Total Pageviews

Thursday 1 March 2018

ಜಾನ್ ಕೀಟ್ಸ್ ನ ಮೌನರಾಗ.....

ಜಾನ್ ಕೀಟ್ಸ್ ನ ಮೌನರಾಗ.....
ಭಾಗ ೧
         
ಜಾನ್  ಕೀಟ್ಸ್ ಕಾವ್ಯದ ಮಹಾವ್ಯಸನಿ.ಆತ ಕಂಡಿದ್ದು,ಉಂಡಿದ್ದು, ಅಲೆದಾಡಿದ್ದು,ಮಲಗಿದ್ದು, ಕುಡಿದದ್ದು,ಜಗಳವಾಡಿದ್ದು,ಪ್ರೀತಿಸಿದ್ದು,ಕುಣಿದದ್ದು,ನಡೆದದ್ದು ನುಡಿದದ್ದು , ಅನುಭವಿಸಿದ್ದು,ಜೀವಿಸಿದ್ದು, ಉಸಿರಾಡಿದ್ದೆಲ್ಲವೂ ಕಾವ್ಯವೇ.
                     ಬದುಕಿದ ಅಲ್ಪಾಯುಷ್ಯದಲ್ಲಿಯೇ ಶತಮಾನಗಳಿಡೀ  ಫಲ ಕೊಡುವಷ್ಟು  ಕಾವ್ಯದ ಬೀಜಗಳನ್ನು ಬಿತ್ತಿ ಹೋಗಿದ್ದಾನೆ.ಹೀಗೆ ಬಿತ್ತಿದ್ದರಿಂದಲೋ ಏನೋ , ಪ್ರಥಮ ದರ್ಜೆ ಕಾವ್ಯಗಳಾಗಿದ್ದರೂ ,ಇವನ  ಕಾವ್ಯಬೀಜಗಳು  ವಿಮರ್ಶಕರ ದೃಷ್ಟಿಗೆ ಸ್ಪಷ್ಟವಾಗಿ ಗೋಚರವಾಗಲಿಲ್ಲ.ಗೋಚರಿಸಿದರೂ ಆ ಕಾಲದ ಮೌಲಿಕ  ಕಾವ್ಯಗಳಾಗಿಲ್ಲ ವೆಂದು,ನಿರ್ಲಕ್ಷ್ಯಕ್ಕೊಳಗಾದ ದುರಂತ ಕವಿ ಜಾನ್ ಕೀಟ್ಸ್.
                 

                          ಡಾ.ರಾಜಶೇಖರ ಮಠಪತಿಯವರು "ಜಾನ್ಕೀಟ್ಸ್ - ನೀರ ಮೇಲೆ ನೆನಪು ಬರದು.."ಎಂಬ  ಕೃತಿಯ ಮೂಲಕ. ಇಂತಿಪ್ಪ ಜಾನ್ ಕೀಟ್ಸ್  ಜೀವನದ ಮೇಲೆ ಬೆಳಕು ಚೆಲ್ಲಿದ್ದಾರೆ.  ತನ್ನ ಬದುಕಿನ ಸುಖ, ದು:ಖ , ಸ್ನೇಹ, ಪ್ರೀತಿ,ವಾತ್ಸಲ್ಯ, ಕೋಪ,ಕರುಣೆ,ಪ್ರವಾಸ, ಸಂಬಂಧ ,ನಿರ್ಲಕ್ಷ್ಯ,ಆಸಕ್ತಿ,ಮೃತ್ಯು, ಕಾಯಕ, ತವಕ, ತಲ್ಲಣಗಳಿಗೂ , ಕಾವ್ಯದಲ್ಲಿಯೇ ಮುಕ್ತಿಯನ್ನು ಕಂಡುಕೊಂಡು ಆದರ್ಶ ಕವಿ ಗಳ ಸಾಲಿನಲ್ಲಿ  ನಿಲ್ಲಬೇಕಾದ ,ಅವನಿಗೆ ದಕ್ಕಬೇಕಾದ ಸ್ಥಾನವನ್ನು ತಪ್ಪಿಸಿ, ಅಂದಿನ ಮಹಾಮಹಿಮ ವಿಮರ್ಶಕರು ಕವಿತೆಯ  ಸಾವಿನ ಮೇಲೆ ಷರಾ ಬರೆದ ಹಾಗೆ, 

 "ಕೀಟ್ಸ್ ನಿಗೆ   ಕಾವ್ಯ ಬರೆಯುವ, ಕಾವ್ಯಕೃಷಿಯಲ್ಲಿ ಮುಂದುವರಿಯುವ   ಅರ್ಹತೆಗಳಿಲ್ಲ "

                          ಎಂದು ಮರಣ ಶಾಸನ ಬರೆದು ಆತನ ನಿಸ್ವಾರ್ಥ, ನಿಶಾಂತ ,ನಿರ್ಮಲ, ಕಾವ್ಯ ಕನ್ನಿಕೆಯ ಸಹಜ ಸೌಂದರ್ಯವನ್ನು ಅಲ್ಲಗಳೆದರು. ಅಲ್ಲಿಗೆ, ಸಹಜವಾಗಿ ಅರಳಬಹುದಾಗಿದ್ದ ಕವಿ ಕಮಲವೊಂದು ಒತ್ತಾಸೆಯ ಜಲಧಾರೆಯಿಲ್ಲದೆ  ಸೊರಗಬೇಕಾಯಿತು.

