Total Pageviews

Sunday 17 December 2017

ಬತ್ತಲಗೆ ಬೆರಗಾಗಬಾರದು




ಓಶೋ:  ಬದುಕು ಬರಹ ಮತ್ತು ಬೆಳಕಿನ ಕಥೆ
ಲೇಖಕರು: ಡಾ|| ರಾಜಶೇಖರ ಮಠಪತಿ (ರಾಗಂ)
ವಿಮರ್ಶೆ : ಚಂದ್ರಶೇಖರ ಹೆಗಡೆ
      ಬತ್ತಲೆ ಬಗ್ಗೆ ಬರೆಯುವುದು, ಓದುವುದು, ಮಾತನಾಡುವುದೇ ಒಂದು ಅಪರಾಧ ಎಂಬಂತಿರುವಾಗ ಸಮಾಜದಲ್ಲಿ ಸಂಚಲನ ಮೂಡಿಸಿದಬತ್ತಲೆಎಂಬ ಬೆರಗಿನ ಕುರಿತ ಕೃತಿ ವೈಚಾರಿಕ ಜೀವನಕ್ಕೆ ರೂಪಕದಂತಿದೆ.
       ಅಕ್ಕಮಹಾದೇವಿ, ತೀರ್ಥಕಂರರು, ವೇಮನರಂಥ ಬತ್ತಲೆಯ ಮಹಾಕಿರಣಗಳ ದರ್ಶನಕ್ಕೊಳಪಟ್ಟ ನಮ್ಮ ನಾಡು, ‘ಬತ್ತಲೆ'ಗೂ ಆಧ್ಯಾತ್ಮಿಕತೆಯ ಪರಂಪರೆಯನ್ನು ನೀಡಿದೆ. ‘ಬತ್ತಲೆ ನಾಡಲ್ಲಿ  ಬೆರಗಲ್ಲ ಅದೊಂದು ಒಳಹೊರಗಣ ಹಂಗು ಹರಿದವರ ಮಹಾಪ್ರಭೆ. ಶೂನ್ಯವಾಗಿದ್ದುಕೊಂಡು ಅನಂತವನ್ನು ಸಾಧಿಸುವ, ಬಯಲಾಗಿದ್ದು ಅನಂತಶಕ್ತಿ ಎಂದು ಬತ್ತಲನ್ನು ಬೆಳಕಾಗಿಸಿದ್ದಾರೆ ಲೇಖಕರು. (ರಾಗಂ)
 “ಭಿಕ್ಷೆಯುಂಡು, ಬಯಲ ಬೈರಾಗಿಗಳಾಗಿ ಅಂಡಲೆಯುವ  ಸಾಧಕರು ಲೌಕಿಕ ಭಾರತದಲ್ಲಿ ನೀವು ನಿರುಪಯುಕ್ತ ಎಂದುಕೊಂಡ ಮರುಕ್ಷಣ ದೇಶದ ಆತ್ಮ ಸತ್ತಿತು ಎಂಬುದನ್ನು ಮರೆಯಬೇಡಿ.”
ಎಂಬ ರಜನೀಶರ ಎಚ್ಚರಿಕೆ, ನಾವು ಅಲಕಿóಸಿರುವ ಪರಂಪರೆಯನ್ನು ಗೌರವಿಸಬೇಕಾದ ಎಚ್ಚರವನ್ನು ನಮ್ಮಲ್ಲಿ ಜಾಗೃತಗೊಳಿಸುವಂತೆ ಮಾಡುತ್ತದೆ.

      ಎಲ್ಲಿ ವಿಚಾರವಿದೆಯೋ ಅಲ್ಲಿವಿದ್ರೋಹ ಬೀಜವಿರುವುದು. ವಿಚಾರ ಮೂಲತಃ ವಿದ್ರೋಹಿಎಂಬ ರಜನೀಶರ ಹೊಸ ಮೌಲ್ಯಗಳ ಹಸಿವನ್ನು ಅನುಭವಕ್ಕೆ ತರುವ ಪುಸ್ತಕದ ಆರಂಭಿಕ ಸಾಲುಗಳು ನಮ್ಮನ್ನುಬತ್ತಲಜಗತ್ತಿಗೆ ಕೈ ಬೀಸಿ ಕರೆಯುತ್ತವೆ. ಮುಂದುವರಿದು

             ಯಾರಲ್ಲಿ ವಿದ್ರೋಹದ ಬೆಂಕಿಯಲ್ಲವೋ ಅವರು ಗೊತ್ತಿದ್ದೋ
              ಗೊತ್ತಿಲ್ಲದೆಯೋ, ಯಾವುದೇ ಸ್ವಾರ್ಥದ _ _ _ _ _ _ _
              _ _ _ _ _ _ _ _ _ ದಲ್ಲಾಳಿಯಾಗಿದೆಯೇ ತೀರುವರು

