ ನವ ದಿರಿಸಿಗೆ

ಹಸಿರು ತಳಿರ ತೋರಣ

ಆಗಮಿಸುವ ವಸಂತಗೆ


ಬೀರುತಿವೆ ಲತಿಕೆಗಳು

ಚಿಗುರಿನ ನರುಗಂಪು

ಹೊಮ್ಮುತಿದೆ ಮಂದಾನಿಲ

ಹೊತ್ತು ಹೊಸ ನವಿರು
ಹಸಿರು ಸಿರಿಯ ಸೆರಗು

ಭೂ ತಾಯಿಯ ಹೊಸ ತೊಡುಗೆ

ಸೂರ್ಯ ರಶ್ಮಿ ಸಿಂಚನ

ಹೊಳೆಯುವ ನವಯುಡುಗೆ


ಸಿಹಿಕಹಿಗಳ ಮಿಶ್ರಣ

ಜೀವನವೇ ಬೇವು ಬೆಲ್ಲ

ಸ್ವೀಕರಿಸಿ ಬಪ್ಪುದ

ಗೆಲ್ಲಬೇಕು ನಾವೆಲ್ಲ

ನವ ವರುಷ ತರಲಿ ಹರುಷ

ಸುಖ ಶಾಂತಿ ನೆಮ್ಮದಿ

ಕಳೆದು ಮನದ ಮಲಿನ

ಬದುಕೋಣ  ಸಂತಸದಿ


1 comment:

  1. ಚಂದ್ರಮಾನ ಯುಗಾದಿಗೆ ಚಂದ್ರಶೇಖರ ರಿಗೂ ಚೆಲುವಿನ ಸ್ವಾಗತ....

    ReplyDelete

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...