Total Pageviews

Monday 16 March 2020

ಗುರು ಕಾಡಸಿದ್ಧೇಶ್ವರರಿಗೆ ಕಾವ್ಯನಮನ
ಓ ಮೌನಯೋಗಿವರನೆ
ನಿನಗಿದೊ ನಮ್ಮ ನಮನ

ಮೌನಕ್ಕೆ ನೀ ಮಾತು ಕಲಿಸಿದೆ
ಜನಕೆ ಮೌನ ಶಾಂತಿ ಬೋಧಿಸಿದೆ
ಮಾರ್ಗದೋರಿ ಶರಣ ಗುರು ಸಂತನಾದೆ
ಕತ್ತಲೆಯ ಕಳೆದು ಬೆಳಕನ್ನು ಹರಿಸಿದೆ

ಜಾತಿ ವಿಜಾತಿ ಎಂದರೇನು ಕೇಳಿದೆ
ಮನೆ‌ ಮನದಲಿ ಜ್ಞಾನದೀಪ ಬೆಳಗಿದೆ 
ಕಾಡಸಿದ್ಧೇಶರಾಗಿ ಭೋಗ ಧಿಕ್ಕರಿಸಿದೆ
ಯೋಗದಿಂದ ಮೌನಯೋಗಿವರನಾದೆ

ಜನರ ಸಂಕಟಗಳೆಲ್ಲವೂ ನಿನ್ನದೆಂದೆ
ಜನಾನುರಾಗಿ ಎನಲು  ಅನ್ವರ್ಥ ನೀನಾದೆ
ವಾತ್ಸಲ್ಯದ ಹೃದಯದಿ ನೀ ತಾಯಿಯಾದೆ
ಸಮಾಜದ ತಲ್ಲಣಕೆ ನೀ ಗುರುಕಾಂತಿಯಾದೆ

ಇಳೆಯು ಜನರ ದಾನವೆಂದು ದೇವರಾದೆ
ಅನ್ನ ನೀರು ಆ ದೇವನ ಭಾಗ್ಯವೆಂದೆ
ಮಡಿಲ ಮಕ್ಕಳಂತೆ‌ ಭಕ್ತರ ಸಲುಹಿದೆ
ಒಡಲು ತೊರೆದು ಭಕ್ತರೊಳಗೆ ಅಮರವಾದೆ

ಜಗದ ಅಂಧಕಾರ ಕಳೆದು ನೀ ಬೆಳಕಾದೆ
ಜನಕಲ್ಯಾಣವೇ ತಪವೆಂದು ಧ್ಯಾನಿಯಾದೆ
ಸ್ಥಾವರದಲಿದ್ದೂ ನಿಜದ ಜಂಗಮನಾದೆ
ಮೌನ ಬಂಗಾರ ಧರಿಸಿ ನಿಜಸಿದ್ದನಾದೆ
   
                                        ಚಂದ್ರಶೇಖರ ಹೆಗಡೆ


No comments:

Post a Comment

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...