ಎಂಬ ಓಶೋ ಸಾಲುಗಳಲ್ಲಿ ಲೇಖಕರು ಬಳಸುವವಿದ್ರೋಹಎಂಬ ಪದ ಅರ್ಥಹೀನ ಮೌಢ್ಯದ ಸಾಂಪ್ರದಾಯಿಕ ಮೌಲ್ಯಗಳ ವಿರುದ್ದದ ಕ್ರಾಂತಿಗೆ ಪರಿಭಾಷೆಯಾಗಿ ಮೂಡಿಬಂದಿರುವುದು ಇಲ್ಲಿ ವಿಶಿಷ್ಟವಾಗಿದೆ. ಅಂಥ ವಿದ್ರೋಹದ ಬೆಂಕಿ 12 ನೇ ಶತಮಾನದಲ್ಲಿ ಶರಣರ ಎದೆಗಳಲ್ಲಿ ಉರಿದಿದ್ದರಿಂದಲೇಕಲ್ಯಾಣ ಕ್ರಾಂತಿ’ Éಯಾಗಿಸಮಾನತೆ’, ‘ಸರ್ವೋದಯಗಳ ಹೊಸದರ ಸೃಷ್ಠಿಗೆ ಮುನ್ನುಡಿಯಾಯಿತು ಎಂಬುದನ್ನಲ್ಲಿ ನಿದರ್ಶಿಸಬಹುದು.

                ‘‘ನೀನು ಗೋಚರ, ಅಂತೆಯೇ ಬೈಚಿಟ್ಟುಕೊಂಡ ರಹಸ್ಯ
              ನೀನು ಕುತೂಹಲ, ಅಂತೆಯೇ ಬಿಡಿಸಲಾಗದ ಕಗ್ಗಂಟು
       ನೀನು ಕಂದೀಲಿನಗೊಳಗಿನ ಮೊಂಬತ್ತಿ, ನಿನ್ನ ಪ್ರಭೆ ನಿನಗೆ ಮಾತ್ರ
         ನೀನೆಂದರೆ ಬಟ್ಟೆಗಳ ರಾಶಿ, ಹೀಗಾಗಿಯೇ ನೀನೊಂದು    
                                ಮಹಾನಗ್ನತೆ’’                
                                                  
          ಹೀಗೆಮಹಾನಗ್ನತೆ ಆರಾಧಕನಾದ, ಭಾರತದ ಬತ್ತಲೆಯ ಆಧ್ಯಾತ್ಮ ಪರಂಪರೆಯ ಮತ್ತೊಂದು ಕಿರಣವಾದ, ಪರ್ಷಿಯನ್ ಭಾಷೆಯಲ್ಲಿ 300 ರಷ್ಟು ರಬಾಯಿಗಳನ್ನು ಬರೆದೂ, ನಾಗರಿಕ ಸಮಾಜದಿಂದ ತಿರಸ್ಕರಿಸಲ್ಪಟ್ಟ ಬತ್ತಲೆ ಸಂತಮೊಹಮ್ಮದ್ ಸರ್ಮದ್ ಖಶಾನಿ’ 17ನೇ ಶತಮಾನದಲ್ಲಿ ಬದುಕಿ, ಗಮ್ಮತ್ತೇ ಗೊತ್ತಿರದ ಶೆರೆ ತುಂಬಿದ ಬಾಟಲಿಯಂತೆ, ಅರಿವಿಲ್ಲದ ಮನುಷ್ಯನಿಗೆ ನಗ್ನತೆ, ಪ್ರೇಮ, ಸಾವುಗಳು ಅವನ ಅರಿವಾಗಿರಬೇಕು ಎಂದು ಬಯಸಿದ. ಹೀಗೆ ಸರ್ಮದ್ರಂತಹ ಕಿರಣಗಳ ನಿದರ್ಶನದ ಮೂಲಕ ಲೇಖಕರು ನಮ್ಮ ದೇಶದ ಬತ್ತಲೆಯ ಆಧ್ಯಾತ್ಮಿಕ ಪರಂಪರೆಯನ್ನು ನಮಗೆ ಕಟ್ಟಿಕೊಡುತ್ತಾರೆ. ಪರಂಪರೆಯ ಮುಂದುವರಿದ ಬೆಳಕಿನ ಕಿರಣವಾಗಿ ಓಶೋರನ್ನು ದಿಗ್ದರ್ಶಿಸಬೇಕೆನ್ನುತ್ತಾರೆ.

                    ‘‘ದಿಗಂಬರವೇ ದಿವ್ಯಾಂಬರ ಎನಗೆ
                     ದಿಗಂಬರಿಯಾದಡೇನಯ್ಯ ಮನ ಬತ್ತಲೆಯಿರಬೇಕು.”

        ಅಕ್ಕನ ಸಾಲುಗಳನ್ನು ಉಲ್ಲೇಖಿಸುತ್ತಾ ಹೇಗೆ ಕಾಮ, ಬತ್ತಲೆಗಳು ನಮ್ಮ ಸಂಸ್ಕøತಿಯಲ್ಲಿ  ಆಧ್ಯಾತ್ಮ ಸಾಧನೆಯ  ತತ್ವವಾಗಿವೆ  ಎಂಬುದನ್ನು ವಿವೇಚಿಸುತ್ತಾರೆ.
               
