Total Pageviews

Thursday, 27 June 2019

ಕಾವ್ಯೋದ್ಯಾನವನದಲ್ಲೊಂದು ವಿಹಾರ ಭಾಗ 2
ಶಬ್ದಸೂತಕದಿಂದ ಕಾವ್ಯವನ್ನು ಕಟ್ಟಿಕೊಡಲು ಸಾಧ್ಯವಿಲ್ಲ. ಹಾಗೆಯೇ ಬದುಕನ್ನೂ ಕೂಡ. ಶಬ್ದಗಳ ಬಂಧನದಲ್ಲಿಟ್ಟಷ್ಟೂ ಮುಕ್ತವಾಗುತ್ತಲೇ ಹೋಗುವುದು  ಕಾವ್ಯದ ಜಾಯಮಾನ; ನಿಗೂಢವಾಗುತ್ತಲೇ ಹೋಗುವುದು ಕಾವ್ಯದ ಗುಣ.ಕಾವ್ಯದ ಪಯಣವೆಂದಿಗೂ ಅನಂತತೆಯ ಕಡೆಗೆ.ದಕ್ಕಿದೆ ಎನ್ನುವಾಗಲೇ ದಕ್ಕದೇ ಹೋಗುವುದೂ ಕೂಡ ಕಾವ್ಯರಾಣಿಯ ಚಂಚಲತೆಯ ಲಕ್ಷಣ.ಇಂತಹ ಚಂಚಲ ಹಾಗೂ ಅಷ್ಟೇ  ಅಮಲಿನ ಕಾವ್ಯವನ್ನು ಸಾರ್ಥಕವಾಗಿ ದಕ್ಕಿಸಿಕೊಂಡ ಜಗತ್ತಿನ ದಾರ್ಶನಿಕರನ್ನು ದರ್ಶಿಸುವ ಮಹತ್ವದ ಕೃತಿಯಾಗಿ "ಜಾಡಮಾಲಿಯ ಜೀವ......." ಗಮನಸೆಳೆಯುತ್ತದೆ. ತನ್ನ ಪರಮಶಿಷ್ಯ ಜಲಾಲುದ್ದೀನ್ ರೂಮಿಯ ಅನುಯಾಯಿಗಳಿಂದಲೇ ಕೊಲೆಯಾಗಿ ರೂಮಿಯ ಮಗನಿಂದ ಸಮಾಧಿಯನ್ನಲಂಕರಿಸಿಕೊಂಡ,"ವಕಾಲತ್- ಎ-ಶಾಮ್ಸ -ಎ-ತಬ್ರೀಝಿ" ಎಂಬ ಏಕೈಕ ಪರ್ಶಿಯನ್ ಕೃತಿಯ ನೇಕಾರ, ಜಗತ್ಪ್ರಸಿದ್ಧ ಚಿಂತಕ ಶಾಮ್-ಎ-ತಬ್ರೀಝಿಯಾಗಿರಬಹುದು,ಸೌಂದರ್ಯವನ್ನೇ ಆರಾಧಿಸಿ,ಕಾಲು ಕಳೆದುಕೊಂಡ ಭಗ್ನ ಶಿಲ್ಪವಾಗಿ ಬದುಕನ್ನು ಸಾವಿನೊಂದಿಗೆ ಸವೆಸಿದ ಮೆಕ್ಸಿಕನ್ ಕಾವ್ಯಾರಾಧಕಿ ಫ್ರಿದಾ ಕಾಹಲೊವಾ ಆಗಿರಬಹದು,ಕಾವ್ಯ ಮತ್ತು ಖಡ್ಗಗಳ ಸಾಂಗತ್ಯದಲ್ಲಿ ಕ್ರಾಂತಿಯ ಬೀಜ ಬಿತ್ತಿ ಸೋವಿಯತ್ ಸರ್ಕಾರದಿಂದ ಗಲ್ಲಿಗೇರಿಸಲ್ಪಟ್ಟ ಅಹಮದ್ ಜಾವೇದ್ ಇರಬಹುದು,"ಸಾಂಗ್ಸ ಆಫ್ ದಿ ಆರ್ಮಿ "ಯನ್ನು ರಚಿಸಿ ಇಂಗ್ಲೆಂಡಿನ ಕಾರ್ಮಿಕರ ದನಿಯಾಗಿ ಕೊನೆಗೆ ಆತ್ಮಹತ್ಯೆಯಂತಹ ದುರಂತ ಸಾವನ್ನು ಕಂಡ ಕಾದಂಬರಿಕಾರ ಫ್ರಾನ್ಸಿಸ್ ಆ್ಯಡಮ್ಸ್ ಆಗಿರಬಹದು, ಸೇವೆಯನ್ನು ಸೈತಾನನಿಂದ ಕಲಿಯಬೇಕು ಎಂದು ಪ್ರತಿಪಾದಿಸಿ ಔರಂಗಜೇಬನಿಂದ ತಲೆದಂಡಕ್ಕೊಳಗಾದ ನಗ್ನತೆಯ ಆರಾಧಕ ಮೊಹಮ್ಮದ ಸಯೀದ್ ಸರ್ಮದ್ ಖಶಾನಿಯಾಗಿರಬಹುದು ,ಧರ್ಮಸುಧಾರಣೆಗಾಗಿ ತುಡಿದ ಮಾರ್ಟಿನ್ ಲೂಥರ್ ಕಿಂಗ್ ನನ್ನು ನೆನಪಿಸುವ, ಬಸವಣ್ಣನವರ ಆಚಾರವೇ ಸ್ವರ್ಗ ಅನಾಚಾರವೇ ನರಕ ವೆಂಬ ಚಿಂತನೆಗಳಿಗೆ ಹತ್ತಿರವಾಗಿ, ಅಕ್ಕಮಹಾದೇವಿಯಂತೆ ಸಾವಿಲ್ಲದ ಗಂಡನನ್ನು ಹುಡುಕುತ್ತಲೇ ಲೀನವಾದ ರಾಬಿಯಾ ಆಗಿರಬಹದು,ಪ್ರೇಯಸಿಯಿಂದ ಪ್ರೀತಿಯಿಂದ ಹೊಡೆಸಿಕೊಳ್ಳದವನು,ಶೆರೆ ಕುಡಿಯದವನು ಎಂದಿಗೂ ಕವಿಯಾಗಲಾರ ಎಂಬ ವಿಲಕ್ಷಣವಾದ ಸತ್ಯವನ್ನು ಪ್ರತಿಪಾದಿಸಿ ಕವಿತೆಯಾಗಿ ಮಾತ್ರ ಈ ಜಗಕೆ ದಕ್ಕಿದ ಗಾಲಿಬನಾಗಿರಬಹದು ಹೀಗೆ ಈ ಕೃತಿಗೆ ಮುನ್ನುಡಿಯಾದವರೆಲ್ಲರೂ ಒಂದಲ್ಲ ಒಂದು ಬಗೆಯಲ್ಲಿ ಬದುಕೆಂಬ  ದುರಂತ ನಾಟಕದ ನತದೃಷ್ಟ ನಾಯಕರುಗಳೆ;
