Total Pageviews

Tuesday 30 January 2018

ಗಾಂಧಿವಾದವನ್ನಲ್ಲ, ಗಾಂಧಿಯನ್ನು ಓದಿ

ಗಾಂಧಿವಾದವನ್ನಲ್ಲ, 
ಗಾಂಧಿಯನ್ನು ಓದಿ

“ಈ ಗಾಂಧಿ ಎಂಬ ಮಹಾಬೆಳಕಿಗೆ
ಬೆಂಬಲದ ಬೆಳಕಾಗಿ ‘ಉರಿದು ಸುಟ್ಟ
ಬತ್ತಿಯ ಹಾಗೆ ಸುಮ್ಮನಾದ
ಮೃತ್ಯುವಿನ ಮೇಲೆ ಸ್ವಾತಂತ್ರ್ಯದ  ಹಚ್ಚೆ
ಹಾಕಿದ”
               ಕೆಲವೇ ಜೀವಗಳು ಇಂದು ನಮ್ಮೊಂದಿಗಿವೆ . ಗಾಂಧಿ ಎಂಬ ಅನಂತದೊಳಗೆ  ಆ ಪದ ಮಾತ್ರದಿಂದಲೇ ವೈರಾಗ್ಯ ಮೂರ್ತಿಯಾಗಿ ಚರಕ ದೀಕ್ಷೆ ಪಡೆದ ಚಿಂತಕ ‘ಕೆ. ಎ. ಅಬ್ಬಾಸ’ ರ ಅಜ್ಜಿ ‘ಹಕ್ಕೂ’ ರಂತº ಅದೆಷ್ಟೋ ಚೇತನಗಳು ಇತಿಹಾಸದ ಕಾಲಗರ್ಭದಲ್ಲಿ ‘ನೆಲದ ಮರೆಯ ನಿದಾನ 'ದಂತೆ ಹೆಸರಿಲ್ಲದೇ ಅಪರಿಚಿತರಂತೆ ಗತಿಸಿಹೋಗಿವೆ .ಹಲವು  ತಲೆಮಾರುಗಳೇ ಆಳಿದ'  ಅಖಂಡ ಭಾರತ'ವೆಂಬ  ಬ್ರಿಟಿಷ್ ಸಾಮ್ರಾಜ್ಯದ ತಳಹದಿಯನ್ನು ಕೇವಲ ತನ್ನ ‘ಉಪವಾಸ ಸತ್ಯಾಗ್ರಹ’, ‘ಶಾಂತಿ’, 'ಅಹಿಂಸೆ', ‘ಸತ್ಯ’,ಗಳೆಂಬ ನಿರಾಯುಧಗಳಿಂದಲೇ ಅಭದ್ರಗೊಳಿಸಿದ ಗಾಂಧಿ ಎಂಬ ಬೆಳಕು ,ಜಗತ್ತನ್ನೇ ಬೆಳಗುವ ಪರಂಜ್ಯೋತಿಯಾಗಿ ಇಡೀ ವಿಶ್ವವೇ ಅವರ ಜಯಂತಿಯನ್ನು ‘ಅಹಿಂಸಾ ದಿನ’ ವನ್ನಾಗಿ ಆಚರಿಸುವಷ್ಟು ನಮ್ಮನ್ನು ಆವರಿಸಿಕೊಂಡಿದ್ದಾರೆ.            “ಈ ಸರಳ ಗಾಂಧಿ ಪಂಡಿತನಾಗಿರಲಿಲ್ಲ. ಕಸಗುಡಿಸುತಾ,ಜಗಳವಾಡುತ್ತ ,ಉಪವಾಸ ಬೀಳುತ್ತಾ ಆತ ತನ್ನೊಳಗಿನದನ್ನು ಸ್ವಚ್ಛಗೊಳಿಸಿಕೊಳ್ಳಲು ಪ್ರಯತ್ನಿಸಿದಷ್ಟೂ ಹೊರಗಣವರಿಗೆ ವiಹಾತ್ಮನಾದ ಮರದ ಬೇರು ನೆಲದೊಳಗಿಳಿದಷ್ಟೂ ಅದರ ಹೊರಗಣ ಸೊಬಗು ಹೆಚ್ಚಾಗುತ್ತದೆ.ಹೀಗೆ ಗಾಂಧಿ  ಹೆಮ್ಮರದ ಬೇರುಗಳಂತೆ ಇಳಿದ, ಪ್ರಪಂಚದ ಸಂವೇದನೆಗಳೊಂದಿಗೆ .” ಎಂದು ಮಠಪತಿಯವರು ಗಾಂಧಿಯವರ ವ್ಯಕ್ತಿತ್ವವನ್ನು   ಅನುಷ್ಠಾನಗೊಳಿಸುತ್ತಾರೆ.

