Total Pageviews

Thursday 8 March 2018

ಜಗನ್ಮಾತೆ

ಜಗನ್ಮಾತೆ

ಓ  ತಾಯೆ  ಜಗನ್ಮಾತೆ
ಈ ಜಗದ ಜನ್ಮದಾತೆ
ಸೃಷ್ಠಿಗೆ ನೀ  ಜೀವದಾತೆ
ಜೀವ ಜಗಕೆ  ಭಾಗ್ಯದಾತೆ

ಸಾಗರದಾಳ  ಜೀವನಪ್ರೀತಿ
ಆಗಸವೇ ಬದುಕ ಬಯಕೆ
ಮಿತಿಯಿಲ್ಲದ   ವಾತ್ಸಲ್ಯದಾಗರ
ಸಾಟಿಯಿಲ್ಲದ ಭಾವಬಂಧುರ

ಉಕ್ಕುವಂಥ ಕಡಲ ಪ್ರೀತಿ
ಮಿಕ್ಕುವಂಥ ಶ್ರಮದ ರೀತಿ
ಸುಟ್ಟು  ಬೆಳಗೊ  ಮಹಾಜ್ಯೋತಿ
ಎನಿತು ಅನಂತ  ತಾಳ್ಮೆ ನೀತಿ

ಸಹನೆ ಭೂಮಿ ತೂಕವಂತೆ
ಕ್ಷಮಯಾಧರಿತ್ರಿ ದೇವಮಾತೆ
ಕರುಳು ಕುಡಿಯೇ   ಸಿರಿಯಂತೆ
ಕರುಣೆಯ ಮಹಾನದಿವಂತೆ

ಹೆತ್ತು ಬದುಕ ನೊಗವ ಹೊತ್ತು
ಸಂಸಾರಕೆ ನೀನೆ ತಾನೆ ಗಾಣದೆತ್ತು
ಬದುಕಲಾರೆ ನಿನಗಾಗಿ ಒಂದರೆಗಳಿಗೆ ಹೊತ್ತು
ಹೇಗೆ ತಾನೆ ತೀರಿಸಲಿ 
ತೀರದ ಆ ಋಣವ ಹೊತ್ತು

ಉಪ್ಪಿಗಿಂತ ರುಚಿಯೂ ಇಲ್ಲ
ನಿನ್ನ ಸಮಕೆ ಬಂಧುವಿಲ್ಲ
ನೀನೇ ಮೂಲ ಸೃಷ್ಠಿಗೆಲ್ಲ
ರಂಗು ನೀನು ಭಾವಕೆಲ್ಲ


3 comments:

  1. ಸೂಕ್ತ ಸಂದರ್ಭಕ್ಕೆ ಸುಂದರ ಕವಿತೆ ಹುಟ್ಟಿದೆ.ಬ್ರಹ್ಮಾಂಡವನ್ನೆ ಅಕ್ಕರೆಯಿಂದ ಅಕ್ಷರಗಳಲಿ ಬಂಧಿಸಿರುವಿರಿ.ಶೈಲಿ ಸಹಜ ಸರಳ.

    ReplyDelete
  2. ಜಗದ ಜ್ಯೋತಿಯನ್ನು ವರ್ಣಿಸುವ ಮಾತುಗಳು...
    ಜ್ಯೋತಿ ಪ್ರಕಾಶ ಹೊರ ಸೂಸಲು ಸೂಕ್ತ ಸಂದರ್ಭದ ಸರಳ ವರ್ಣನೆ.
    ಸ್ತ್ರೀ ಈ ಜಗತ್ತಿನ ಸೃಷ್ಟಿಕರ್ತೆ ಸೃಷ್ಟಿಸುವ ಗುಣದಿಂದಲೇ ಇಡೀ ಜಗತ್ತನ್ನು ತನ್ನ ಸೃಷ್ಟಿಯ ಮೂಲಕ ಮಾತೃ ಸ್ವರೂಪಿ ಆಗಿದ್ದಾಳೆ....
    ("ತನ್ನ ಜಗದ ಸುಖವ ಸವೆಸಿ
    ಮಗುವಿನ ಸುಖವ ಬಯಸುವಳು ತಾಯಿ ಮಾತ್ರ")

    *ಮಾತೃ ದೇವೋ ಭವ*

    ReplyDelete

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...