Total Pageviews
Wednesday, 31 October 2018
ಕನ್ನಡದ "ಆಮುಕ್ತಮಾಲ್ಯದ"- ಡಾ.ನಿರುಪಮಾ ನಮ್ಮ ನಾಡು ೬೩ ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಸಂಭ್ರಮದ ಹೊತ್ತಿನಲ್ಲಿ ನನ್ನ ಕೈಗೊಂದು ಮಹತ್ವದ ಕೃತಿ ದಕ್ಕಿದ್ದು, ಅನುಪಮ ಕ್ಷಣಗಳನ್ನು ಮನದುಂಬಿಕೊಳ್ಳಲು ಕಾರಣವಾಯಿತು.ನಮ್ಮ ನಾಡು ಕಂಡ ಸೂರ್ಯ ಮುಳುಗದ ಸಾಮ್ರಾಜ್ಯಕ್ಕೆ ಅನ್ವರ್ಥವಾಗಿದ್ದಂತಹ, ನಮ್ಮ ಶ್ರೀಮಂತ ನಾಡು ನುಡಿ ಸಂಸೃತಿಯ ಪರಂಪರೆಗೆ ಹೆಸರಾಗಿದ್ದ, 'ಪೇಯಸ್' ರಂತಹ ವಿದೇಶಿ ಯಾತ್ರಿಕರಿಂದ 'ಸುವರ್ಣಯುಗದ' ಸಾಮ್ರಾಜ್ಯವೆಂದು ಬಣ್ಣಿಸಲ್ಪಟ್ಟು ಧೀಮಂತವಾಗಿ ಬೆಳಗಿದ 'ವಿಜಯನಗರ ಸಾಮ್ರಾಜ್ಯ' ದ ಗತವೈಭವವನ್ನು ಸಾರುವ ಕೃತಿ ಶ್ರೀ ಕೃಷ್ಣದೇವರಾಯ ವಿರಚಿತ "ಆಮುಕ್ತಮಾಲ್ಯದ ".ಯಾವ ರಾಜ್ಯದಲ್ಲಿ ಸುಭದ್ರ ಆಡಳಿತವಿರುತ್ತದೋ ಅಲ್ಲೊಂದು ಸಮೃದ್ಧ ಸಂಸ್ಕೃತಿ ಮೈದಳೆಯುತ್ತದೆ ಎಂಬುದಕ್ಕೆ ನಮ್ಮ ನಾಡನ್ನಾಳಿದ ಕದಂಬರು,ಚಾಲುಕ್ಯರು,ಹೊಯ್ಸಳರು,ರಾಷ್ಟ್ರಕೂಟರು ಹಾಗೂ ವಿಜಯನಗರ ಸಾಮ್ರಾಜ್ಯಗಳೇ ಅತ್ಯುತ್ತಮ ನಿದರ್ಶನಗಳಾಗಿವೆ. ಅಂತಹ ಒಂದು ಅಭೂತಪೂರ್ವ ಸಂಸ್ಕೃತಿಯ ತವರಾಗಿದ್ದ ವಿಜಯನಗರ ಸಾಮ್ರಾಜ್ಯ ಹೆಸರಿಗೆ ತಕ್ಕಂತೆ ಅನೇಕ ವಿಜಯಗಳ ಸರಮಾಲೆಗಳನ್ನೇ ಕೊರಳಿಗೆ ಧರಿಸಿಕೊಂಡು, ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡಬಹುದಾದ ಶಿಲ್ಪ ಕಲೆ,ಸಾಹಿತ್ಯ, ಸಂಗೀತ, ನೃತ್ಯ,ವಾಸ್ತುಶಿಲ್ಪ ದಂತಹ ಲಲಿತಕಲಾಕ್ಷೇತ್ರಗಳೆಂಬ ಗರಿಗಳಿಂದ ಅಲಂಕೃತಗೊಂಡು ಅದರ ಕೀರ್ತಿಕಿರೀಟವು ಕಂಗೊಳಿಸಿ ಮೆರೆದಿದೆ.