Total Pageviews
Friday, 26 June 2020
ನೀನೊಮ್ಮೆ ಒಡಲುಗೊಂಡು ನೋಡಾ..
ನೀನೊಮ್ಮೆ ಒಡಲುಗೊಂಡು ನೋಡಾ..
ಅದು ಬ್ರಾಹ್ಮಿ ಮುಹೂರ್ತಕಾಲ. ಸಾಕಿ ಹೆಣೆದು ಹಾಸಿದ ಕೌದಿಯಿಂದ ಮೈಮನಗಳೆಲ್ಲವೂ ಎಚ್ಚರಗೊಂಡು ಮಂಜುಗಣ್ಣಿನಲ್ಲಿಯೇ ಮನೆಯ ಮುಂದಿನ ಉದ್ಯಾನವನದೊಳಗೆ ಪ್ರವೇಶಿಸಿದೆ. ಹಳದಿಯುಟ್ಟು ನಿಂತ ಅಲಂಕಾರದ ಗಿಡದೆಲೆಗಳ ಮೇಲೆ ಆಗ ತಾನೇ ಭುವಿಗಿಳಿದು ವಿರಮಿಸುತ್ತಿದ್ದ ಇಬ್ಬನಿಯ ಹನಿಗಳನ್ನು ಹುಡುಕಿ ಮೈಸವರಿದೆ. ಕಾಯುತ್ತಿದ್ದವೋ ಏನೋ ಅಂಟಿಕೊಂಡುಬಿಟ್ಟವು ದೂರದಿಂದಲೇ ಕಾಡಬೇಕೆಂದಿದ್ದ ಹಸ್ತಗಳಿಗೆ. ಎತ್ತಿಕೊಂಡೆ ಮುದ್ದಿನ ಕೂಸನ್ನು ತಾಯಿ ಹಿಡಿದೆತ್ತಿಕೊಂಬಂತೆ. ಕಣ್ಣುಗಳಿಗೆ ಸವರಿ ರೆಪ್ಪೆಗಳಿಂದ ತಬ್ಬಿಕೊಂಡೆ. ನೇತ್ರದೊಳಗೆ ಮಡುಗಟ್ಟಿದ ಅಂತರಂಗದಿಂದುದಿಸಿದ ಮಂಜಿನೊಳಗೆ ಬಹಿರಂಗದ ಇಬ್ಬನಿಯೂ ಐಕ್ಯವಾಗಿ ಅದ್ವೈತವಾಗುವುದರಲ್ಲಿರುವ ಅದಮ್ಯ ಸುಖವನ್ನನುಭವಿಸಿದೆ ಕಣ್ಣಾಲೆಗಳನ್ನು ಮೌನದಿಂದ ಮುಚ್ವಿಕೊಂಡು. ಆಗ ಶೂನ್ಯವೇ ಸಂಪಾದನೆ; ಭಾವವೇ ಆಲಾಪನೆ; ಧ್ಯಾನವೇ ಸಂಶೋಧನೆ. ಹಿಂದಿನ ರಾತ್ರಿ ಹನಿದ ಮಳೆಯಿಂದ ಮಜ್ಜನಗೈದ ಗಿಡಮರಗಳು ಹಸಿರಿನ ಹೊಸ ದಿರಿಸನ್ನುಟ್ಟು ಮಧುವಣಗಿತ್ತಿಯಂತೆ ಶುಭೋದಯದ ಸ್ವಾಗತಕ್ಕಾಗಿ ಸಿದ್ಧವಾಗಿ ನಿಂತಿದ್ದವು. ಹೃದಯದಿಂದ ಹೊರಟ ರಾಗರತಿ ಕಣ್ಣುಗಳ ಮೂಲಕ ಮತ್ತೆ ಇಳೆಗಿಳಿಯುತಿತ್ತು ಹನಿ ಹನಿಯ ಬನಿಯಾಗಿ. ಕುವೆಂಪು ಹೇಳುವ "ಆನಂದಮಯ ಈ ಜಗಹೃದಯ" ವೆಂದರೆ ಯಾವುದೆಂದು ಸರಳವಾದ ಪ್ರಯೋಗದ ಮುಖೇನ ತೋರಿದ ಇಬ್ಬನಿಯ ಹನಿ ಗೆಳೆಯರಿಗೆ ಕೈಮುಗಿದೆ. ಉದ್ಯಾನವನದಲ್ಲಿಯೇ ಸುಳಿದಾಡಿದೆ ಮಾರುತನ ಹೆಗಲ ಮೇಲೆ ಕೈಹಾಕಿ. ರಾತ್ರಿಯೆಲ್ಲಾ ಹರಿದಾಡಿ ಆಯಾಸಗೊಂಡು ಮಂದಗಾಮಿನಿಯಾಗಿದ್ದ ಒಡಲಿಲ್ಲದ ನಿರಾಕಾರನ ಕುಶಲೋಪರಿಯನ್ನು ವಿಚಾರಿಸಿದೆ.
