Total Pageviews
Sunday, 4 August 2019
ಚಹಾಯಣ
ಕಲಿಯುಗದ ಅಮೃತವೆಂದೇ ಪೆಸರ್ವಡೆದಿರುವ 'ಚಹಾ' ಸೇವನೆಯನ್ನು ನನ್ನ ಜೀವನದುದ್ದಕ್ಕೂ ಸಂಭ್ರಮದ ಸ್ವರ್ಗಸುಖದ ಘಳಿಗೆಗಳೆಂದು ಆಚರಿಸುತ್ತಾ ಬಂದಿರುವುದು ನನ್ನ ವ್ಯಕ್ತಿತ್ವದ ಹೆಗ್ಗಳಿಕೆಗಳಲ್ಲಿ ಒಂದು!!. ಸೂರ್ಯೋದಯದ ಹೊಂಗಿರಣಗಳು ಭುವಿಯನ್ನು ತಬ್ಬಿ ಮೈಮರೆಯುವುದಕ್ಕಿಂತ ಮೊದಲೇ
ಚಹಾ ಜಗತ್ತಿನ ಅದ್ವಿತೀಯ ರಸಾಯನಗಳಲ್ಲಿ ಒಂದು. ಆಧುನಿಕ ಜಗತ್ತಿನ ಬೆಡಗಿನ ಒಯ್ಯಾರಿಯ ಸೆಳೆತಕ್ಕೆ ಸಿಕ್ಕ ಚಹಾರಾಣಿ ಗ್ರೀನ್ ಟೀ ಎಂಬ ಹೊಸ ದಿರಿಸು ತೊಟ್ಟು ಕುಣಿಯುತ್ತಿದ್ದಾಳೆ. ಶುಂಠಿಯ ಕಷಾಯ, ಹೊನ್ನಂಬರಿ ಹೂಗಳ ಕಷಾಯ, ತುಳಸಿ ಕಷಾಯ, ಬೆಲ್ಲದ ಕಷಾಯ, ದಂತಹ ತರಹೇವಾರಿ ರೂಪಗಳನ್ನು ಹೊಂದಿರುವ ಈಕೆಯ ಬಿನ್ನಾಣಕ್ಕೆ ವೈದ್ಯಕೀಯ ಮಹಾಪರಂಪರೆಯ ಸೊಗಡಿದೆ.
ಮನೆಮದ್ದುಗಳಿಗೆಲ್ಲ ರಸರಾಣಿಯಾಗಿರುವ ಇವಳ ಸೌಗಂಧವೇ ಹಲವಾರು ಆಗಾಗ್ಗೆ ಬಂದುಹೋಗುವ ಅತಿಥಿ ರೋಗಗಳನ್ನು ಗುಣಪಡಿಸಬಲ್ಲ ರಸೌಷಧಿ. ಶೀತವಾದಾಗ ನನ್ನವ್ವನ ಕೈಯ್ಯಲ್ಲಿ ಶುಂಠಿಯ ಕಷಾಯವಾಗುವ ಇವಳ ಘಾಟುತನ, ದೇಹ ಉಷ್ಣದಿಂದ ಬಳಲಿದಾಗ ಬೆಲ್ಲದ ಕಷಾಯವಾಗಿ ರೂಪು ಪಡೆಯುವ ಇವಳ ಮಾಧುರ್ಯ, ತಲೆನೋವೆನಿಸಿದಾಗ ಹೊನ್ನಂಬರಿ ಹೂಗಳ ಕಷಾಯದ ರೂಪದಲ್ಲಿ ನಾಲಿಗೆಯನ್ನಾವರಿಸುವ ಸವಿ, ಅಲರ್ಜಿಯಾದಾಗ ಮಸಾಲೆಯ ಕಷಾಯವಾಗಿ ಬರುವ ಇವಳ ಮಸಾಲೆಯ ಕಂಪುಗಳೀಗಲೂ ನನ್ನ ನಾಲಿಗೆಯ ರಸಗ್ರಹಣಿಗಳ ತುದಿಯ ಮೇಲೆ ಕುಣಿಯುತ್ತಿವೆ. ಮನದ ಮೂಲೆಯಲ್ಲಿ ಇವುಗಳ ಆಸ್ವಾದನೆಯ ಸುವಾಸನೆ ಹಾಗೂ ರಸರುಚಿ ಸದಾ ಹಚ್ಚ ಹಸಿರಾಗಿ ಕಾಡುತ್ತಲೇ ಇರುತ್ತವೆ. ಚಹಾ ಸಿಗದ ನಾಡಿಗೊಮ್ಮೆ ಪ್ರವಾಸ ಹೋಗಿದ್ದೆ. ಕೆಲವು ದೂರ ನಡೆದು ಎದುರಾದ ಗೂಡಂಗಡಿಗೆ ಗೆಳೆಯರೊಂದಿಗೆ ತೆರಳಿ " ಚಹಾ ಕೊಡಿ " ಎಂದರೆ " ಚಹಾ ಮಾಡಲ್ಲ ಸರ್ " ಎಂದುಬಿಡಬೇಕೆ? ಸುಮಾರು ಊರುಬಿಟ್ಟು ೩೦೦ ಕಿಲೋಮೀಟರ್ ದೂರದೂರು ತಲುಪಿದ ಪ್ರಯಾಣದ ಆಯಾಸವನ್ನು ಕಳೆದುಕೊಳ್ಳಬೇಕೆಂದರೆ ಚಹಾರಾಣಿಯ ಸುಳಿವೇ ನಮಗೆ ದಕ್ಕಲಿಲ್ಲ ಸಪ್ಪೆ ಮೋರೆ ಹಾಕಿಕೊಂಡು ಮತ್ತೆ ಮುಂದೆ ನಡೆದೆವು. ಆ ಊರು ಬಿಟ್ಟು ಬೇರೊಂದು ಊರಿಗೆ ಬಂದಾಗ ಓಯಸಿಸ್ ನಂತೆ ಎದುರಾದ ಚಹಾಕನ್ನಿಕೆಯ ಆಲಿಂಗನದಿಂದ ಮುದ ಪಡೆದು ಚೈತನ್ಯಶೀಲರಾದೆವು.
Subscribe to:
Post Comments (Atom)
ಚಹಾ ಮತ್ತು ನಾನು
ಚಹಾ ಮತ್ತು ನಾನು ದೂರವಾಗು ಎಂದರೆ ನಮ್ಮಿಬ್ಬರಿಗೂ ಸಾಧ್ಯವೇ ಪ್ರಿಯೆ ಪ್ರಾಣದಿಂದ ಬೇರೆಯಾದವರುಂಟೆ? ಕಾಣುವುದಿಲ್ಲ ಛಾಯೆ ಆತ್ಮದಿಂದ ಹೊರನಡೆದವರುಂಟೆ ? ನೀನೊಂದು ಮಾಯೆ ರಸ...
-
ಕುಲದ ನೆಲೆಯನರಸುತ್ತಾ.... ನಮ್ಮ ನಾಡಿನ ಖ್ಯಾತ ಸಾಹಿತಿಗಳು, ಚಿಂತಕರಾದ ಡಾ.ಗುರುಲಿಂಗ ಕಾಪಸೆ ಯವರು " ಪಂಪ ರನ್ನ ರಂತಹ ವ...
-
ಚಹಾ ಮತ್ತು ನಾನು ದೂರವಾಗು ಎಂದರೆ ನಮ್ಮಿಬ್ಬರಿಗೂ ಸಾಧ್ಯವೇ ಪ್ರಿಯೆ ಪ್ರಾಣದಿಂದ ಬೇರೆಯಾದವರುಂಟೆ? ಕಾಣುವುದಿಲ್ಲ ಛಾಯೆ ಆತ್ಮದಿಂದ ಹೊರನಡೆದವರುಂಟೆ ? ನೀನೊಂದು ಮಾಯೆ ರಸ...
-
ಭಾವಯಾನ 'ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ| ಎಳ್ಳು ಜೀರಿಗೆ ಬೆಳೆಯೋಳ |ಭೂಮಿತಾಯಿ ಎದ್ದೊಂದು ಘಳಿಗೆ ನೆನೆದೇನ' ಎಂದು ಹಾಡುವ ಜನಪದರು ಬೆಳಗಾಗೆದ...










No comments:
Post a Comment