ಇಂತಹ ಒಂದು ಮಹೋನ್ನತ ಸಾಮ್ರಾಜ್ಯ ಮೈದಾಳಿದ ಪುಣ್ಯಭೂಮಿಯಲ್ಲಿ ನಾವಿದ್ದೇವೆ ಎಂಬುದೇ ಎಲ್ಲ ಕನ್ನಡಿಗರಿಗೆ ಧನ್ಯತೆಯೊಂದಿಗೆ ಸಾರ್ಥಕತೆ ಮತ್ತು ಅಭಿಮಾನವನ್ನು ಮೂಡಿಸುವ ಸಂಗತಿಯಾಗಿದೆ. ಬಾಲ್ಯದಲ್ಲಿಯೇ ತನ್ನ ಸಹೋದರ ವೀರನರಸಿಂಹನ ದುಷ್ಟತನದಿಂದಾಗಿ ತನ್ನ ಕಣ್ಣುಗಳನ್ನು ಕೀಳಿಸಿಕೊಂಡು ಅನಾಮಿಕನಂತೆ,ಅನಾಥನಂತೆ ಪ್ರಾಣ ಕಳೆದುಕೊಳ್ಳಬೇಕಾಗಿದ್ದ ತುಳುವ ವಂಶದ ಶ್ರೀ ಕೃಷ್ಣದೇವರಾಯನು, ನಿಷ್ಠಾವಂತ ಮಂತ್ರಿ ಸಾಳ್ವ ತಿಮ್ಮರಸನ ಚಾಣಾಕ್ಷತೆಯಿಂದಾಗಿ ೧೫೦೯ ಆಗಸ್ಟ್ ೭ ರಂದು ಪಟ್ಟವೇರಿ ನಾಡಪ್ರಭುವಾಗಿ ಮೆರೆಯುತ್ತಾನೆ.ಕವಿರಾಜಮಾರ್ಗಕಾರನು
Subscribe to:
Post Comments (Atom)
ಚಹಾ ಮತ್ತು ನಾನು
ಚಹಾ ಮತ್ತು ನಾನು ದೂರವಾಗು ಎಂದರೆ ನಮ್ಮಿಬ್ಬರಿಗೂ ಸಾಧ್ಯವೇ ಪ್ರಿಯೆ ಪ್ರಾಣದಿಂದ ಬೇರೆಯಾದವರುಂಟೆ? ಕಾಣುವುದಿಲ್ಲ ಛಾಯೆ ಆತ್ಮದಿಂದ ಹೊರನಡೆದವರುಂಟೆ ? ನೀನೊಂದು ಮಾಯೆ ರಸ...
-
ಕುಲದ ನೆಲೆಯನರಸುತ್ತಾ.... ನಮ್ಮ ನಾಡಿನ ಖ್ಯಾತ ಸಾಹಿತಿಗಳು, ಚಿಂತಕರಾದ ಡಾ.ಗುರುಲಿಂಗ ಕಾಪಸೆ ಯವರು " ಪಂಪ ರನ್ನ ರಂತಹ ವ...
-
ಚಹಾ ಮತ್ತು ನಾನು ದೂರವಾಗು ಎಂದರೆ ನಮ್ಮಿಬ್ಬರಿಗೂ ಸಾಧ್ಯವೇ ಪ್ರಿಯೆ ಪ್ರಾಣದಿಂದ ಬೇರೆಯಾದವರುಂಟೆ? ಕಾಣುವುದಿಲ್ಲ ಛಾಯೆ ಆತ್ಮದಿಂದ ಹೊರನಡೆದವರುಂಟೆ ? ನೀನೊಂದು ಮಾಯೆ ರಸ...
-
ಭಾವಯಾನ 'ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ| ಎಳ್ಳು ಜೀರಿಗೆ ಬೆಳೆಯೋಳ |ಭೂಮಿತಾಯಿ ಎದ್ದೊಂದು ಘಳಿಗೆ ನೆನೆದೇನ' ಎಂದು ಹಾಡುವ ಜನಪದರು ಬೆಳಗಾಗೆದ...






ಲೇಖನ ತುಂಬಾ ಚನ್ನಾಗಿ ಮೂಡಿಬಂದಿದೆ. ವಿಷಯ ಸಂಗ್ರಹಣೆ ಅದ್ಭುತ. ಧನ್ಯವಾದಗಳು
ReplyDeleteಸರ್ ಗದ್ಯದ ಗಟ್ಟಿತನ ಈ ಲೇಖನದಲ್ಲಿ ಸುಂದರವಾಗಿ ಮೂಡಿಬಂದಿದೆ.
ReplyDeleteVery nice hegde
ReplyDeleteಇತಿಹಾಸದ ಸುವರ್ಣ ಪುಟಗಳ ಪ್ರತಿಬಿಂಬ ನಿಮ್ಮ ಲೇಖನ
ReplyDelete