Total Pageviews

Sunday 28 January 2018

ಸ್ಕೌಟ್ ಎಂಬ " ಜೀವನಪಥ "-2

ಸ್ಕೌಟ್ ಎಂಬ " ಜೀವನಪಥ "

                          ೧೯೦೮ ರಲ್ಲಿ "ಸ್ಕೌಟಿಂಗ್ ಫಾರ್ ಬಾಯ್ಸ್" ಪುಸ್ತಕ ಬಿ.ಪಿ. ಯವರಿಂದ ಪ್ರಕಟವಾದಾಗ ಅದರ ಪ್ರತಿಗಳು ದೊರಕಲಾರದಷ್ಟು ಪ್ರಸಿದ್ಧಿಯನ್ನು ಪಡೆಯಿತೆಂದರೆ ಅದರ ಮಹತ್ವ ಜಗತ್ತಿಗೆ ತಿಳಿಯಹತ್ತಿತ್ತು. ಭಾರತದ ಮೊದಲ ಸ್ಕೌಟ್ ದಳ ೧೯೦೯ ರಲ್ಲಿ ಬೆಂಗಳೂರಿನಲ್ಲಿ ಆರಂಭವಾಯಿತು.ಅಲ್ಲಿಂದ ಇಲ್ಲಿಯವರೆಗೆ ಬಹುತೇಕ ಎಲ್ಲ ಶಾಲೆ,ಕಾಲೇಜುಗಳಲ್ಲಿ  ಆಲದ ಮರದ  ಬಾಲ ಹಕ್ಕಿಗಳ ಕಲರವಕ್ಕೆ  ಸ್ಕೌಟ್ ಧ್ವನಿಯಾಗಿದೆ.
 

                               ವಿವೇಕಾನಂದರು ಯುವಶಕ್ತಿಯನ್ನು "ಏಳಿ,  ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ " ಎಂದು ಜಾಗೃತಗೊಳಿಸಲು ತಮ್ಮದೇ ಕೈಂಕರ್ಯ ವನ್ನು ತೊಟ್ಟ ಹಾಗೆ ಬಿ.ಪಿ ರವರು ಬಾಲಕರು ಮತ್ತು ಯುವಕರಿಗೆ ಸೂಕ್ತ ಶಿಸ್ತು ಮತ್ತು ಜೀವನ ದ  ತರಬೇತಿ ನೀಡಬೇಕೆಂದು ಪ್ರತಿಪಾದಿಸಿದರು.ತರಬೇತಿಯಲ್ಲಿ ನಮಗೆ ಪ್ರತಿದಿನ ರಾತ್ರಿ ೮ ಗಂಟೆಗೆ ಶಿಬಿರಾಗ್ನಿ ಕಾರ್ಯಕ್ರಮವಿರುತ್ತಿತ್ತು.ನಾವೆಲ್ಲ ರೋವರ್ ಗಳಾಗಿ ಭಾಗವಹಿಸಿ ,ದಿನವೆಲ್ಲಾ ಚಟುವಟಿಕೆಗಳಿಂದ ದಣಿದ ದೇಹ ಮತ್ತು ಮನಸುಗಳಿಗೆ ಅಗ್ನಿಯ ಸುತ್ತ ಹಾಡಿ ಕುಣಿದು  ಬೆಚ್ಚನೆಯ ಭಾವಗಳೊಂದಿಗೆ ,ಉಲ್ಲಸಿತರಾಗುತ್ತಿದ್ದೆವು.
 

                               ೩೦ ಜನರಿದ್ದ ನಮ್ಮನ್ನು ೪ ತಂಡಗಳಾಗಿ(Pಚಿಣಡಿoಟ) ವಿಭಾಗಿಸಿ  ನಲ್ಲಿ ತಂಡಕ್ಕೊಂದರಂತೆ ನೀಡಿದ ಟೆಂಟ್ ನಲ್ಲಿ ಸೈನಿಕ ಜೀವನ ನಡೆಸಿದ್ದು ,ವಿಶಿಷ್ಟ ಅನುಭವ ನೀಡಿತು.ಮೊದಲೆರಡು ದಿನ ತರಬೇತಿಗೆ ಹೊಂದಿಕೊಳ್ಳುವುದು ನಮ್ಮ ಮರವಾಗಿ ಬೆಳೆದ,  'ಲೌಕಿಕ ವಿಷಯಲೋಲುಪತೆ' ಯಲ್ಲಿ ಮುಳುಗಿದ್ದ  ದೇಹ ಮತ್ತು ಮನಸ್ಸುಗಳಿಗೆ  ಸ್ವಲ್ಪ ಕಷ್ಟವಾದರೂ,"ಅರಿದೊಡೆ ಮೋಕ್ಷ, ಅರಿಯದಿದ್ದೊಡೆ ಬಂಧ " ಎಂಬಂತೆ ಬರಬರುತ್ತಾ ,ಹಾಕಿದ ಪಾತ್ರೆಯ ಆಕಾರ ಪಡೆಯುವ 'ಜಲ 'ದಂತೆ ತರಬೇತಿಯ ನಿಯಮಗಳಿಗೆ ಒಗ್ಗಿಕೊಂಡೆವು.