                     "ನಿಂದಕರಿರಬೇಕು,ಜಗದಲಿ ನಿಂದಕರಿರಬೇಕು."ಎಂಬ ದಾಸವಾಣಿಯಂತೆ,  "ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿನಿಂದೆಗಳು ಬಂದೆಡೆ ಸಮಾಧಾನಿಯಾಗಿರಬೇಕು " ಎಂಬ ಅಕ್ಕಮಹಾದೇವಿಯ ವಚನದಂತೆ  ಆತ ಎಲ್ಲವನ್ನು ಸಹಿಸಿಕೊಂಡು ತನ್ನ ಜೀವನಾಡಿಯಾಗಿದ್ದ ಕಾವ್ಯಸರಸ್ವತಿಯನ್ನು ಕೊರಗಲು ಬಿಡಲಿಲ್ಲ.ಇಂಥವನ ಬದುಕನ್ನು  ಕುರಿತು ರಾಗಂ ರವರ ವ್ಯಾಖ್ಯಾನ

 " ಗಾಢ ಸ್ನೇಹ,ಹುಚ್ಚು ಪ್ರೀತಿ ಮತ್ತು ಸಕಾಲಿಕ ಮೃತ್ಯುಗಳ ಒಟ್ಟು ಮೊತ್ತವೇ ಜಾನ್ ಕೀಟ್ಸ್ ನ ಬದುಕು."

                         ಕೀಟ್ಸ್ ಇಂಗ್ಲೆಂಡಿನ ಲಂಡನ್ ನಲ್ಲಿ ಥಾಮಸ್ ಹಾಗೂ ಫ್ರಾನ್ಸಸ್ ಜಿನ್ನಿಂಗ್ಸ್ ರ ಮಗನಾಗಿ ೧೭೯೫ ರಲ್ಲಿ ಜನಿಸಿದ.೧೮೧೦ ರಲ್ಲಿ ತಾಯಿಯನ್ನು ಕಳೆದುಕೊಂಡು ಸಿಡಿಮಿಡಿಗೊಂಡಿದ್ದ.
                       ಹೈಡನ್ ಗೆ ಬರೆದ ಪತ್ರದಲ್ಲಿ
            "ಬಾಳಿನುದ್ದಕ್ಕೂ ನಾವು ಹೆಣಗಾಡಿ ಸಾಧಿಸುವ ಪ್ರಸಿದ್ಧಿ
ನಮ್ಮ ಸಮಾಧಿಗಳ ಮೇಲೆ ಸುವರ್ಣಾಕ್ಷರಗಳಲ್ಲಿ ಸ್ಥಾಪನೆಯಾಗಲಿ ಸಾವಾಗಿ ಹರಸಲಿ ಅಲ್ಲಿಂದಲೇ ನಮ್ಮ ಹೆಣಗಳನ್ನು " 

FANNY BRAWNE

   ಎಂದು ಪ್ರಸಿದ್ಧಿಯನ್ನು ಕುರಿತು ಆಡಿದ  ವ್ಯಂಗ್ಯ ನಮಗೂ  ಅನ್ವಯಿಸುವಂತಿದೆ. ಈತನ ಪತ್ರಕ್ಕೆ ಕೈಗಳಾದವರು ಸಮಕಾಲೀನ ಗೆಳೆಯರಾದ  ರೇನಾಲ್ಡ್ಸ,ಹೈಡನ್,ಲೀ ಹಂಟ್ ,ಸಹೋದರ ಜಾರ್ಜ,ಬೈಲಿ, ರೈಸ್. ಇವರೆಲ್ಲ ಕೀಟ್ಸ್ ನ ಕಾವ್ಯಕ್ಕೆ ಕಣ್ಣಾದವರು, ಕಿವಿಯಾದವರು.  ಜಾನ್ ಕೀಟ್ಸ್ ತನ್ನ ಸ್ನೇಹಿತರು, ಸಹೋದರರು, ಹಿತೈಷಿಗಳು ಹಾಗೂ ಹಿರಿಯ ವಿದ್ವಾಂಸರಿಗೆ ಬರೆದ ಪತ್ರ ಬರಹಗಳು ಆತನ ಕಾವ್ಯಮಯವಾಗಿದ್ದ,  ಅಷ್ಟೇ ಮಧುರ ಯಾತನಾಮಯವಾಗಿದ್ದ ಅವನ    ಬದುಕನ್ನು  ಸಾಧಾರವಾಗಿ ಕಟ್ಟಿಕೊಡುತ್ತವೆ.
                        ಕೀಟ್ಸ್ ನ ಕಾವ್ಯಕ್ಕೊಂದು ಉದಾಹರಣೆ 

" ಬೆಳಕಿನ ಮುಗ್ಧ ಮಹಾನದಿಯದು ಕಾವ್ಯ
ಪರಮಶಕ್ತಿ,ಪರಾಶಕ್ತಿ,ದಿವ್ಯ ಮುಕ್ತಿ
ತನ್ನ ಬಲಗೈ ರಟ್ಟೆಯ  ಮೇಲೆ
ತಾನೇ ಗಾಢ ನಿದ್ರೆಗೆರಗುವ,
ಹೊದ್ದು ಮರುಗುವ
ದಗ್ಧ ಶಕ್ತಿಯದು ಕಾವ್ಯ
ಒಳಗಿಳಿದುದೆಲ್ಲವೂ ದಿವ್ಯ"
    

1 comment:

  1. ತಾಯಿ ಸರಸ್ವತಿ ನಿಮ್ಮಲ್ಲಿ ನೆಲಸಲಿ ಸರ್, ಶುಭವಾಗಲಿ

    ReplyDelete

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...