ಸಮಾಜೋದ್ಧಾರಕ್ಕಾಗಿ ಪ್ರಭುತ್ವದ ವಿರುದ್ದ ಕಾವ್ಯಖಡ್ಗವನ್ನು ಹಿಡಿದು ಝಳಪಿಸಿದವರೇ ; ಕ್ರಾಂತಿಯ  ಮೂಲಕ ಮಾನವತೆಗಾಗಿ  ಪ್ರತಿಭಟಿಸಿದವರೇ.ಈ ಜಗದ ಸಾಂಸ್ಕೃತಿಕ ಲೋಕವನ್ನು ತಮ್ಮೊಳಗಿನ ಆಂತರ್ಯದ ಒಳನೋಟದ ಮೂಲಕ ನಿರ್ಭೀತಿಯಿಂದ ಎಚ್ಚರಗೊಳಿಸಿದವರೇ. ಮನುಷ್ಯನೊಳಗಣ ಮನುಷ್ಯತ್ವವನ್ನು ತೆರೆದು ತೋರಿಸುವ ಇಲ್ಲಿಯ ಕವಿತೆಗಳು ಮಹಾಮಾನವೀಯತೆಯ ಗಿಡದಲ್ಲರಳಿದ ಪುಷ್ಪಗಳು. ಮಾನವ ಆಚರಿಸಬೇಕಾದ ತತ್ವಜ್ಞಾನದ ಸಾಲುಗಳನ್ನು ಸರಳ ಸಾಲುಗಳ ಪರಿಮಳದ ಮೂಲಕ ಜನಮನಕೆ ತಲುಪಿಸಿದ ದಾಸಯ್ಯರು ಇಲ್ಲಿಯ ಕವಿಸೂರಿಗಳು. ಮೂಲ ಭಾವ, ಅರ್ಥ, ಆಶಯಗಳಿಗೆ ಕಿಂಚಿತ್ತೂ  ಧಕ್ಕೆಯೊದಗದಂತೆ ರಾಗಂರವರ ಲೇಖನಿಯಲ್ಲಿ ಇಲ್ಲಿಯ ಕವಿತೆಗಳು ಮರುಹುಟ್ಟು ಪಡೆದಿವೆ. ರಾಗಂರವರೇ ಹೇಳುವಂತೆ ಇಲ್ಲಿಯ ಕವನಗಳು  ಬರಿ ಶುಷ್ಕವಾದ ಭಾಷಾಂತರವಲ್ಲ ಬದಲಾಗಿ ಭಾವಶುದ್ಧತೆಯೊಂದಿಗೆ ಪುನರ್ ಸೃಷ್ಠಿಗೊಳಗಾಗಿವೆ. ನಿಜ. ನೀರಸ ಅನುವಾದ ಮೌಲಿಕವಾದುದನ್ನು ಹೊರಗಿಡುತ್ತದೆ. ಈ ಕವಿತೆಗಳನ್ನು ಪುನರ್ ಸೃಷ್ಟಿಸುವ ರಾಗಂರವರ  ಪರಿಯೇ ಮನೋಜ್ಞವಾಗಿದೆ -
"ಎಲ್ಲ ಇದೆ ಈ ಮೈಯೊಳಗೆ
ಹಸಿ ಗಂಧದ ಪರಿಮಳ
ಬಗೆ ಹೂಗಳ ಉಸಿರು
ಕೋಟಿ ಸಸಿಗಳಿಗೊಂದು ಬಸಿರು
ಎಲ್ಲ ಇದೆ ಈ ಮೈಯೊಳಗೆ
ಎದೆಯ ಬಟ್ಟಲದೊಳಗೇ
ಉಸಿರು ಕಟ್ಟಿಸುವ ವಿಷ
ಎಲ್ಲ ಎಲ್ಲ ಇದೆ ಈ ಮೈಯೊಳಗೆ"
ಎಂಬಲ್ಲಿನ ಆರ್ದ್ರತೆ ನವಪರಿಮಳದೊಂದಿಗೆ  ಘಮಘಮಿಸುತ್ತಿರುವ ಪರಿಯನ್ನು ಗಮನಿಸಿ. ರೂಪದರ್ಶಿ,"ವೈಟ್ ಎಲಿಫೆಂಟ್", "ವರ್ಲ್ಡ್ ಹೋಟೆಲ್ " ನಂತಹ ಕಾವ್ಯ ಸಂಕಲನಗಳ ಮೂಲಕ ಜನಮನಸೂರೆಗೊಂಡು ಮಡಿಲು ತುಂಬಿ ಹರಿಯುವಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡು  ಪಂಜಾಬಿನಲ್ಲಿ ಹುಟ್ಟಿ ಅಮೆರಿಕಾದವರೆಗೆ ಹಬ್ಬಿಕೊಂಡ ಕಾವ್ಯಬಳ್ಳಿಯಂತಿದ್ದ ರೀತಿಕಾ ವಾಜಿರಾಣಿ ಎಂಬ, ಹೆತ್ತ ಮಗನನ್ನೇ ಕೊಂದು ಆತ್ಮಹತ್ಯೆ ಮಾಡಿಕೊಂಡ ದುರಂತ ನಾಯಕಿಯ ಮೇಲಿನ ಕಾವ್ಯ ಏನೆಲ್ಲವನ್ನೂ ಧ್ವನಿಸುತ್ತಿದೆ ಅಲ್ಲವೇ?  ಜನನದಿಂದ ಮರಣದವರೆಗಿನ ಉಸಿರು, ಬಸಿರು, ವಿಷದ ಮೂಲಕ ಅಂತ್ಯದ ಸಂಗತಿಗಳನ್ನು ಮೇಲಿನಂತೆ ಕೆಲವೇ ಸಾಲುಗಳಲ್ಲಿ ಹಾಡಿದ ರೀತಿಕಾಳ ನೋವ ಒಡಲು ಅದೆಷ್ಟು ಯಾತನೆಯಿಂದ ನರಳಿರಬೇಕಲ್ಲವೇ?  ಆ ನರಳುವಿಕೆ ಈ ಪದಗಳ ಮೂಲಕ ಬ್ರಹ್ಮಾಂಡವನ್ನೇ ಆವರಿಸಿ ಅನುರಣಿಸುತ್ತಿದೆ. ಕರಣ ಕರಣದಲೂ ರಿಂಗಣಿಸಿ ಸುತ್ತಿ ಸುಳಿಯುವ ಮಡುವನ್ನೇ ಸೃಷ್ಟಿಸುವ ಈ ಕಾವ್ಯದ ಅಂತಃಶಕ್ತಿಗೆ ನಾವು ತಲೆಬಾಗಲೇಬೇಕು.
ರಾಗಂ ರವರು ಜಗತ್ತಿನ ಹೊರವಲಯದ ಗುಡಿಸಲುಗಳಲ್ಲಿ ಕಳೆದುಹೋಗಿದ್ದ ಕಾವ್ಯಮಣಿಗಳನ್ನು ಆಯ್ದು ತಂದು ಪೊಸ ಮಾಲೆಯನ್ನಾಗಿ ಕಟ್ಟಿ ಕನ್ನಡ ಸರಸ್ವತಿಯ ಮುಡಿಗೇರಿಸಿ ಅಲಂಕರಿಸಿರುವುದು ಹೆಮ್ಮೆ ಹಾಗೂ ಅಭಿಮಾನದ ಸಂಗತಿ. ರೋಮ್ಯಾಂಟಿಕ್ ಯುಗದ ನಂತರದ ಸಮರ ಕಾವ್ಯಯುಗದ ಕವಿಗಳೂ ಕೂಡ ಶಬ್ದಸಂಗೀತವಾಗಿ ಈ ಕೃತಿಯ ಮೂಲಕ ಸುಮಧುರವಾದ ಕಾವ್ಯವಾಗಿದ್ದಾರೆ. "ದೇವರು" ಎಂಬ ತಮ್ಮ ವಿಶಿಷ್ಟ  ವೈಚಾರಿಕ ಕೃತಿಯಿಂದ ಭಗವಂತನನ್ನು ಹುಡುಕಿದ ಚಿಂತಕರಾದ ಎ. ಎನ್. ಮೂರ್ತಿರಾಯರು ಅಂತಿಮವಾಗಿ ಶೋಧಿಸಿದ್ದು ಇಲ್ಲಿಯ ಮನ್ಸೂರ ನೆಂಬ ಮಾನವಪ್ರೇಮಿ ಕವಿಯೊಬ್ಬ ತಡಕಾಡಿದ ದೇವರನ್ನೇ ಎಂಬುದನ್ನು ನೋಡಿ -  "ಹೃದಯದ ಕಣ್ಣುಗಳಿಂದ
ದೇವರ ಕಂಡೆ
ಯಾರು ನೀ ಎಂದೆ
ಮುಗುಳ್ನಕ್ಕು ಆತ ನುಡಿದ
"ನೀನು"
ನಾನೆಂದರೆ ನೀನೆ.." .
ಯುದ್ದಕಾವ್ಯ ಯುಗದಲ್ಲಿ ಪರಿಶುದ್ಧ ಪ್ರೇಮವನ್ನು ಬಿತ್ತಿ,
ಪ್ರೇಮ ತುಂಬಿದ ಹೃದಯದ ಬೆಳಕನ್ನು ಹರಡುವ ರಷ್ಯಾದ ಅಲೆಮಾರಿ ಕವಿ ನಾಟಕಕಾರ ವಿಮರ್ಶಕ ನಿಖೊಲೆ ಗ್ಯಾಮಿಲಿಯೊ ನ ಪ್ರಣಯ ಕವಿತೆಯ ಸೌಂದರ್ಯವನ್ನೊಮ್ಮೆ ಆಸ್ವಾದಿಸಿ -
"ಯಾರೂ ಸಾಯುವುದಿಲ್ಲ
ನಿನ್ನ ಮುಟ್ಟಿ
ಯಾರೂ ಬದುಕುವುದಿಲ್ಲ
ನಿನ್ನ ಮೆಟ್ಟಿ
ಒಟ್ಟಂದದ ಬದುಕಿನಲ್ಲಿ
ನಿನ್ನ ಸಂಗವೆ
ಪರಮ ಮಂಗಳ
ನಿನ್ನ ಸ್ಮರಣೆಯ
ಬೆಳಕು ಹಬ್ಬಿದೆ
ಗೆಲುವಾಗಿದೆ ಹೃದಯದಂಗಳ"
ಈ ಕವಿತೆಯ ಸಾಲುಗಳನ್ನು ಕಣ್ತುಂಬಿಕೊಳ್ಳುತ್ತಿದ್ದರೆ ಕೆ ಎಸ್ ನರಸಿಂಹಸ್ವಾಮಿಯವರ
" ನಿನ್ನ ಪ್ರೇಮದ ಪರಿಯೆ
ನಾನರಿಯೇ ಕನಕಾಂಗಿ
ನಿನ್ನೊಳಿದೆ ನನ್ನ ಮನಸು.." ಎಂಬ ಕಾವ್ಯದೆಸಳುಗಳು  ನೆನಪಾಗುತ್ತವೆ.ಹೌದು. ಪ್ರೇಮದ ಲಲಾಟವೇ ಅಂಥಹದ್ದು. ಪ್ರೇಮ ಕಾಡದ ಕವಿಯಿರಲಾರ ಎಂಬುದಕ್ಕೆ ಷೇಕ್ಸಪಿಯರ್ ನ ನಾಟಕಗಳೂ ಸಾಕ್ಷ್ಯ ಹೇಳುತ್ತವೆ; ಬೇಂದ್ರೆಯವರ ಸಖಿಗೀತ ಗಳು ದೃಷ್ಟಾಂತವನ್ನೊದಗಿಸುತ್ತವೆ; ಕುವೆಂಪುರವರ ಪ್ರೇಮಕಾಶ್ಮೀರ ಹಿಮಸುರಿಸಿ ಹಾಡುತ್ತದೆ. ಎಚೆಸ್ವಿಯವರ ಭಾವಗೀತೆಗಳು ದನಿಯೆತ್ತಿ ಗಾಯನಗೈಯ್ಯುತ್ತವೆ.
ಮಾನವಸಮಾಜವನ್ನು ಮುನ್ನಡೆಸಲು ಬೇಕಾದ ಸಮಾಜವಿಜ್ಞಾನ, ರಾಜ್ಯಶಾಸ್ತ್ರ,ತತ್ವಜ್ಞಾನ,ವಿಜ್ಞಾನ,ಆಧ್ಯಾತ್ಮ,ಯೋಗ,ಇತಿಹಾಸ, ಮಾನವಶಾಸ್ತ್ರಗಳಾದಿಯಾಗಿ ಮುಗಿಯದ ಮುಗಿಲಿನಂತಹ ವಸ್ತುವೈವಿಧ್ಯದ ಇಲ್ಲಿಯ ಕಾವ್ಯಗಳು ಸಾರ್ವತ್ರಿಕ ಸತ್ಯವನ್ನು ತಮ್ಮ ಉಸಿರೆಂಬಂತೆ ಸಾರುತ್ತವೆ.
ಆಧುನಿಕ ಧರ್ಮಕಾರಣದ ಸಮಕಾಲೀನ ಸಂದರ್ಭದಲ್ಲಿ ಅತ್ಯಂತ ಪ್ರಸ್ತುತವಾಗಿರುವ ಭಾವೈಕ್ಯೆತೆಯ ಪ್ರಜ್ಞೆಯನ್ನು ಕುರಿತು ಚರ್ಚಿಸುವ ಕವಿಕಾವ್ಯಗಳು ಈ ಕೃತಿಯನ್ನಲಂಕರಿಸಿರುವುದು ಔಚಿತ್ಯಪೂರ್ಣವಾಗಿದೆ.
ಪಾಕಿಸ್ತಾನಕ್ಕಂಟಿಕೊಂಡಿರುವ ಪಂಜಾಬಿನವನಾದ ಸಂತ,ಮಹಾವಿದ್ರೋಹಿಯಾದ ಬುಲ್ಲೇಷಾ ನಲ್ಲಿ ಹುಟ್ಟಿದ
" ಎಲ್ಲ ಎಲ್ಲರೂ ಕುರುಡರಾದಲ್ಲಿ
ಹೋಗೋಣ ಬಾ ಬುಲ್ಲೆ
ಅಲ್ಲಿ ಗುರ್ತಿಸುವುದಿಲ್ಲ ನಮ್ಮನಾರೂ
ಜಾತಿ ಬಣ್ಣ ದೇಶ ಧರ್ಮಗಳಿಲ್ಲದ
ಕುರುಡರ ಕಾರುಣ್ಯದಲ್ಲಿ
ನಾನ್ಯಾರು?  ಅನ್ಯರಾರು" ಎಂಬ ಕಾವ್ಯಝರಿಯು ಭೇದವಿಲ್ಲದ ಲೋಕದ ಆಲಾಪವನ್ನು ಸರ್ವರ ಕಿವಿಗಿಂಪಾಗುವಂತೆ ಹೇಗೆ  ಮೊರೆಯುತ್ತಿದೆಯಲ್ಲವೇ ? ಇದೇ ಇಂದಿನ ತುರ್ತು ಸಂದರ್ಭದ ತುಡಿತವಾಗಬೇಕು.