Subscribe to:
Post Comments (Atom)
ಚಹಾ ಮತ್ತು ನಾನು
ಚಹಾ ಮತ್ತು ನಾನು ದೂರವಾಗು ಎಂದರೆ ನಮ್ಮಿಬ್ಬರಿಗೂ ಸಾಧ್ಯವೇ ಪ್ರಿಯೆ ಪ್ರಾಣದಿಂದ ಬೇರೆಯಾದವರುಂಟೆ? ಕಾಣುವುದಿಲ್ಲ ಛಾಯೆ ಆತ್ಮದಿಂದ ಹೊರನಡೆದವರುಂಟೆ ? ನೀನೊಂದು ಮಾಯೆ ರಸ...
-
ಕುಲದ ನೆಲೆಯನರಸುತ್ತಾ.... ನಮ್ಮ ನಾಡಿನ ಖ್ಯಾತ ಸಾಹಿತಿಗಳು, ಚಿಂತಕರಾದ ಡಾ.ಗುರುಲಿಂಗ ಕಾಪಸೆ ಯವರು " ಪಂಪ ರನ್ನ ರಂತಹ ವ...
-
ಚಹಾ ಮತ್ತು ನಾನು ದೂರವಾಗು ಎಂದರೆ ನಮ್ಮಿಬ್ಬರಿಗೂ ಸಾಧ್ಯವೇ ಪ್ರಿಯೆ ಪ್ರಾಣದಿಂದ ಬೇರೆಯಾದವರುಂಟೆ? ಕಾಣುವುದಿಲ್ಲ ಛಾಯೆ ಆತ್ಮದಿಂದ ಹೊರನಡೆದವರುಂಟೆ ? ನೀನೊಂದು ಮಾಯೆ ರಸ...
-
ಭಾವಯಾನ 'ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ| ಎಳ್ಳು ಜೀರಿಗೆ ಬೆಳೆಯೋಳ |ಭೂಮಿತಾಯಿ ಎದ್ದೊಂದು ಘಳಿಗೆ ನೆನೆದೇನ' ಎಂದು ಹಾಡುವ ಜನಪದರು ಬೆಳಗಾಗೆದ...




Super
ReplyDeleteNice sir
ReplyDeletesuper sir
ReplyDeleteಸುಂದರವಾದ ಪ್ರಬಂಧ.ಬಹಳ ಹಿಡಿಸಿತು.
ReplyDelete👏👏👏👏👏
ReplyDeletesuper sir
ReplyDeletesuper sir
ReplyDeleteಆಪ್ತವಾಗಿದೆ.Very nice...
ReplyDeleteNice sir 👌.
