Total Pageviews
Tuesday, 16 July 2019
ಮುಳ್ಳು ಹಾದಿಯಲ್ಲಿ ನಡೆದ ಕಾವ್ಯ ಭೀಷ್ಮ….
ಜೀವನವೊಂದು ಸಂತೋಷ ನಲಿವುಗಳ ಪರಮಸುಖವಷ್ಟೇ ತುಂಬಿರುವ ಸಂಭ್ರಮದಾಗರವಾಗಿದ್ದರೆ, ಬದುಕಿನ ಕಷ್ಟಕೋಟಲೆಗಳ ಬೆಂಕಿಯಲ್ಲಿ ಬೆಂದ ದಿವಂಗತ ಡಾ. ಸಂಗಪ್ಪ ಶಿವಪ್ಪ ಬಸುಪಟ್ಟದ ಎಂಬ ಕಾವ್ಯಭೀಷ್ಮರೊಬ್ಬರು ಕನ್ನಡ ಸಾರಸ್ವತ ಲೋಕಕ್ಕೆ ಹೀಗೆ ಪುಟಕ್ಕಿಟ್ಟ ಚಿನ್ನವಾಗಿ ದಕ್ಕುತ್ತಿರಲಿಲ್ಲವೇನೋ. ನಮ್ಮ ಸೌಭಾಗ್ಯ ಗುಳೇದಗುಡ್ಡ ಎಂಬ ಬಯಲು ಸೀಮೆಯ ನಾಡಿಗೊಬ್ಬ ಡಾ. ಎಸ್ ಎಸ್ ಬಸುಪಟ್ಟದರವರೆಂಬ ಕಾವ್ಯಋಷಿಯನ್ನು ಪಡೆದ ಧನ್ಯತೆ ನಮ್ಮದಾಗಿದೆ. ಬಡತನವನ್ನೇ ಹಾಸಿ ಹೊದ್ದ ನೇಕಾರಿಕೆಯ ಮನೆತನದಲ್ಲಿ ಶಿವಪ್ಪ ಹಾಗೂ ನೀಲವ್ವ ಎಂಬ ಸಾತ್ವಿಕ ದಂಪತಿಗಳ ಸುಪುತ್ರರಾಗಿ 14 ನೇ ನವೆಂಬರ್ 1923 ರಲ್ಲಿ ಜನಿಸಿದ ಸಂಗಪ್ಪನವರು ಬಾಲ್ಯದಿಂದಲೇ ಸಾಹಿತ್ಯದ ಒಲವನ್ನು ಬೆಳೆಸಿಕೊಂಡವರು. ಬಾಗಲಕೋಟ ಜಿಲ್ಲೆಯ ಆಗಿನ ಬದಾಮಿ ತಾಲ್ಲೂಕಿನ (ಈಗ ಗುಳೇದಗುಡ್ಡ ತಾಲ್ಲೂಕು) ಜಗತ್ಪ್ರಸಿದ್ದ ‘ರೇಷ್ಮೆ ಖಣಗಳ ತವರೂರು’ ಎಂದು ಪ್ರಖ್ಯಾತವಾದ ‘ಗುಳೇದಗುಡ’್ಡ ದಲ್ಲಿ ಜನಿಸಿ ಇಲ್ಲಿಯೇ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದರು. ಐದನೇ ತರಗತಿಯಲ್ಲಿ ಓದುತ್ತಿರುವಾಗಲೇ ‘ಅರಳು ಮಲ್ಲಿಗೆ’ ಎಂಬ ಹಸ್ತ ಪತ್ರಿಕೆಯೊಂದನ್ನು ಸಂಪಾದಿಸಿದ ಸಂಗಪ್ಪನವರು ಪತ್ರಿಕೆಯ ಹೆಸರಿನಂತೆ ಕನ್ನಡ ನಾಡಿಗೆ ಸಾಹಿತ್ಯದ ರಸಗಂಧವನ್ನು ಹರಡುವ ಅರಳು ಮಲ್ಲಿಗೆಯೇ ಆಗಿದ್ದರು. ‘ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣು’ ಎಂಬಂತೆ ಸಾಹಿತ್ಯದ ಸಿರಿಯಾಗಿ ಬೆಳೆಯುತ್ತಿದ್ದ ಸಂಗಪ್ಪನವರು ಗುಳೇದಗುಡ್ಡ, ಗದಗ, ಬಾಗಲಕೋಟೆ, ಸೋಲಾಪುರಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆದು ಸೊಲ್ಲಾಪುರದ ಹೈಸ್ಕೂಲಿನಲ್ಲಿ ಸಹ ಶಿಕ್ಷಕರಾಗಿ ಒಂದು ವರ್ಷ ದುಡಿದು, ಗುಳೇದಗುಡ್ಡದ ಮುನ್ಸಿಪಲ್ ಹೈಸ್ಕೂಲಿನಲ್ಲಿ ಸಹಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದರು. ಮತ್ತೆ ಹತ್ತು ವರ್ಷ ಅದೇ ಹೈಸ್ಕೂಲಿನಲ್ಲಿ ಮುಖ್ಯಾಧ್ಯಾಪಕರಾಗಿ, ನಂತರ ಭಂಡಾರಿ ಕಲಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸಿ 1978 ರಲ್ಲಿ ನಿವೃತ್ತರಾದರು. ನಿವೃತ್ತಿಯ ನಂತರವೂ ವಿಶ್ರಾಂತಿ ಪಡೆಯದ ಇವರು ಬದಾಮಿಯ ಶ್ರೀ ವೀರಪುಲಿಕೇಶಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸಂಸ್ಥಾಪಕ ಪ್ರಾಚಾರ್ಯರಾಗುವ ಅವಕಾಶ ಒದಗಿ ಬಂದಾಗ ತುಂಬು ಹೃದಯದಿಂದ ಒಪ್ಪಿಕೊಂಡು“ಕನ್ನಡ ನೆಲವೆಲ್ಲ ಕನ್ನಡದ ಜಲವೆಲ್ಲಕನ್ನಡದ ಜನಮನದ ಬಾಳಿಗಾಗಿಕನ್ನಡದ ಗಿರಿಯೆಲ್ಲ ಕನ್ನಡದ ಸಿರಿಯೆಲ್ಲಕನ್ನಡದ ಮುನ್ನಡೆಯ ಕೇಳಿಗಾಗಿ”
Subscribe to:
Post Comments (Atom)
ಚಹಾ ಮತ್ತು ನಾನು
ಚಹಾ ಮತ್ತು ನಾನು ದೂರವಾಗು ಎಂದರೆ ನಮ್ಮಿಬ್ಬರಿಗೂ ಸಾಧ್ಯವೇ ಪ್ರಿಯೆ ಪ್ರಾಣದಿಂದ ಬೇರೆಯಾದವರುಂಟೆ? ಕಾಣುವುದಿಲ್ಲ ಛಾಯೆ ಆತ್ಮದಿಂದ ಹೊರನಡೆದವರುಂಟೆ ? ನೀನೊಂದು ಮಾಯೆ ರಸ...
-
ಕುಲದ ನೆಲೆಯನರಸುತ್ತಾ.... ನಮ್ಮ ನಾಡಿನ ಖ್ಯಾತ ಸಾಹಿತಿಗಳು, ಚಿಂತಕರಾದ ಡಾ.ಗುರುಲಿಂಗ ಕಾಪಸೆ ಯವರು " ಪಂಪ ರನ್ನ ರಂತಹ ವ...
-
ಚಹಾ ಮತ್ತು ನಾನು ದೂರವಾಗು ಎಂದರೆ ನಮ್ಮಿಬ್ಬರಿಗೂ ಸಾಧ್ಯವೇ ಪ್ರಿಯೆ ಪ್ರಾಣದಿಂದ ಬೇರೆಯಾದವರುಂಟೆ? ಕಾಣುವುದಿಲ್ಲ ಛಾಯೆ ಆತ್ಮದಿಂದ ಹೊರನಡೆದವರುಂಟೆ ? ನೀನೊಂದು ಮಾಯೆ ರಸ...
-
ಭಾವಯಾನ 'ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ| ಎಳ್ಳು ಜೀರಿಗೆ ಬೆಳೆಯೋಳ |ಭೂಮಿತಾಯಿ ಎದ್ದೊಂದು ಘಳಿಗೆ ನೆನೆದೇನ' ಎಂದು ಹಾಡುವ ಜನಪದರು ಬೆಳಗಾಗೆದ...







Vyaktichitrana bagge heluvadaralli kannada saahityadalli ondu visistate eede adaralli nivu nimmade aada visitateyondige heltira ade nimma lekhanagala vishesate munduvareyali
ReplyDelete