             ರವಿ ಕಾಣದ್ದನ್ನು ಕವಿ ಕಂಡ, ಕವಿಯೂ ಕಾಣದ್ದನ್ನು ರಜನೀಶರು ಕಂಡರು. ‘ಕಾಮವನ್ನುಸಮಾಧಿ ಮಟ್ಟಕ್ಕೇರಿಸಿದಾಗಲೇ ಇವರು ಜಗತ್ತಿನ ಬಹುಪಾಲು ಜನರಿಗೆ ಬೇಡವಾದರು, ನಮ್ಮೊಳಗೇ ಇರುವಕಾಮವನ್ನುಮೈಲಿಗೆ’ ಯೆಂದು ದೂರವಿಟ್ಟು ಅಕ್ಕನ ತೆರಣಿಯ ಹುಳುವಿನಂತೆ ನಮ್ಮದೇ ಒಳಸುಳಿಗಳಲ್ಲಿ ಬದುಕುತ್ತಿರುವ ನಮಗೆ ರಜನೀಶರಮುಕ್ತತೆಹೇಗೆ ತಾನೇ ಅರಗಿಸಿಕೊಳ್ಳಲಾದೀತು? ಎಂಬ ಸ್ವಾತ್ಮ ವಿಮರ್ಶೆಗೆ ಲೇಖಕರು ನಮ್ಮನ್ನು ತೊಡಗಿಸುತ್ತಾರೆ.

        ದಾರ್ಶನಿಕರೇ ಹಾಗೆ, ಬದುಕಿದ್ದಾಗ ಹಿತ್ತಿಲ ಮದ್ದುಗಳು. ಸಾಕ್ರಟೆಸ್ ಸತ್ಯವನ್ನು ಹೇಳಿಯೂ ದಾರುಣವಾಗಿ ಕೊಲ್ಲಲ್ಪಟ್ಟ. ಹಾಗೆಂದು ಅವರಾರು ಸಾಯಲಿಲ್ಲ. ಬದಲಾಗಿ ನಮ್ಮೊಳಗೆ ಇಂತಹ ಕೃತಿಗಳ ಮೂಲಕ ಅರ್ಥಪೂರ್ಣವಾಗಿ ಬದುಕುತ್ತಿದ್ದಾರೆ. ಲೇಖಕರು ಪುಣೆಯ ರಜನೀಶಧಾಮಕ್ಕಕೆ ಭೇಟಿ ಕೊಟ್ಟಾಗಿನ ನೆನಪುಗಳ ಪುಳಕವನ್ನು ಹಂಚುತ್ತಾರೆ.

        ಮನುಷ್ಯನ ವೈವಿಧ್ಯಮಯ ಮುಖವಾಡಗಳನ್ನು ಕಳಚಿಸತ್ಯಹಾಗೂಮೌನ ದರ್ಶನ ಮಾಡಿಸಿದವರು ಓಶೋ. ಅವರು ವೇದಾಂತಿ, ಯೋಗಿ, ಫಾದರ್, ಪ್ರವಾದಿ, ಸ್ವಾಮಿ ಆಗದೇ ತಾನೊಬ್ಬ ವಿದ್ರೋಹಿ, ಅನ್ವೇಷಕ ಅಥವಾ ಬಯಲುಗಳ ಮಧ್ಯ ನಿಂತ ಮನುಷ್ಯನಾಗಬೇಕೆಂದು ಬಯಸಿದರು, ಅದರಂತೆ ಬದುಕಿದರು. ಎಂಬ ಅವರ ಕುರಿತಾದ ಸತ್ಯ ದರ್ಶನವನ್ನು ಲೇಖಕರು ನಮಗೆ ಕೃತಿಯ ಮೂಲಕ ಯಶಸ್ವಿಯಾಗಿ ಮಾಡಿಸುತ್ತಾರೆ.


         ಶುದ್ದಭಾವ ಹಾಗೂ ನಿರ್ಮಲ ಹೃದಯದಿಂದ ಓದಿದಾಗ ಓಶೋ ಇಷ್ಟವಾಗುತ್ತಾರೆ. ಕೃತಿ ಓಶೋ ಬಗೆಗಿನ ನಮ್ಮ  ಅಜ್ಞಾನದ ಪೊರೆಯನ್ನು ಕಳಚಿ ಪ್ರಖರ ಬೆಳಕಿನ ಸೂರ್ಯನೊಬ್ಬನನ್ನು ದರ್ಶನ ಮಾಡಿಸುತ್ತದೆ. ನಮ್ಮ ಅಂತರಂಗದ ಮಲಿನವನ್ನು ಕಳೆಯುತ್ತದೆ. ಅರಿವನ್ನು ಧ್ಯಾನದ ಮಟ್ಟಕ್ಕೇರಿಸುತ್ತದೆ. ಜ್ಞಾನದ ಬೆಳಕು ನೀಡಿದ ಕೃತಿಗೆ ಕರ್ತೃವಿಗೆ ಅನಂತ ಅಭಿನಂದನೆಗಳು.

No comments:

Post a Comment

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...