Total Pageviews
Sunday, 28 January 2018
ಸ್ಕೌಟ್ ಎಂಬ " ಜೀವನಪಥ "-2
ಸ್ಕೌಟ್ ಎಂಬ " ಜೀವನಪಥ "
ಒಂದು ದಿನ ನಮ್ಮೆಲ್ಲರನ್ನೂ ಹೊರಸಂಚಾರಕ್ಕೆ ನಿಯೋಜಿಸಿದರು .ಅಂದು ದಿ ೨೦-೧-೧೮ ರಂದು ಸಂಜೆ ೪ .೩೦ ಕ್ಕೆ ಊiಞiಟಿg ಹೊರಟ ನಾವು ಮಾರ್ದರ್ಶಕರು ಕೊಟ್ಟ ನಕಾಶೆಯ ಸೂಚನೆಗಳನ್ನಾಧರಿಸಿ ಒಂದು ರಾತ್ರಿ ಕಳೆಯಲು ಬೇಕಾದ ಎಲ್ಲ ಸರಂಜಾಮುಗಳನ್ನು ಹೊತ್ತು, ಕೇಂದ್ರದಿಂದ ಸುಮಾರು ೮ ಕಿ.ಮಿ.ದೂರವಿದ್ದ ನಮ್ಮ ಅಂತಿಮ ಗುರಿಯಾಗಿದ್ದ ಬನ್ನಿಮಂಗಲ ಹಳ್ಳಿಯ ಆಂಜನೇಯ ದೇವಸ್ಥಾನ ವನ್ನು ಮೂರು ಗಂಟೆಗಳ ನಡಿಗೆಯ ಮೂಲಕ ಗೆಳೆಯರೊಂದಿಗೆ ನಲಿಯುತ್ತಾ, ಹಾಡುತ್ತಾ, ಪ್ರಕೃತಿಯ ಸಂಜೆಯ ಸೊಬಗನ್ನು ಆಸ್ವಾದಿಸುತ್ತಾ ,ತಲುಪಿದೆವು.
ಸುಮಾರು ೧ ತಿಂಗಳು ನಡೆಯಬೇಕಾಗಿದ್ದ ತರಬೇತಿಯನ್ನು ಒಂದು ವಾರಕ್ಕೆ ಇಳಿಸಿರುವುದು ಕಡಲನ್ನು ಬೊಗಸೆಯಲ್ಲಿ ಹಿಡಿಯುವ ಸಾಹಸವೇಕೋ ತಿಳಿಯದು.ನಮ್ಮ ಕೋರ್ಸ ನ ಸ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಎಂ ಗಣಪತಿ ರೋವರ್ ಸ್ಕೌಟ್ ಲೀಡರ್ ರವರ ಕ್ಷಣ ಕ್ಷಣವೂ ನಮ್ಮಂತಹ ಅಧ್ಯಾಪಕರುಗಳನ್ನು ನಿಭಾಯಿಸುವ ಅವರ ತಾಳ್ಮೆ,ಸಮಯಪಾಲನೆ, ಸಹನಶೀಲತೆ, ತತ್ವಜ್ಞಾನ , ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಮತ್ತೊಬ್ಬ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಡೇನಿಯಲ್ ಸುಕುಮಾರ್ ರವರ ನೇರ ವಿಷಯ ವಿವೇಚನೆ ಎಲ್ಲರ ಮನಸೆಳೆಯಿತು. ಆದರೆ ಅವರ ಪಕ್ಷಿತಜ್ಞತೆ, ಉರಗಪ್ರೇಮ,ವನ್ಯಜೀವಿಗಳೊಂದಿಗಿನ ಒಡನಾಟದ ಝಲಕುಗಳನ್ನು ಸವಿಯುವ ಅವಕಾಶ ತಪ್ಪಿಹೋಗಿದ್ದು ಬೇಸರ ತಂದಿತು. ಇನ್ನೋರ್ವ ಮಾರ್ಗದರ್ಶಕ ರಾದ ಶ್ರೀ ಪ್ರತೀಮ್ ಕುಮಾರ್ ರವರ ಮಂಗಳೂರು ಭಾಷೆಯ ಗಮ್ಮತ್ತು, ವಿಶಿಷ್ಟ ನಿರೂಪಣಾ ಶೈಲಿ ನಮ್ಮೆಲ್ಲರ ಮನಸೂರೆಗೊಂಡಿತು.
