Total Pageviews

Saturday, 21 March 2020

ಕಾಲಚಕ್ರ
  ಸರಿದುಹೋಗುತ್ತದೆ ಕಾಲ
ಬಯಸಿದುದನೆಲ್ಲಾ ಬಾಚಿಕೊಂಡು
ಋಣ ಮುಗಿದವರ ಕೈಹಿಡಿದು 
ಸಮಯವಾಯಿತೆಂದು ಕರೆದುಕೊಂಡು

ಮರಣವೇ ಮಹಾನವಮಿ 
ಎಂದವರದೋ ಮಹದಾನಂದದಿ 
ಕಳೆಗಟ್ಟಿದ ಮೆರವಣಿಗೆ
ಹಿಂಜರಿದು ಹೆದರಿ 
ಬಚ್ಚಿಟ್ಟುಕೊಂಡವರ ಜಾಣ
ಮರೆವಿನಲ್ಲಿ ಅದೆಂತಹ ಉರುವಣಿಗೆ

ಅಳಿವಿದೆ ಹೆಸರಿಲ್ಲದೆ ನಡೆದು 
ಸದ್ದಿಲ್ಲದೇ ಮರೆಯಾಗುವ ಜಂಗಮಕೆ
ಉಳಿವೆಲ್ಲಾ ಹೆಸರಿನಲ್ಲಿ ಮೈಮರೆತು
ಕುಣಿವ ಜಡ ಸ್ಥಾವರಕೆ
ಉರುಳಿ ಹೋದ ಶತ-ಶತಮಾನಗಳ 
ಮರೆಯಲಾಗದ ಕೊಡುಗೆ 
ಬೆಡಗಿನಲ್ಲಿ ಬೆತ್ತಲಾಗಿ ಹೆಜ್ಜೆ 
ಹಾಕುತಿರುವ ಬದಲಾವಣೆಯ ಉಡುಗೆ

ನಿಸ್ವಾರ್ಥದ ಹೆಗಲ ಮೇಲೆ
ಕೈಹಾಕಿ ನಡೆಯುತ್ತಾ ಶ್ರದ್ಧೆ 
ಕಾಯಕದಿ ಸಾಗುವವರ ಸಂತೆ
ಬೇಕಿಲ್ಲ ನವಯುಗಕೆ ಅವರದೇ 
ಮೂಲೆಗೊಟ್ಟಿ ಮತ್ತೆಂದೂ ಚಿಗುರದಂತೆ 
ಸಮಾಧಿ ಮಾಡುವ  ಚಿಂತೆ

ಬಯಸಿ ಹುಡುಕಿ ಹೋಗುವ
ವಿಷಾದ ಸಂಭ್ರಮಗಳೆರಡೂ ಒಂದೇ 
ಧಿಮಾಕಿನ ಒಡೆಯನಂತೆ ಕೈಕೋಲು 
ಕುಟ್ಟಿ ಹೆಜ್ಜೆ ಹಾಕುವ ಕಾಲನ ಮುಂದೆ
ಆದರೂ ಪಕ್ಷಪಾತ ಆಳುವವರ 
ತನ್ನಂಥವರು ಬೀಗುವುದ ಕಂಡು

ಮುನ್ನಡೆಸಿ ಜಗವಾಳುವ  
ವಾರಸುದಾರರಿರಲೆಂಬ ಹೆಬ್ಬಯಕೆಯೋ
ಜಾಲ ಅರಿಯದೆ ಬಲೆಗೆ ಬೀಳುವ 
ಅಮಾಯಕರ ಒರೆಸಿಹಾಕುವ ಹವಣಿಕೆಯೋ
ಅಲಿಪ್ತ ಶಾಂತ ನೀರವದ ನಾದ
ಏಕತಾರಿಯ ಸ್ವರವೊಂದೇ
ಆಲಿಸುವ ಬಡಪಾಯಿಗಳ ಮೋದ!


11 comments:

  1. ಲಯಬದ್ಧವಾದ ಜೋಡಣೆಯಿಂದ ಕೂಡಿದ ಸುಂದರ ಬರವಣಿಗೆ ಸರ್

    ReplyDelete
  2. super sir.
    ಶಬ್ದ ಜೊಡನೆಗಾಳ ಮಾಂತ್ರಿಕ.
    ರಸವತ್ತಾಗಿದೆ ಸರ್

    ReplyDelete
  3. ಪ್ರತಿಕಾಲಮಾನದ ವರ್ತಮಾನಕ್ಕೆ ಹಿಡಿದ ನೈಜತೆ.
    ಶಬ್ದ ಸರಪಳಿಗೆ ಧನ್ಯವಾದಗಳು

    ReplyDelete
  4. ಗುಜರ ಗಯೀ ಜಿಂದಗಿ ಗಾಲಿಬಕಾ ಕಸಿದ ಔರ ನಶೆ ಕಾ ಜೂನನಮೆ
    ಕೌನ ಜಾನೆ ಉನಖಿ ದಿಲ ಕಿ ಧಡಕನ ಆಖಿರ ಓ ಭಿ ಖುದಾ ಕಾ ಹಿ ಇನಸಾನ
    ಗಾಲಿಬನ ಜೀವನಚರಿತ್ರೆ ಕುರಿತು ಚಿಂತನೆ, ಮಂಥನವಾಗಲಿ ತಮ್ಮಿಂದ ಕಾವ್ಯ ತತಪರತೆ ಪುಂಖಾನು ಪುಂಖವಾಗಿ ಹೊರಬರಲಿ ತಮಿಂದ

    ReplyDelete

ಚಹಾ ಮತ್ತು ನಾನು

 ಚಹಾ ಮತ್ತು ನಾನು ದೂರವಾಗು ಎಂದರೆ ನಮ್ಮಿಬ್ಬರಿಗೂ ಸಾಧ್ಯವೇ ಪ್ರಿಯೆ ಪ್ರಾಣದಿಂದ ಬೇರೆಯಾದವರುಂಟೆ? ಕಾಣುವುದಿಲ್ಲ ಛಾಯೆ ಆತ್ಮದಿಂದ ಹೊರನಡೆದವರುಂಟೆ ? ನೀನೊಂದು ಮಾಯೆ ರಸ...