ಅರಸೊತ್ತಿಗೆಯ ಹೊಂಚಿಗೆ, ಮಿಲಿಟರಿಯ ಬಲೆಯ ಸಂಚಿಗೆ ಕೊರಳೊಡ್ಡಿಕೊಂಡ, ಕ್ರಾಂತಿಕಾರಿ
ಬಂಡಾಯಕ್ಕೆ ಮತ್ತೊಂದು ಹೆಸರಾಗಿದ್ದ ಮೈನುಯೆಂಗ್ ಕೆ. ಕುಂತೀ ಯ ಸಿಡಿಲ ಕಿಡಿಗಳನ್ನು ಒಮ್ಮೆ ಕೇಳಿ-
" ಗೊತ್ತಿರಲಿಲ್ಲ ನಾಯಕರೆ
ಬೂಟಿನ ಹಿಂಬದಿಯ ಹಿಡಿ ಮಣ್ಣಿನಲ್ಲಿ
ನನ್ನ ಕ್ರಾಂತಿಯ ಕನಸರಳುತ್ತದೆ
ಅದು ಸಿಡಿದರೆ ಕಿಡಿಯಾಗಿ
ಅನ್ಯಾಯದ ಗದ್ದುಗೆ ಉರುಳುತ್ತದೆ " ನಮ್ಮ ಕನ್ನಡದ
ಬಂಡಾಯ ಕಾವ್ಯದ ಬಿಸುಪನ್ನು ಸ್ಮರಿಸುವ ಈ ಸಾಲುಗಳು ಅನ್ಯಾಯವನ್ನು  ಧಿಕ್ಕರಿಸಿ ನಿಲ್ಲುತ್ತವೆ. ಭಾವೈಕ್ಯತೆಯೂ ಜಗತ್ತಿನ ತಲ್ಲಣಗಳನ್ನು ತುಂಬಿಕೊಂಡ ಕಾವ್ಯ ಎಷ್ಟು ಅರ್ಥಪೂರ್ಣವಾಗಿರಬಲ್ಲದು ? ಎಷ್ಟು ಚಿಂತನಾಶೀಲವಾಗಿರಬಲ್ಲದು ? ಎಂಬುದಕ್ಕೆ ಇಲ್ಲಿ ಪದಗಳಾದ ಕವಿಕಾವ್ಯಗಳೇ ನಿದರ್ಶನಗಳಾಗಿವೆ. ಬದುಕಿನ ಮುಂದಿರುವ ಸವಾಲುಗಳನ್ನು ಎದುರಿಸಿ ಹೋರಾಡುವ ಆಂತರಿಕ ಎಚ್ಚರಿಕೆಯ ಪ್ರಜ್ಞೆ, ಸಮಾಜದ ಸಮಸ್ಯೆಗಳೊಂದಿಗೆ ಬದುಕುವ ಕಲೆಯನ್ನು ಕಲಿಸುವ ಸಾಮಾಜಿಕ ಪ್ರಜ್ಞೆ, ಶೋಷಿಸುವ ಪ್ರಭುತ್ವದ ವಿರುದ್ಧ ಹೋರಾಡುವ ಬಂಡಾಯದ ಪ್ರಜ್ಞೆ, ರಾಜ್ಯವನ್ನು ಮುನ್ನಡೆಸುವ ರಾಜಕೀಯ ಪ್ರಜ್ಞೆ, ವಕ್ರರೇಖೆಯಂತೆ ಎದುರಾಗುವ ಬದುಕನ್ನು ಬಂದಂತೆ ಪ್ರೀತಿಸುವ ಜೀವನ ಪ್ರಜ್ಞೆಗಳೊಂದಿಗೆ ಮುಖಾಮುಖಿಯಾಗುವಂತೆ ಮಾಡುವ ಅಪರೂಪದ ಕೃತಿ ಜಾಡಮಾಲಿಯ ಜೀವ ಕೇಳುವುದಿಲ್ಲ.
ಪ್ರೊ.ಸಂಗಮೇಶ ಗಣಿಯವರು ಹೇಳುವಂತೆ ಭೌತಿಕ ಹಾಗೂ ಮನುಷ್ಯನೊಳಗಿನ ಆಂತರಿಕ ಯುದ್ಧೋನ್ಮಾದದ ಸಮಕಾಲೀನ ವಿಷಮ  ಸಂದರ್ಭದಲ್ಲಿ ಪ್ರೀತಿ,ವಾತ್ಸಲ್ಯ, ದಯೆ, ಅಂತಃಕರಣ, ಮಾನವೀಯತೆಗಳನ್ನು ನಮ್ಮ ಎದೆಯಲ್ಲಿ ಬಿತ್ತಬಲ್ಲ ಈ ಕೃತಿ  ಇಂದು ಅತ್ಯಂತ ಪ್ರಸ್ತುತ ಹಾಗೂ ಔಚಿತ್ಯಪೂರ್ಣವೆನಿಸಿದೆ. ಜಾಗತಿಕವಾಗಿ ವಿಭಿನ್ನ ಸಂಸ್ಕೃತಿಯ ಕವಿಕಾವ್ಯಗಳನ್ನು ಕನ್ನಡದ ಸಂದರ್ಭದಲ್ಲಿಟ್ಟು ಅನುಸಂಧಾನಿಸುವ ಕ್ರಿಯೆಯೇ ಅನನ್ಯವಾದುದು. ಹೀಗೆ ಅನನ್ಯತೆಯನ್ನೇ ತಮ್ಮ ಸಾಹಿತ್ಯದ ಲಕ್ಷಣವಾಗಿಸಿಕೊಂಡ ಡಾ.ರಾಜಶೇಖರ ಮಠಪತಿಯವರು (ರಾಗಂ) ಈ ಕೃತಿಯ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ವಿಭಿನ್ನವಾದ ಕೊಡುಗೆಯೊಂದನ್ನು ನೀಡಿದ್ದಾರೆ.ಈ ಕೃತಿಯಲ್ಲಿ ಪಡೆಮೂಡಿರುವ ಬಹುಪಾಲು ಕಾವ್ಯಾರಾಧಕರೆಲ್ಲ ಪ್ರೇಮಪೂಜಾರಿಗಳೇ. ಪ್ರೇಮದ ಜೊತೆಗೂಡಿ ಬಂದ ಮಾನವೀಯತೆ ಈ ಕೃತಿಯನ್ನಾವರಿಸಿದ  ಮತ್ತೊಂದು ವಿಶ್ವಪಥದ ಮೌಲ್ಯ. ಏನಾದರೂ ಆಗು ಮೊದಲು ಮಾನವನಾಗು ಎಂಬ ಕನ್ನಡ ಕವಿಯ ಸಾಲುಗಳು ಇಲ್ಲಿಯ ಕಾವ್ಯದ ಪಾದಗಳನ್ನು ಹೋಲುತ್ತವೆ. ಮಹಾಮಾನವತಾವಾದಿಗಳನ್ನೆಲ್ಲ ತಮ್ಮ ಕೃತಿಯ ಮೂಲಕ ಹೀಗೆ ಕಟ್ಟಿಕೊಡುತ್ತಿರುವ ಪ್ರಯತ್ನ ಅರ್ಥಪೂರ್ಣವಾದುದು. ಕವಿಕಾವ್ಯಗಳ ಜಾಗತಿಕ ಸಂಕಥನಗಳನ್ನು ಕಟ್ಟಿಕೊಡುವ ರಾಗಂರವರ ಪ್ರಯತ್ನ ಅನುಪಮವಾದದ್ದು.