                                 ಒಂದು ದಿನ  ನಮ್ಮೆಲ್ಲರನ್ನೂ ಹೊರಸಂಚಾರಕ್ಕೆ ನಿಯೋಜಿಸಿದರು .ಅಂದು ದಿ ೨೦-೧-೧೮ ರಂದು ಸಂಜೆ ೪ .೩೦ ಕ್ಕೆ ಊiಞiಟಿg ಹೊರಟ ನಾವು ಮಾರ್ದರ್ಶಕರು ಕೊಟ್ಟ ನಕಾಶೆಯ ಸೂಚನೆಗಳನ್ನಾಧರಿಸಿ ಒಂದು ರಾತ್ರಿ ಕಳೆಯಲು ಬೇಕಾದ ಎಲ್ಲ ಸರಂಜಾಮುಗಳನ್ನು ಹೊತ್ತು, ಕೇಂದ್ರದಿಂದ ಸುಮಾರು ೮ ಕಿ.ಮಿ.ದೂರವಿದ್ದ ನಮ್ಮ ಅಂತಿಮ ಗುರಿಯಾಗಿದ್ದ  ಬನ್ನಿಮಂಗಲ ಹಳ್ಳಿಯ ಆಂಜನೇಯ ದೇವಸ್ಥಾನ ವನ್ನು ಮೂರು ಗಂಟೆಗಳ ನಡಿಗೆಯ ಮೂಲಕ  ಗೆಳೆಯರೊಂದಿಗೆ ನಲಿಯುತ್ತಾ, ಹಾಡುತ್ತಾ, ಪ್ರಕೃತಿಯ ಸಂಜೆಯ ಸೊಬಗನ್ನು ಆಸ್ವಾದಿಸುತ್ತಾ ,ತಲುಪಿದೆವು.

                               
ಅಲ್ಲಿಯ ಹಿರಿಯರೊಬ್ಬರನ್ನು ಸಂಪರ್ಕಿಸಿ ದೇವಸ್ಥಾನದ ಭೋಜನಾಲಯದಲ್ಲಿ ವಸತಿ ಕಲ್ಪಿಸಿಕೊಂಡೆವು.ಅಂದು ರಾತ್ರಿ ೮ ಗಂಟೆಗೆ ದೇವಸ್ಥಾನದ ಹೊರಾವರಣದಲ್ಲಿ ನಡೆದ 'ಶಿಬಿರಾಗ್ನಿ'ಯ ಮಕ್ಕಳಂತೆ   ಹಾಡಿ ಕುಣಿದು ಸಂಭ್ರಮಿಸಿದೆವು.ನಂತರ ನಾವೇ  ಗೆಳೆಯರೊಂದಿಗೆ ಸೇರಿ ತಯಾರಿಸಿದ ಮೃಷ್ಟಾನ್ನವನ್ನು 'ಮಾಡಿದ್ದುಣ್ಣೋ ಮಹಾರಾಯ' ರಂತೆ  ಸವಿದು ಶಯನಗೃಹಕ್ಕೆ ತೆರಳಿದೆವು.ಬೆಳಿಗ್ಗೆ ೬.ಗಂಟೆಗೆ ಎಂದಿನಂತೆ  ಸ್ಕೌಟ್  ಧ್ವಜಾರೋಹಣ ಕಾರ್ಯ ಮುಗಿಸಿ, ದೇವಸ್ಥಾನದ ಆವರಣ ಸ್ವಚ್ಛತೆಯ ಸೇವೆ ಕೈಗೊಂಡು ಮರಳಿ ಗೂಡಿಗೆ ಹೊರಟೆವು.ವ್ಯಕ್ತಿ ಸ್ವಯಂ  ಜೀವನ ಕಟ್ಟಿಕೊಳ್ಳುವಾಗ ಎದುರಾಗುವ ಸವಾಲುಗಳನ್ನು ಪರಿಹರಿಸಿಕೊಳ್ಳುವ ಮಾರ್ಗೋಪಾಯಗಳನ್ನು ಈ ತರಬೇತಿಯಿಂದ ಪ್ರಾಯೋಗಿಕವಾಗಿ ಅನುಭವಿಸಿ  ಪಡೆದುಕೊಂಡದ್ದು ನಮ್ಮ ಹೆಮ್ಮೆ. 

