Total Pageviews

Saturday 13 October 2018

"ಶೀಲಾಗ್ನಿ"

"ಶೀಲಾಗ್ನಿ"

ಬೆತ್ತಲಾದವು ದೊಡ್ಡವರ
ಹೆಬ್ಬಯಕೆಗಳು!
ಕಳಚಿದವು ಧೀಮಂತರ
ಮುಖವಾಡಗಳು!
ಕ್ರಾಂತಿಯನೆಬ್ಬಿಸಿದೆ 
ಜಗದಲಿ ಮೀ ಟೂ
ಹೊರಬೀಳುತಿವೆ
ಎಲ್ಲೆಲ್ಲೋ ನಡೆದ ಮೀಟು
ಬೀಳುತಿವೆ ಖ್ಯಾತರಿಗೆ 
ಏಟಿನ ಮೇಲೇಟು
ಕೇಳಲೆಷ್ಟು ಘೋರವದು
'ಕಲೆಗಾಗಿ ಪಲ್ಲಂಗ'
ಮಾಡದಿರು ಓ ಮನುಜ
ಸೀಮೋಲ್ಲಂಘನ
ಜಾರುತಿವೆ ನಾರುತಿವೆ
ಲಯ ತಪ್ಪಿದ ಹೆಜ್ಜೆಗಳು
ಹಿಂಸಿಸುತಿವೆ ಗತಕಾಲದ 
ದೌರ್ಜನ್ಯದ ಬಾಹುಗಳು
ಇರಿಯುತಿವೆ ಅವಿತು ಹೂತು
ಹೋದ  ಮಾನಭಂಗಗಳು
ಸಾಕೆನಿಸಿದೆ ಕಾಲಗರ್ಭಕೆ
ಹೊತ್ತು ಹೆತ್ತು ಮುಚ್ಚಿ ಸಾಕಿ
ಎದ್ದಿದೆ ಧೂಳು ಕೊಡವಿ
ಅಕ್ಷೋಹಿಣಿ ಮಹಾಸೈನ್ಯ
ಕಾಯುತಿದೆ ಆಕ್ರೋಶದಿ
ಯಾರದಿದೆಯೊ ಬಲಿ ಸರದಿ
ರಣರಂಗದಿ ಬೆಂಕಿಯುಗುಳಿ
ಉರಿಯುತಿದೆ ಧಗಧಗಿಸಿ
ಮನದೊಳಗಣ ಆರದ ಬೆಂಕಿ!
ಕುಣಿಯುತಿದೆ ಶಸ್ತ್ರ ಹಿಡಿದು
ಚಂಡಿಯಂತೆ ಬಲೆ ಬೀಸಿ
ಚಾಮುಂಡಿಯಂತೆ ನೆತ್ತರು
ಶೀಲ ತ್ರಿಶೂಲ ಹಿಡಿದು
ಇನ್ನಾದರೂ ಸಿಗಲಿ ಮುಕ್ತಿ 
ನೊಂದು ಬೆಂದ ನೋವುಗಳಿಗೆ
ಮುದುಡಿಹೋದ ಆಕ್ರಂದನಗಳಿಗೆ
ಎಷ್ಟೋ ಅಹಲ್ಯೆಯರ
ಬೇಯುತಿರುವ ಹೃದಯಗಳಿಗೆ...


8 comments:

  1. ತುಂಬಾ ಅರ್ಥಗರ್ಭಿತ ವಾಗಿದೆ.

    ReplyDelete
  2. ಶಿಲಾಗ್ನಿ.ಚೆನ್ನಾಗಿದೆ ಅಣ್ಣ.

    ReplyDelete
  3. ಅದ್ಭುತವಾದ ಕವಿತೆ ಹೆಗಡೆಯವರೇ,ಅದೇನು ಪದಪುಂಜಗಳು!
    ಮೀಟುವಿನ ಸಶಕ್ತ ಅಭಿವ್ಯಕ್ತಿಯಾಗಿದೆ.ಕವಿತೆ ಓಘ ಕಲ್ಕಿ ಕವಿತೆಯನ್ನು ನೆನಪಿಗೆ ತಂದಿತು.

    ReplyDelete

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...