ಸಾರ್ಥಕವಾದದ್ದು. ಈ ಕೃತಿಯ ಶೀರ್ಷಿಕೆಯಲ್ಲಿ ಬಳಕೆಯಾದ ಜಾಡಮಾಲಿಯೇ ಒಂದು ರೂಪಕ.ಜಗತ್ತನ್ನು ಪೊರೆಯುವ ಪ್ರಕೃತಿಯಿಂದ  ಹಿಡಿದು ಉದ್ಯಾನವನದಲ್ಲಿ ಸಸಿಗಳನ್ನು ಪೋಷಿಸುವ ಪೋಷಕಿಯವರೆಗೆ ಜಾಡಮಾಲಿ  ಇಲ್ಲಿ ವಿಶಾಲವಾದ ಹರವು ಪಡೆದುಕೊಂಡಿದ್ದಾಳೆ. ಜೀವ ತುಂಬಿ ಕಾವ್ಯ ಹೆಣೆದು ಕಾಪಿಡುವ ಈ ಕುಶಲಿಗರೂ ಇಲ್ಲಿ ಜಾಡಮಾಲಿಗಳೆ.ಕರಕಿಯೆಳೆಯ ಹೆಕ್ಕಿ ತಂದು, ತೂಗುವಂಥ ಗೂಡು ಕಟ್ಟಿ ಮೊಟ್ಟೆಯಿಟ್ಟು ಮರಿ ಮಾಡಿ, ಗುಟುಕಿಡುವ ಹಕ್ಕಿಯೂ ಜಾಡಮಾಲಿಯೇ. ನವಮಾಸಗಳ ಹೊತ್ತು ಹೆತ್ತು ಕರುಳು ಕುಡಿಗಳಿಗೆ ಜೀವತುಂಬುವ ತಾಯಿಯೂ ಜಾಡಮಾಲಿಯೇ.ಹೀಗೆ ಜಾಡಮಾಲಿಯನ್ನು ನಾವು ಇದುವರೆಗೂ ಕಂಡು ಕೇಳರಿಯದ ಬಗೆಯಲ್ಲಿ ವಿಸ್ತರಿಸಿಕೊಳ್ಳುವ ರೂಪಕವನ್ನಾಗಿಸಿದ್ದಾರೆ ರಾಗಂರವರು.  ವಿಶ್ವದ ಕಾವ್ಯಕುಸುರಿಗರ ಕಾವ್ಯಗಳನ್ನು ತಮ್ಮದೇ ಭಾಷೆಯಲ್ಲಿ ಅರಳಿಸಿ, ಕನ್ನಡದ ತೊಡುಗೆಯುಡಿಸಿ  ಅಲಂಕರಿಸಿರುವ  ಡಾ. ರಾಜಶೇಖರ ಮಠಪತಿಯವರೂ ಒಬ್ಬ ಜಾಡಮಾಲಿಯೇ. ತನ್ನೆಲ್ಲ ನೋವು ಸಂಕಟಗಳನ್ನು ಪೊರೆಯುವುದರಲ್ಲಿಯೇ ತನ್ನೆಲ್ಲ ನೋವು ಸಂಕಷ್ಟಗಳನ್ನು ಮರೆಯುವ ಅವಳ ಅಂತಃಕರಣ, ಸಹನೆ, ತ್ಯಾಗ,  ಅವಿಸ್ಮರಣೀಯವಾದುದು. ಆರ್ತನಾದ, ವೇದನೆಯನ್ನು ಕೇಳಿದಾಗ ಜಾಡಮಾಲಿಯ ಜೀವ ಹೇಗೆ ಕೇಳುವುದಿಲ್ಲವೋ,  ( ತಡೆಯುವುದಿಲ್ಲವೋ)  ಹಾಗೆ ದುರಂತನಾಯಕರಾಗಿರುವವರ ಕವಿಕಾವ್ಯಗಳನ್ನು ಕಂಡಾಗ ರಾಗಂ ರವರ ಜೀವವೂ ಕೇಳಿಲ್ಲ.
ಡಾ. ಬರಗೂರು ರಾಮಚಂದ್ರಪ್ಪನವರು ಕನ್ನಡದ ಸಂದರ್ಭದಲ್ಲಿ  ಉಲ್ಲೇಖಿಸಿದ ಗಂಭೀರ ಮಾತುಗಳನ್ನು ಇಲ್ಲಿ ಪಡೆಮೂಡಿರುವ ಜಾಗತಿಕ ಸಾಹಿತ್ಯ ಕ್ಷೇತ್ರಕ್ಕೆ ಅನ್ವಯಿಸುವುದಾದರೆ, ಸತ್ಯ,ಶಾಂತಿ, ಪ್ರೀತಿ,ನಿರ್ಮಲತೆ,ಪರಿಶುದ್ಧತೆಯ ಮಾನವತಾವಾದದ ಅಮರ ಮೌಲ್ಯಗಳನ್ನು ತಮ್ಮ ಕಾವ್ಯಗಳ ಮೂಲಕ ಬಿತ್ತಿದ ಇಂತಹ ಕವಿಕಾವ್ಯಗಳನ್ನು ಭಾಷೆ,ಸಾಹಿತ್ಯ,ದೇಶ ಕಾರಣವಾಗಿ ವಿಮರ್ಶೆಯ ಮುಖ್ಯವಾಹಿನಿಯಿಂದ ಹೊರಗಿಟ್ಟ ಸಾಂಸ್ಕೃತಿಕ ಅಸ್ಪೃಶ್ಯತೆಯನ್ನು ಹೋಗಲಾಡಿಸಬೇಕಾಗಿದೆ.ಇಂತಹ ಸಾಂಸ್ಕೃತಿಕ ಅಸ್ಪೃಶ್ಯ  ಪರಂಪರೆಯೊಂದರ ಕಡೆಗೆ ಎಚ್ಚರಗೊಳ್ಳಬೇಕಾದ ಅವಶ್ಯಕತೆಯನ್ನು ಈ ಕೃತಿ ಅತ್ಯಪೂರ್ವವಾಗಿ ಸಾರುತ್ತದೆ.


Wednesday, 12 June 2019

'ತುಘಲಕ್'ನೊಂದಿಗೆ  ಮಾತಿಗಿಳಿದಾಗ...