"ಏರಿದೇರಿದನೇರಿ ಗಾಳಿಗುದುರೆ ಸವಾರಿ
ಚಂದ್ರಕಿರಣವ ಮೀರಿ ಸೂರ್ಯ ಸೇರಿ
ಬೆಳಕನ್ನೇ ಹಿಂದೊಗೆದು ತಮದ ಬಸಿರನೆ ಬಗೆದು
ಅಸ್ಪರ್ಶ ಅವಕಾಶದಲ್ಲಿ ಇದ್ದ"
         ಎಂಬ ‘ಅಂಬಿಕಾತನಯದತ್ತ’ ರ  ‘ಬುದ್ಧ’ ಕವಿತೆ ‘ದಾಸ್ಯ’ ವೆಂಬ ತಮಂಧದ ಬಸಿರನ್ನೇ ಬಗೆದು ‘ಸ್ವಾತಂತ್ರ್ಯ’ ದ ಜ್ಯೋತಿ ಬೆಳಗಿದ ಗಾಂಧಿ ಎಂಬ ಅರೆ ಬೆತ್ತಲೆ ಫಕೀರನಿಗೂ ಅಷ್ಟೇ ಗಂಭೀರವಾಗಿ ಅನ್ವಯವಾಗುತ್ತದೆ. ಅದಕ್ಕೆ ಬುದ್ಧ ಬಸವ ಗಾಂಧಿ ಒಂದೊಂದು ಯುಗಾಂತರದಲ್ಲಿ ಅವತರಿಸಿಯೂ ಸೃಜನಶೀಲ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಯುದ್ದಭೂಮಿಯಲ್ಲಿಯೂ ಜೀವಕ್ಕಾಗಿ ಬಡಿದಾಡುವ ಒಂದು ಹೂವನ್ನು ಗಮನಿಸುವ ಶಾಂತಿ ಸಹನೆ ಅವರಲ್ಲಿತ್ತು.

     ಗಾಂಧೀಜಿಯವರು ಭಾರತಕ್ಕೆ ಬಿಟ್ಟು ಹೋದ ಮೂಲಶಿಕ್ಷಣದ ಪಳೆಯುಳಿಕೆ ಇಂದು ನಮ್ಮ ದೇಶದಲ್ಲಿ ನೆಲೆಯೂರಿರುವ ಬಹುರಾಷ್ಟೀಯ ಕಂಪೆನಿಗಳ ಕಾರ್ಖಾನೆಗಳಲ್ಲಿ ಕೊಳೆಯುತ್ತಿದೆ.ಗಾಂಧೀಜಿಯವರ ಶಾಂತಿ ಅಹಿಂಸೆ ಗಳು ಜಾತಿ ಧರ್ಮಗಳ ಕೋಮುದಳ್ಳುರಿಯ ಬೆಂಕಿಯಲ್ಲಿ ,  ಸೀಮಾರೇಖೆಯಲ್ಲಿ ಶತ್ರುದೇಶಗಳತ್ತ ಮುಖ ಮಾಡಿ ನಿರಂತರ ಸದ್ದು ಮಾಡುತ್ತಿರುವ  ಬಂದೂಕಿನ ನಳಿಕೆಯ ತುದಿಗಳಲ್ಲಿ ,ಎಂ.ಎಂ.ಕಲಬುರ್ಗಿ ,ಗೌರಿಲಂಕೇಶ ರಂತಹ ವೈಚಾರಿಕ ಕಿಡಿಗಳನ್ನು ಹತ್ಯಗೈಯ್ಯುವ ಪಿಸ್ತೂಲುಗಳ ಗುಂಡುಗಳಲ್ಲಿ ಶೋಧಿಸಬೇಕಾಗಿದೆ .ಗಾಂಧಿಯವರ ಸತ್ಯವನ್ನು ಇಂದಿನ ಬೂಟಾಟಿಕೆಯ ರಾಜಕಾರಣಿಗಳ  ಅಕ್ರಮ ಹಗರಣಗಳಲ್ಲಿ ಸಕಲವನ್ನೂ ತಿಂದು ತೇಗುವ (ಮೇವನ್ನೂ ಸಹ ) ಉಳ್ಳವರ ಹರಿಬಿಡುವ  ಸೀಳು ನಾಲಿಗೆಗಳ ತುದಿಯಲ್ಲಿ ಹುಡುಕಬೇಕಾಗಿರುವುದು  ದುರಂತ.             ಸೂರ್ಯ ಮುಳುಗದ ಸಾಮ್ರಾಜ್ಯವನ್ನೇ ಮುಳುಗಿಸಿದ ಗಾಂಧಿಯವರ ಉಪವಾಸವನ್ನು ಇಂದು ಅನ್ನದಾತನ ನೆಲಬಗೆದು ಜೀವಸೆಲೆ ಕಬಳಿಸುತ್ತಿರುವ ಶ್ರೀಮಂತರ ಹೊಟ್ಟೆ ಬಾಕತನದಲ್ಲಿ ,ಸಾಮಾನ್ಯರ ತೆರಿಗೆ ಹಣ ವನ್ನೇ ಹೊದ್ದು ಸುಖಲೋಲುಪತೆಯಲ್ಲಿ ಮೈ ಮರೆಯುತ್ತಿರುವ ಭ್ರಷ್ಟಾಚಾರಿಗಳ ಹಿಂಗದ ದುರಾಸೆಯ ಬಕಾಸುರರಲ್ಲಿ ಅರಸಬೇಕಾಗಿರುವುದು ನಮ್ಮ ದೌರ್ಭಾಗ್ಯವೇ ಸರಿ.                    “Truth and Ahimsa had been the weapons for achieving Swaraj .Today we have forgotten both Mistaken. I consider it my good luck that god has at last opened my eyes .I regard it now as God’s grace that even if I can do nothing else,I shall now be able  to do or die ,bravely taking the name of god .If Hindus and Muslims  become sincere friends , I will tour the whole India and then Pakistan .”

