Total Pageviews

Thursday 17 November 2022

ದಿಗಂಬರವೇ ದಿವ್ಯಾಂಬರ



ಪಂಪ ರನ್ನ ಜನ್ನರು ಸಾಕು ಅರಿವುದು ಸೌಜನ್ಯ
ಕೋಟಿ ಜೀವರಾಶಿಗಳ ಜಗದಲ್ಲಿ ಮನುಷ್ಯನೇ ವಿಶ್ವಮಾನ್ಯ
 ಸಾವಿರ ಗ್ಯಾಲಕ್ಸಿಗಳ ಬ್ರಹ್ಮಾಂಡದಲ್ಲಿ ನಾವು ತೃಣ ಸಾಮಾನ್ಯ
ನ್ಯಾಯದ ಗುಡಿಯಿದು ಪರಿಮಳದ ಶ್ರೀಗಂಧದ ಅರಣ್ಯ

ಕೋಮಲವಾಗಿ ಬಳುಕುವ ಬಿಳಿಯಿರುವುದೆಲ್ಲವೂ ಹಾಲಲ್ಲ 
ಎಂದರಂದು ಕುವೆಂಪು ಸಚಿವ ಮಂಡಲವೆಂದೂ ಶಾಶ್ವತವಲ್ಲ
ನಂಬದಿರಿ ಕಿವಿ ಕಚ್ಚಿ ಹಾಡುವ ಹಾಲುಗಲ್ಲ
ಎದುರಾಗುವವರೆಲ್ಲರೂ ಬಾಗುವ ಸಣ್ಣತನಗಳ ಜಾಳಲ್ಲ

ತಲ್ಲಣಿಸದಿರು ಕಂಡ್ಯ ತಾಳು ಮನವೆಂದರು ದಾಸರು
ಹೊರಡುವ ಹಾದಿಯೊಂದೇ ನಾವು ಭಗವಂತನ ದಾಸರು
ಭುವನ ಗೆದ್ದ ತಥಾಗತನಿಗೆ ಹೆಸರು ಮಂದಹಾಸರು
ಕಾಯಕವೇ ಕೈಲಾಸ ಬೇಕೆ ಹಂಗಿನರಮನೆಯ ಹೆಸರು ?

ವಿಚಾರಿಸಿದರೆ ತಪ್ಪು ಒಪ್ಪುಗಳ ಪ್ರಶ್ನೆ  ಅನಂತ
ಆರಾಧಿಸಿದರೆ ಸಾಕು ಸರಸ್ವತಿಯ  ಏಕಾಂತ
ದಿಗಂಬರವೇ ದಿವ್ಯಾಂಬರ ಅಕ್ಕಮಹಾದೇವಿಯ ಪಂಥ
ತಿದ್ದಿ ಬೆಳಕಾಗಬೇಕೆನ್ನುವುದೇ ಭುವನದ ಮನುಜ ಮತ

No comments:

Post a Comment

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...