ಪುರಾಣವನ್ನಾಧರಿಸಿದ 'ಯಯಾತಿ' ಚರಿತ್ರೆಯನ್ನಾಧರಿಸಿದ 'ತುಘಲಕ್' ನಂತಹ ಶ್ರೇಷ್ಠ ನಾಟಕಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ ಗಿರೀಶ ಕಾರ್ನಾಡರು ಕನ್ನಡಕ್ಕೆ ಪ್ರಥಮ ಸ್ವರ್ಣಕಮಲ ಪ್ರಶಸ್ತಿ ತಂದುಕೊಟ್ಟು ಕನ್ನಡ ರಂಗಭೂಮಿ ಹಾಗೂ ಸಿನೇಮಾರಂಗವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಿದ ಅಪ್ರತಿಮ ಸಾಧಕರು. ಅವರ ೨೭ ನೇಯ ವಯಸ್ಸಿನಲ್ಲಿಯೇ ರಚಿತವಾದ ತುಘಲಕ್ ಅವರನ್ನು ಕೀರ್ತಿಯ ಶಿಖರಕ್ಕೇರಿಸಿದ ನಾಟಕ. ನನ್ನ ಹೃನ್ಮನಗಳನ್ನು ಸೆಳೆದ ನಾಟಕಗಳಲ್ಲಿ ತುಘಲಕ್ ಅತ್ಯಂತ ವಿಶಿಷ್ಟವಾದುದು. ಇದರ ರಂಗಪ್ರಯೋಗವಂತೂ ನನ್ನನ್ನು ಗತಕಾಲದ ಚರಿತ್ರೆಯತ್ತ ಹೆಜ್ಜೆ ಹಾಕಿ ಶೋಧನೆಗಿಳಿಯುವಂತೆ ಪ್ರೇರೇಪಿಸಿತು. ಇತಿಹಾಸದೊಂದಿಗಿನ ಅನುಸಂಧಾನವೇ ಈ ನಾಟಕದ ಸೃಷ್ಟಿಯ ರಹಸ್ಯಗಳಲ್ಲೊಂದು. ತುಘಲಕ್  ವಿಶಿಷ್ಟವಾದ  ಚಿಂತನೆಯ ಹೊಸ ಹೊಳವುಗಳನ್ನು ಸ್ಫುರಿಸಬಲ್ಲ ಮಾರ್ಗದರ್ಶಿ ನಾಟಕವಾಗಿದೆ. ದೌಲತಾಬಾದ್ ನಿಂದ ದೆಹಲಿಗೆ ದೆಹಲಿಯಿಂದ ದೌಲತಾಬಾದ್ ಗೆ ರಾಜಧಾನಿಯ ವರ್ಗಾವಣೆ, ಬೆಳ್ಳಿಯ ನಾಣ್ಯಗಳ ಬದಲಾಗಿ ತಾಮ್ರದ ನಾಣ್ಯಗಳನ್ನು ಜಾರಿಗೆ ತರುವಂತಹ  ದುಡುಕಿನ ಜನಪರ ಯೋಜನೆಗಳನ್ನು ಜಾರಿಗೆ ತಂದು ವಿಫಲನಾದ ಮೂರ್ಖ ದೊರೆಯೆಂದು ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ  ತುಘಲಕ್ ನನ್ನು ರಂಗದ ಮೇಲೆ ನಿಲ್ಲಿಸಿ ಇತಿಹಾಸದ ಮಣ್ಣಿನಲ್ಲಿ ಹೂತುಹೋಗಿರುವ  ಅಪರೂಪದ ಚಕ್ರವರ್ತಿಯೆಂದು ದೃಶ್ಯೀಕರಿಸಿ ಸಾರುವ ನಾಟಕ ವೆಂದರೆ ಅದು ಗಿರೀಶ ಕಾರ್ನಾಡರ 'ತುಘಲಕ್'. ರಾಜಕೀಯದ ಚದುರಂಗದಾಟವನ್ನು  ಬಲ್ಲವನಾಗಿದ್ದ ಚಾಣಾಕ್ಷ ತುಘಲಕ್ ತನ್ನ ಸಾಮ್ರಾಜ್ಯದ ಉಳಿವಿಗಾಗಿ  ಚಾಣಕ್ಯನ ತಂತ್ರಗಳ ದಾಳಗಳನ್ನುರುಳಿಸಿ ಗೆಲ್ಲುವ ರಾಜತಂತ್ರ ನಿಪುಣನೂ ಆಗಿದ್ದನೆಂಬುದಕ್ಕೆ ನಾಟಕ ನಿದರ್ಶನಗಳನ್ನು ಒದಗಿಸುತ್ತದೆ. ಗಿರೀಶ ಕಾರ್ನಾಡರು "ತುಘಲಕ್ ರಾಜಧಾನಿಯನ್ನು ಪದೇ ಪದೇ ಬದಲಾಯಿಸುವುದರ ಜೊತೆಗೆ ತನ್ನ ಸಾಮ್ರಾಜ್ಯದಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ನಿಷೇಧಿಸಿದ್ದ ಅಚ್ಚರಿಯ ಸಂಗತಿ ಈ ನಾಟಕ ಸೃಷ್ಟಿಸಲೊಂದು ಕಾರಣವಾಯಿತು. ಇತಿಹಾಸದ  ಗರ್ಭದಲ್ಲಡಗಿದ್ದ ಈ ಚಿಕ್ಕ ಎಳೆಯೇ ನನ್ನ ನಾಟಕಕ್ಕೆ ಪ್ರೇರಣೆಯನ್ನೊದಗಿಸಿತು" ಎಂದು ನಾಟಕ ರಚನೆಯಾದ ಸಂದರ್ಭವನ್ನು ಕುರಿತು ವಿವೇಚಿಸುತ್ತಾರೆ.
ನಿಜ. ಕೃತಿಯೊಂದು ಜನ್ಮತಾಳಲು ಮಹತ್ ಸಂಗತಿಗಳೇ ಘಟಿಸಬೇಕೆಂದೇನಿಲ್ಲ, ಬಾಣದ ಮರ್ಮಾಘಾತದಿಂದ ತತ್ತರಿಸಿ ನಲುಗುವ ಕ್ರೌಂಚಪಕ್ಷಿಗಳ ನರಳಾಟದಿಂದ ಹೊಮ್ಮಿದ ಮಾನಿಷಾದ ಶ್ಲೋಕವಾಗಿರಬಹುದು,  ಬೀದಿಯ ಪಕ್ಕ ಮೈಯರಳಿಸಿಕೊಂಡು ನಿಂತ  ಹೆಸರಿಲ್ಲದ ಹೂಗಳ ಸೌಂದರ್ಯವಿರಬಹುದು, ಸೂರ್ಯನ ಹೊಂಗಿರಣಗಳಿಗೆ ಮೈಚಾಚಿಕೊಂಡು ಹರಡಿದ ಸರೋವರವರದ ನೋಟವಿರಬಹುದು, ವಸಂತಕ್ಕೊಮ್ಮೆ ಭುವಿಯಲಂಕರಿಸುವ ಶ್ರಾವಣದ ಚಿಗುರಿರಬಹುದು, ಮೂಡಲಮನೆಯ ಬಾಗಿಲು ತೆರೆದು ರವಿ ಚಿಮುಕಿಸುವ ಇಬ್ಬನಿಯ ಹನಿಗಳಾಟದಂತಹ ಚಿಕ್ಕ ಸಂಗತಿಗಳೂ ಬರಹಗಾರನಲ್ಲಿ ಕೃತಿ ಸೃಷ್ಟಿಯ ಸ್ಪೂರ್ತಿಯ ಚಿಲುಮೆಗಳನ್ನು ಚಿಮ್ಮಿಸಬಲ್ಲವು. ಇತಿಹಾಸ ಹಾಗೂ ಪುರಾಣಗಳನ್ನು ತುಸು ಹೆಚ್ಚಾಗಿಯೇ ಪ್ರೀತಿಸುವ ಗಿರೀಶ ಕಾರ್ನಾಡರನ್ನು ವಿಲಕ್ಷಣ ವ್ಯಕ್ತಿತ್ವದ ತುಘಲಕ್ ಸೆಳೆದದ್ದರಲ್ಲಿ ಅಚ್ಚರಿಯೇನಿಲ್ಲ.