                               ಸುಮಾರು ೧ ತಿಂಗಳು ನಡೆಯಬೇಕಾಗಿದ್ದ ತರಬೇತಿಯನ್ನು ಒಂದು ವಾರಕ್ಕೆ ಇಳಿಸಿರುವುದು ಕಡಲನ್ನು ಬೊಗಸೆಯಲ್ಲಿ ಹಿಡಿಯುವ ಸಾಹಸವೇಕೋ ತಿಳಿಯದು.ನಮ್ಮ ಕೋರ್ಸ ನ ಸ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಎಂ ಗಣಪತಿ ರೋವರ್ ಸ್ಕೌಟ್ ಲೀಡರ್ ರವರ ಕ್ಷಣ ಕ್ಷಣವೂ ನಮ್ಮಂತಹ ಅಧ್ಯಾಪಕರುಗಳನ್ನು ನಿಭಾಯಿಸುವ ಅವರ ತಾಳ್ಮೆ,ಸಮಯಪಾಲನೆ,  ಸಹನಶೀಲತೆ, ತತ್ವಜ್ಞಾನ , ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಮತ್ತೊಬ್ಬ ಸಂಪನ್ಮೂಲ ವ್ಯಕ್ತಿಗಳಾದ    ಶ್ರೀ ಡೇನಿಯಲ್ ಸುಕುಮಾರ್ ರವರ ನೇರ ವಿಷಯ ವಿವೇಚನೆ ಎಲ್ಲರ ಮನಸೆಳೆಯಿತು. ಆದರೆ ಅವರ ಪಕ್ಷಿತಜ್ಞತೆ, ಉರಗಪ್ರೇಮ,ವನ್ಯಜೀವಿಗಳೊಂದಿಗಿನ ಒಡನಾಟದ ಝಲಕುಗಳನ್ನು ಸವಿಯುವ ಅವಕಾಶ ತಪ್ಪಿಹೋಗಿದ್ದು  ಬೇಸರ ತಂದಿತು. ಇನ್ನೋರ್ವ ಮಾರ್ಗದರ್ಶಕ ರಾದ ಶ್ರೀ ಪ್ರತೀಮ್ ಕುಮಾರ್ ರವರ ಮಂಗಳೂರು ಭಾಷೆಯ ಗಮ್ಮತ್ತು, ವಿಶಿಷ್ಟ ನಿರೂಪಣಾ ಶೈಲಿ ನಮ್ಮೆಲ್ಲರ ಮನಸೂರೆಗೊಂಡಿತು.


                             ಸ್ಕೌಟ್ ನ್ನೇ  ಉಸಿರಾಗಿಸಿಕೊಂಡು ತಮ್ಮನ್ನು ಸಮರ್ಪಿಸಿಕೊಂಡಿದ್ದ ೮೫ ರ ಹರೆಯದಲ್ಲೂ ಉತ್ಸಾಹದಿಂದ ಆಗಮಿಸಿದ್ದ ಸ್ಕೌಟ್ ದಂತಕಥೆ ಶ್ರೀ ಟಿ ಎಸ್ ಲೂಕಾಸ್ ರವರ ನುಡಿಮುತ್ತುಗಳನ್ನು ಆಲಿಸುವ ಭಾಗ್ಯ ನಮ್ಮದಾಗಿತ್ತು. ಇಂತಹ ಹಲವಾರು ವ್ಯಕ್ತಿತ್ವಗಳು ಸ್ಕೌಟನ್ನು ಜಗತ್ತಿನಾದ್ಯಂತ ಮುನ್ನಡೆಸುತ್ತಿವೆ. 

                               ಒಟ್ಟಾರೆ ಈ ಏಳು ದಿನಗಳ  ತರಬೇತಿ  ಶಿಸ್ತು,ಸಮಯಪಾಲನೆ,ಸಂಯಮ,ಸದ್ಗುಣಶೀಲತೆ,ಸೇವಾಮನೋಭಾವ,ಭ್ರಾತೃತ್ವ,ವಿಶ್ವಪ್ರೇಮ,ಮುಂತಾದ  ಮೌಲ್ಯಗಳನ್ನು ಯುವವಿದ್ಯಾರ್ಥಿಗಳಲ್ಲಿ ಹೇಗೆ ಪಡೆ ಮೂಡಿಸಬಹುದು ಎಂಬುದನ್ನು  ಸ್ವಯಂವೇದ್ಯವಾಗುವಂತೆ ಮಾಡಿತು..ಮನುಷ್ಯ    ಪೃಕೃತಿಯ ಮಗುವಾಗಿ ಸರಳ ಮತ್ತು ಸಹಜ ಸುಂದರ ಶಿಸ್ತಿನ ಮೌಲ್ಯಯುತ ಸ್ವಯಂ ಜೀವನದ  ಮಾರ್ಗ ದರ್ಶನ ಮಾಡಿಸುವುದು ಸ್ಕೌಟ್ ನ ಪರಮೋದ್ದೇಶ.

No comments:

Post a Comment

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...