Total Pageviews

Friday 14 January 2022

ಸಂಕ್ರಮಣ

ಸಂಕ್ರಮಣ



ಸಂಕ್ರಮಣವೆಂದಾರಂಭಿಸಿದ ಆಗಂತುಕ ಪಯಣ
ಅನಂತದವರೆಗೂ ಸೆಳೆದುಕೊಂಡ ಸತ್ಯಗಳ ಅರುಣ 
ಕಂಡ ದಾರಿಯದೋ ಬಲು ಹಿತ ಒಮ್ಮೊಮ್ಮೆ ದಾರುಣ
ಎಲ್ಲಿರುವನೋ ಆವರಿಸಿ ಹಸಿಯಾಗಿಸುವ ಚೈತನ್ಯದ ವರುಣ


ಹೊರಟ ಹಾದಿ ಹೊರಳಿತಲ್ಲ ಕಾಲವೇ ನೀ ಕಾರಣ
ಏರಿದರೂ ಮುಗಿಯದು; ಇದೆಂತಹ ಚಿರ ಚಾರಣ
ತೊಟ್ಟಂತಿಹುದು ಇಳೆಯಿಂದು ಬಿಸಿಲ ಸ್ವರ್ಣದಾಭರಣ
ಕ್ಷಣ ಕ್ಷಣವೂ ಹೊಸದು ; ಕಾಲವೇ ನಿನ್ನ ಪವಿತ್ರ ಚರಣ


ಹೊರಳಿದಾಗೊಮ್ಮೆ ನಿನ್ನಂತಾಗಬೇಕು; ರಹಸ್ಯವೇನು ತರುಣ
ನೇಸರನಿಗೂ ದಯಪಾಲಿಸಿರುವೆ ; ನಿತ್ಯೋತ್ಸವ ಜನನ
ಹಾದಿಯಲ್ಲೊಮ್ಮೆ ಮೈಲುಗಲ್ಲಾದೆ; ತೀರಿಸುವುದೆಂತು ಋಣ
ಜೀವವಿದು ನಿತ್ಯ ಹರಿದು ಪರಿಚಲಿಸುವ ಹೊಂಬಾಣ


ಭುವಿ ತಿರುಗುವ ಸದ್ದೆಲ್ಲಿಹುದೋ ಪುನೀತವಾಗಬೇಕಿವೆ ಕರಣ
ಪ್ರಾಣವೆಲ್ಲವೂ ಅರಿತರಿಯದಂತೆ ನಿನ್ನೊಳಗೆ ಹರಣ
ಕಾಯುವೆಯಾ ಕೊನೆಯವರೆಗೂ; ನಂಬಿದೆ ನಾಗಾಭರಣ
ಉತ್ತರಾಯಣದ ಪ್ರಶ್ನೆಗಳಿಂದರಿತೆ ಸೃಷ್ಟಿಯ ಧಾರಣ


ಬಯಸಿದ ಬೀದಿಯೆಲ್ಲವೂ ವಿಸ್ಮಯದ ಹೂರಣ
ಹಾಡಬೇಕೆನ್ನಿಸಿದೆ ಹಕ್ಕಿಗಳೊಂದಿಗೆ  ರಸರಾಗ ತಾನನ
ಶಿಶುಪುಷ್ಯನಿಗೆಲ್ಲದೆ ನಿತ್ಯ ಭೋಗಿಸುವ ಭಾಗ್ಯದ ಭೋಜನ
ಗಿಡಮರಗಳಿಗೆ ಮೈಸವರುವ ಸಮಯವಿದುವೇ ಅಭ್ಯಂಜನ

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...