'ತುಘಲಕ್' ನಾಟಕ ಸಮಕಾಲೀನ ರಾಜಕೀಯ, ಸಾಮಾಜಿಕ ಸಂದರ್ಭಗಳ ಅವಲೋಕನಕ್ಕೆ ಮುನ್ನುಡಿ ಬರೆಯುವಂತಿದೆ.  ವ್ಯಕ್ತಿಯು ತನ್ನ ಭಾವತರಂಗಗಳೊಂದಿಗೆ  ಮುಖಾಮುಖಿಯಾಗುವ ಬಗೆಯನ್ನು ತುಘಲಕ್ ನ ಮುಖೇನ ತೆರೆದಿಡುವ ನಾಟಕವು ಚರಿತ್ರೆಯ ಕೇಂದ್ರವಾದ ವ್ಯಕ್ತಿಯನ್ನು ಮರುವ್ಯಾಖ್ಯಾನಿಸುತ್ತದೆ. ೧೪ ನೇ ಶತಮಾನದಲ್ಲಿಯೇ  ಪ್ರಜಾಪರ ಭಾವೈಕ್ಯತೆಯ ಶಾಂತಿಯ ಬನವನ್ನಾಗಿ ತನ್ನ ಸಾಮ್ರಾಜ್ಯವನ್ನು  ಸೃಷ್ಟಿಸಬೇಕೆಂಬ ಹಂಬಲದ ಈ ಸರ್ವಾಧಿಕಾರಿ, ತನಗೆ ಎದುರಾದ ಧರ್ಮ ಹಾಗೂ ರಾಜಕೀಯದೊಂದಿಗಿನ  ಸಂಘರ್ಷಗಳನ್ನು ಚಾಣಾಕ್ಷತನದಿಂದ  ಮೆಟ್ಟಿನಿಂತರೂ ಕೊನೆಗೆ ಜೊತೆಗಾರರಿಲ್ಲದ ಒಂಟಿತನಕ್ಕೆ ಬಲಿಯಾಗುವ ದುರಂತನಾಯಕನಾಗುವುದು ವಿಪರ್ಯಾಸವೇ ಸರಿ. ಇತಿಹಾಸ ತಜ್ಞರಿಂದ, ರಾಜಪಂಡಿತರಿಂದ  'ಹುಚ್ಚುದೊರೆ' ಎಂದು ಪಟ್ಟಗಟ್ಟಿಸಿಕೊಂಡವನ ರಾಜತಂತ್ರ ನೈಪುಣ್ಯತೆಯ ಹತ್ತಾರು ಮುಖಗಳನ್ನು ಪ್ರತ್ಯೇಕ ಅಂಕಪರದೆಯಿಲ್ಲದೇ  ಅನಾವರಣಗೊಳಿಸುವ ಈ ತುಘಲಕ್ ನಾಟಕ ನಮ್ಮ ಪೂರ್ವಾಗ್ರಹಗಳನ್ನು ಕಳಚಿಕೊಂಡು ಇತಿಹಾಸದೊಂದಿಗೆ ಮರು ಅನುಸಂಧಾನಕ್ಕಿಳಿಯುವ ಅಗತ್ಯವನ್ನು ಪ್ರತಿಪಾದಿಸುತ್ತದೆ. ಚರಿತ್ರೆ ಪುರಾಣಗಳ ಮೂಲಕ  ಭಾರತೀಯ ಸಂಸ್ಕೃತಿಯ ಅನನ್ಯತೆಯನ್ನು ಎತ್ತಿಹಿಡಿಯುವ ಕಾರ್ನಾಡರು ತಮ್ಮ ಪ್ರಥಮ ನಾಟಕ "ಯಯಾತಿ"ಗೆ ದೊರೆತ ಮನ್ನಣೆಯಿಂದಾಗಿ ಕನ್ನಡಕ್ಕೆ ದಕ್ಕುವಂತಾಗಿದ್ದು ಕನ್ನಡಿಗರ ಭಾಗ್ಯವೆಂದೇ ಹೇಳಬೇಕು. ಚಾರಿತ್ರಿಕ ಸತ್ಯಗಳಿಗೆ ನಿಷ್ಠವಾಗಿರುವ ವಸ್ತುವೊಂದನ್ನು ತಮ್ಮ ಸೃಜನಶೀಲತೆಯ ಮೂಸೆಯಲ್ಲಿ ಕರಗಿಸಿ ಒಪ್ಪವಿಟ್ಟು, ಪ್ರಮಾಣಬದ್ಧ ಸುಂದರ ಪುತ್ಥಳಿಯನ್ನಾಗಿ ನಿರ್ಮಿಸಿದ ಹೆಗ್ಗಳಿಕೆ ಕಾರ್ನಾಡರದು.
ಸರ್ವಾಧಿಕಾರದ ದರ್ಪವೋ, ಪ್ರಜಾರಕ್ಷಣೆಯ ಕಂಕಣಬದ್ಧತೆಯೊ,ರಾಜಕಾರಣದ ಚದುರಂಗದಾಟವೋ, ಧರ್ಮನಿರಪೇಕ್ಷತೆಯ ಒತ್ತಡವೋ, ಪರಿಸ್ಥಿತಿಯ ಸುಳಿಗೆ ಸಿಲುಕಿ ಸಾಮ್ರಾಜ್ಯವನ್ನಾಳುವ ರಾಜತಂತ್ರ ಪಾಂಡಿತ್ಯವೋ, ಪ್ರತಿಕ್ಷಣವೂ ಎಚ್ಚರವಾಗಿದ್ದು ತನ್ನನ್ನು ಮುನ್ನಡೆಸುತ್ತಿದ್ದ ತನ್ನೊಳಗಿನ ಆತ್ಮಸಾಕ್ಷಿಗೆ ಉತ್ತರವನ್ನು ಹುಡುಕುವ ಮಹತ್ವಾಕಾಂಕ್ಷೆಯೋ ಅಥವಾ ವಿಜ್ಞಾನದ ಸಂಯುಕ್ತವಸ್ತುವಿನಂತೆ ಇವೆಲ್ಲ ಗುಣಗಳನ್ನು  ಸಂಯೋಜಿಸಿಕೊಂಡು ವಿಭಿನ್ನವಾಗಿ ರೂಪುತಳೆದ ಚತುರ ಆಡಳಿತಗಾರನೊಬ್ಬನ ಲಕ್ಷಣವೋ ಗೊತ್ತಿಲ್ಲ, ಕಾರ್ನಾಡರು ಸೃಜಿಸಿದ ತುಘಲಕ್ ನ ಬಹುಮುಖ ವಿಸ್ತಾರದ ಅರ್ಥವ್ಯಾಪ್ತಿಯಂತೂ ಅನಂತವಾದುದು; ಮುಕ್ತವಾದುದು; ಅನನ್ಯವಾದುದು.
ಧರ್ಮಪಾಲನೆಯ ಕಾರಣಕ್ಕಾಗಿ ತನ್ನನ್ನು ಟೀಕಿಸಿದ ಧರ್ಮಗುರು ಶೇಖ್ ಇಮಾಮುದ್ದೀನ್ ನನ್ನು ತನ್ನೊಂದಿಗೆ ಹಗೆತನವಿಟ್ಟುಕೊಂಡಿದ್ದ ಸಾಮಂತ ಅರಸನೊಬ್ಬನೊಂದಿಗೆ ಸಂಧಾನಕ್ಕೆ ಕಳುಹಿಸಿ ರಣರಂಗದಲ್ಲಿ ಕೊಲ್ಲಿಸಿ ಟೀಕೆಯನ್ನು, ಟೀಕಾಕಾರನನ್ನೂ ಮಣ್ಣೊಳಗೆ ಹೂತುಹಾಕುವ  ತುಘಲಕ್ ನ ಪ್ರಯತ್ನ ಯಶಸ್ವಿಯಾಗುತ್ತದೆ. ತನ್ನ ಸಿಂಹಾಸನಕ್ಕೆ ಕುತ್ತಾಗುವರೆಂದು ತಂದೆ ಹಾಗೂ ತಮ್ಮನನ್ನು ಅಲ್ಲದೇ ತನ್ನ ಹಿತಚಿಂತಕ ನಜೀಬ್ ನನ್ನು ವಿಷವಿಕ್ಕಿ ಕೊಲ್ಲಿಸಿದ ಹೆತ್ತತಾಯಿಯನ್ನೂ ಅರಮನೆಯಿಂದ ಸಾವಿನ ಮನೆಗೆ ದೂಡುವ  ಸರ್ವಾಧಿಕಾರಿಯಾಗಿಯೂ ತುಘಲಕ್ ಗೋಚರಿಸುವ ಪರಿ ಈ ನಾಟಕದಲ್ಲಿ ವಿಲಕ್ಷಣವಾಗಿ ಮೂಡಿಬಂದಿದೆ. 