                         ಎಂದು ಸ್ವರಾಜ್ಯ ಮತ್ತು ಸಾಮರಸ್ಯವನ್ನು ಗಾಂಧಿ ಬದುಕಿದ್ದಾಗಲೇ ಮರೆತಿರುವುದರ ವಿಷಣ್ಣ ಭಾವ ವನ್ನು ಡಾ. ರಾಜಶೇಖರ ಮಠಪತಿಯವರು ಗಾಂಧಿಯವರ ಮಾತುಗಳಲ್ಲೇ ಕಟ್ಟಿಕೊಟ್ಟಿರುವುದು ಪ್ರಸ್ತುತ ಸಂದರ್ಭಕ್ಕೂ ಕೈಗನ್ನಡಿಯಂತಿದೆ.

          “I really do not see why we ,old people ,should continue to live if we are useless .People like me who have grown up to an advanced age feel that if we cannot influence society ,it is better  that we pass on.”             ಎಂಬ ರಾಜಗೋಪಾಲಚಾರಿಯವರ ಈ ಮಾತುಗಳು ಪ್ರಸ್ತುತದಲ್ಲಿ ನಾವು ಎಷ್ಟು ಅರ್ಥಹೀನವಾಗಿ ಬದುಕುತ್ತಿದ್ದೇವೆ ಎಂಬುದನ್ನೂ ಪ್ರತಿಧ್ವನಿಸುತ್ತಿರುವುದು ಎಷ್ಟು ಕಾಕತಾಳೀಯವಲ್ಲವೇ.ಗಾಂಧಿ ಕೊನೆಗಾಲದಲ್ಲಿ ಹೇಳಿದ ಮಾತು ‘ನೀವು ಬದಲಾಗಿ ,ಇಲ್ಲದೇ ಹೋದರೆ ನನಗೆ ಸಾಯಲು ಬಿಡಿ’.ನಾವು ಅವರನ್ನು ಸಾಯಲು ಬಿಟ್ಟಿದ್ದೇವೆ. ನಾಥೂರಾಮ ಗೋಡ್ಸೆ ಗಾಂಧಿಯವರ ದೇಹವನ್ನು ಕೊಂದ, ನಾವಿಂದು ಅವರ ಆತ್ಮವನ್ನು ಕೊಲ್ಲುತ್ತಿದ್ದೇವೆ.ಆತ್ಮಾವಲೋಕನ ಅಗತ್ಯ.


No comments:

Post a Comment

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...