ReplyDeleteತುಂಬಾ ಚೆನ್ನಾಗಿದೆ ಸರ್
ReplyDeleteಅತ್ಯುತ್ತಮವಾದ ಪ್ರಭಂದ ಗುರೂಜಿ 👌👌
ReplyDeleteಒಡಲುಗೊಂಡವರ ಬದುಕೆ ನಿಮ್ಮ ಬದುಕು. ಆ ಸೃಷ್ಟಿ ಆ ಚೆಲುವು ಆ ಬದುಕನ್ನ ಬದುಕಿರುವಷ್ಟು ಸಂಬ್ರಮಿಸುವ ಜನಪದರ ಶುದ್ದ ಆತ್ಮಗಳ ಪ್ರೀತಿಯ ಮಾತುಗಳು ಎಲ್ಲವೂ ಬದುಕನ್ನು ನಿತ್ಯ ಹುಟ್ಟುವಂತೆ ಮಾಡುತ್ತವೆ ಆದರೆ ಆನಂದಿಸುವ ಅನುಭಾವಿಸುವ ಅಪ್ಪಿ ಒಪ್ಪಿಕೊಳ್ಳುವ ಪ್ರೀತಿಯ ಮನವಿರಬೇಕು. ಹುಸಿ ಮತ್ತು ಹಸಿವು ಮಾತ್ರ ಜಗವನ್ನಾಳುತ್ತಿರುವ ಈ ಭಿತಿಯ ಸಮಯದಲ್ಲೂ ನಾವು ಒಡಲುಗೊಂಡು ಒಡಲುಗೊಂಡವರೊಂದಿಗೆ ಒಡಲುಗೊಳ್ಳದಿರುವವರನ್ನು ಒಡಲಾಗಿಸಿಗೊಂಡು ಬದುಕು ಸಂಬ್ರಮಿಸುವ ಪರಿಯನ್ನ ನಮ್ಮ ಹೆಜ್ಜೆಗಳನಾಗಿಸಬೇಕಿದೆ. ಆಗಲೆ ಹುಟ್ಟಿಗೊಂದು ಅರ್ಥ ಬಂದೀತು ನಮ್ಮ ಜನಪದರ ಬದುಕಿನ ರೀತಿಯಂತೆ. ಅಭಿನಂದನೆಗಳು ಸರ್ ಅರ್ಥಪೂರ್ಣ ಲೇಖನ ಓದಿ ಖುಷಿಯಾಯಿತು
ReplyDeleteಇಂತಿ
ಶ್ರೇಯಾಂಶ
ಒಡಲುಗೊಂಡವರ ಬದುಕೆ ನಿಮ್ಮ ಬದುಕು. ಆ ಸೃಷ್ಟಿ ಆ ಚೆಲುವು ಆ ಬದುಕನ್ನ ಬದುಕಿರುವಷ್ಟು ಸಂಬ್ರಮಿಸುವ ಜನಪದರ ಶುದ್ದ ಆತ್ಮಗಳ ಪ್ರೀತಿಯ ಮಾತುಗಳು ಎಲ್ಲವೂ ಬದುಕನ್ನು ನಿತ್ಯ ಹುಟ್ಟುವಂತೆ ಮಾಡುತ್ತವೆ ಆದರೆ ಆನಂದಿಸುವ ಅನುಭಾವಿಸುವ ಅಪ್ಪಿ ಒಪ್ಪಿಕೊಳ್ಳುವ ಪ್ರೀತಿಯ ಮನವಿರಬೇಕು. ಹುಸಿ ಮತ್ತು ಹಸಿವು ಮಾತ್ರ ಜಗವನ್ನಾಳುತ್ತಿರುವ ಈ ಭಿತಿಯ ಸಮಯದಲ್ಲೂ ನಾವು ಒಡಲುಗೊಂಡು ಒಡಲುಗೊಂಡವರೊಂದಿಗೆ ಒಡಲುಗೊಳ್ಳದಿರುವವರನ್ನು ಒಡಲಾಗಿಸಿಗೊಂಡು ಬದುಕು ಸಂಬ್ರಮಿಸುವ ಪರಿಯನ್ನ ನಮ್ಮ ಹೆಜ್ಜೆಗಳನಾಗಿಸಬೇಕಿದೆ. ಆಗಲೆ ಹುಟ್ಟಿಗೊಂದು ಅರ್ಥ ಬಂದೀತು ನಮ್ಮ ಜನಪದರ ಬದುಕಿನ ರೀತಿಯಂತೆ. ಅಭಿನಂದನೆಗಳು ಸರ್ ಅರ್ಥಪೂರ್ಣ ಲೇಖನ ಓದಿ ಖುಷಿಯಾಯಿತು
ReplyDeleteಇಂತಿ
ಶ್ರೇಯಾಂಶ