ಒಟ್ಟಾರೆ ಈ ಏಳು ದಿನಗಳ ತರಬೇತಿ ಶಿಸ್ತು,ಸಮಯಪಾಲನೆ,ಸಂಯಮ,ಸದ್ಗುಣಶೀಲತೆ,ಸೇವಾಮನೋಭಾವ,ಭ್ರಾತೃತ್ವ,ವಿಶ್ವಪ್ರೇಮ,ಮುಂತಾದ ಮೌಲ್ಯಗಳನ್ನು ಯುವವಿದ್ಯಾರ್ಥಿಗಳಲ್ಲಿ ಹೇಗೆ ಪಡೆ ಮೂಡಿಸಬಹುದು ಎಂಬುದನ್ನು ಸ್ವಯಂವೇದ್ಯವಾಗುವಂತೆ ಮಾಡಿತು..ಮನುಷ್ಯ ಪೃಕೃತಿಯ ಮಗುವಾಗಿ ಸರಳ ಮತ್ತು ಸಹಜ ಸುಂದರ ಶಿಸ್ತಿನ ಮೌಲ್ಯಯುತ ಸ್ವಯಂ ಜೀವನದ ಮಾರ್ಗ ದರ್ಶನ ಮಾಡಿಸುವುದು ಸ್ಕೌಟ್ ನ ಪರಮೋದ್ದೇಶ.
Subscribe to:
Post Comments (Atom)
ಚಹಾ ಮತ್ತು ನಾನು
ಚಹಾ ಮತ್ತು ನಾನು ದೂರವಾಗು ಎಂದರೆ ನಮ್ಮಿಬ್ಬರಿಗೂ ಸಾಧ್ಯವೇ ಪ್ರಿಯೆ ಪ್ರಾಣದಿಂದ ಬೇರೆಯಾದವರುಂಟೆ? ಕಾಣುವುದಿಲ್ಲ ಛಾಯೆ ಆತ್ಮದಿಂದ ಹೊರನಡೆದವರುಂಟೆ ? ನೀನೊಂದು ಮಾಯೆ ರಸ...
-
ಕುಲದ ನೆಲೆಯನರಸುತ್ತಾ.... ನಮ್ಮ ನಾಡಿನ ಖ್ಯಾತ ಸಾಹಿತಿಗಳು, ಚಿಂತಕರಾದ ಡಾ.ಗುರುಲಿಂಗ ಕಾಪಸೆ ಯವರು " ಪಂಪ ರನ್ನ ರಂತಹ ವ...
-
ಚಹಾ ಮತ್ತು ನಾನು ದೂರವಾಗು ಎಂದರೆ ನಮ್ಮಿಬ್ಬರಿಗೂ ಸಾಧ್ಯವೇ ಪ್ರಿಯೆ ಪ್ರಾಣದಿಂದ ಬೇರೆಯಾದವರುಂಟೆ? ಕಾಣುವುದಿಲ್ಲ ಛಾಯೆ ಆತ್ಮದಿಂದ ಹೊರನಡೆದವರುಂಟೆ ? ನೀನೊಂದು ಮಾಯೆ ರಸ...
-
ಭಾವಯಾನ 'ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ| ಎಳ್ಳು ಜೀರಿಗೆ ಬೆಳೆಯೋಳ |ಭೂಮಿತಾಯಿ ಎದ್ದೊಂದು ಘಳಿಗೆ ನೆನೆದೇನ' ಎಂದು ಹಾಡುವ ಜನಪದರು ಬೆಳಗಾಗೆದ...








No comments:
Post a Comment