ತಾನು ಪ್ರಾರ್ಥನೆಯಲ್ಲಿರುವಾಗ ಧರ್ಮಾಂಧ ಅಮೀರರು ಹಾಗೂ ಪ್ರಾಣಸ್ನೇಹಿತ ಶಹಾಬುದ್ದೀನ್ ಹೂಡುವ ಕೊಲೆಯ ಸಂಚಿನಿಂದ ಪಾರಾಗುವ ದೊರೆ ಕೊಲೆಗಡುಕರನ್ನು  ಬೇಟೆಯಾಡುತ್ತಾನೆ. ಕರುಳುಬಳ್ಳಿಯೊಂದಿಗೆ ತಳುಕು ಹಾಕಿಕೊಂಡಿರುವ ಮಾನವ ಸಂಬಂಧಗಳನ್ನೇ ಬಲಿಕೊಡುವ ತುಘಲಕ್, ಒಂದು ಹಂತದಲ್ಲಿ ತಾನು ಆರಾಧಿಸುವ ಸಾಮ್ರಾಜ್ಯದ ನಂಟಿನಿಂದ,  ಏಕಾಂತದ ಪರದತ್ತ ಪಯಣಿಸಲು ಬೇಕಾದ ಪೂರ್ವಸಿದ್ಧತೆಗಳನ್ನು ಕೈಗೊಳ್ಳುವ ದಾಸರಂತೆ ಗ್ರಾಹ್ಯನಾದರೂ ಪಾಪಪ್ರಜ್ಞೆಯಿಂದಾಗಿ ಆ ಸದವಕಾಶವನ್ನು ಕಳೆದುಕೊಂಡ ನತದೃಷ್ಟನಾಗುತ್ತಾನೆ. ತುಘಲಕ್ ಒಬ್ಬ ವೃತ್ತಿಪರ ಅರಸನಂತೆ ಸಮರ್ಥ ಆಡಳಿತಗಾರನಾಗಿದ್ದ ಪ್ರಜಾಪರಿಪಾಲಕನಾಗಿದ್ದ ಎಂಬುದಕ್ಕೆ ನಾಟಕ ನಿದರ್ಶನಗಳನ್ನೊದಗಿಸುತ್ತದೆ. ರಾಜ್ಯಾಡಳಿತಕ್ಕಿಂತಲೂ ತುಘಲಕ್ ನ ವೈಯಕ್ತಿಕ ವ್ಯಕ್ತಿತ್ವವನ್ನು ಕುರಿತು ವಿವೇಚಿಸುವ ನಾಟಕ ಚಕ್ರವರ್ತಿಯೊಬ್ಬನ  ಅಂತರಂಗದ  ವ್ಯಾಪಾರವಿಲಾಸವನ್ನು ಮನೋಜ್ಞವಾಗಿ ತೆರೆದಿಡುತ್ತದೆ.
ತುಘಲಕ್ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಪಡೆಮೂಡಿ  ನವ್ಯತೆಯಿಂದ ಕಂಗೊಳಿಸಿದ ಕೃತಿರತ್ನ. ಈ ನಾಟಕದಲ್ಲಿ ತುಘಲಕ್ ಅತ್ಯಂತ ಕ್ರಿಯಾಶೀಲ ಹಾಗೂ ಚಲನಶೀಲವಾಗಿರುವ ಪ್ರಧಾನ ಪಾತ್ರ. ತನ್ನ ಮಾನಸಿಕ ಹಾಗೂ ಭಾವನಾತ್ಮಕ ತೊಳಲಾಟದೊಡನೆಯೂ ಒಬ್ಬ ಅತ್ಯುತ್ತಮ ಸಾಮ್ರಾಜ್ಯಶಾಹಿ ಎಂದು ಕರೆಸಿಕೊಳ್ಳಬಹುದಾದ ಪಾತ್ರವದು.
ರಾಜಕಾರಣದಲ್ಲಿ ಎದುರಾಗುವ ಸವಾಲುಗಳನ್ನೆಲ್ಲಾ ಮೆಟ್ಟಿನಿಂತು ತನ್ನ ಆಳ್ವಿಕೆಯ ಘನೋದ್ಧೇಶಗಳನ್ನು ಈಡೇರಿಸಿಕೊಳ್ಳುವ ತುಘಲಕ್ ಈ ಉದ್ದೇಶಗಳ ಸಫಲತೆಯಿಂದಾಗಿಯೇ ಅಂತಿಮವಾಗಿ ಒಂಟಿತನದ ಜಟಿಲವಾದ ಕಠಿಣ ಸಂದಿಗ್ಧತೆಗೆ ಒಳಗಾಗುವುದು ವಿಪರ್ಯಾಸವೇ ಸರಿ. ಚಕ್ರವರ್ತಿಯಾಗಿ ರಾಜ್ಯವನ್ನಾಳಬಲ್ಲ ಸರಳ ಚಾರಿತ್ರಿಕ ಪಾತ್ರವೊಂದು ರಾಜಕೀಯ, ಸಾಮಾಜಿಕ, ಧಾರ್ಮಿಕ ಸಮಸ್ಯೆಗಳನ್ನೆದುರಿಸುವ  ಭರದಲ್ಲಿ ಚಲನೆಯಲ್ಲಿರುವಂತೆಯೇ ಹೇಗೆಲ್ಲಾ ತನ್ನನ್ನು ಸಂಕೀರ್ಣತೆಗೊಡ್ಡಿಕೊಳ್ಳುತ್ತದೆ ಎಂಬುದಕ್ಕೆ ತುಘಲಕ್ ಸಾಕ್ಷಿಯಾಗುತ್ತಾನೆ. ಸ್ವಾತಂತ್ರ್ಯೋತ್ತರ ಭಾರತದ ರಾಜಕೀಯ ವಿಪ್ಲವಗಳು, ಸಾಂಸ್ಕೃತಿಕ ಹಾಗೂ ಸಾಮಾಜಿಕ ಪಲ್ಲಟಗಳು, ಅಭಿವೃದ್ಧಿಯ ಹೆಸರಿನಲ್ಲಿ ನಡೆದ ನೈತಿಕ ಪತನಗಳು,  ಸಂಕ್ರಮಣ ಕಾಲದ ಸಾಹಿತ್ಯದ ಸ್ಥಿತ್ಯಂತರಗಳು ಕಾರ್ನಾಡರು ಈ ನಾಟಕ ರಚಸುವಂತೆ ಭೂಮಿಕೆಯನ್ನೊದಗಿಸಿರಬೇಕು. ವಸಾಹತೋತ್ತರ ಕಾಲಘಟ್ಟದ ಚಿಂತನೆಯ ದಟ್ಟ  ಪ್ರಭಾವವನ್ನು 'ತುಘಲಕ್' ಅಲ್ಲದೇ ಕಾರ್ನಾಡರ ಇತರೆ ನಾಟಕಗಳಲ್ಲಿಯೂ ಸ್ಪಷ್ಟವಾಗಿ ಕಾಣಬಹುದು.   ಇವರ "ನಾಗಮಂಡಲ" ನಾಟಕದ  ವಸ್ತುವಿನ ಮೇಲೆ ನಮ್ಮ  ಪರಂಪರೆ ಹಾಗೂ ಗ್ರಾಮೀಣ ಸಂಸ್ಕೃತಿಯ ಗಾಢವಾದ ಛಾಯೆಯಿರುವುದನ್ನು ಗುರುತಿಸಬಹುದಾಗಿದೆ. ಜಾನಪದ ಸಂಸ್ಕೃತಿಯನ್ನೇ ಜೀವಾಳವಾಗಿಟ್ಡುಕೊಂಡ 'ನಾಗಮಂಡಲ' ಅವರ ಅನನ್ಯ ರಚನೆಗಳಲ್ಲಿ ವಿಭಿನ್ನ. ಭಾರತೀಯ ಪರಂಪರೆ ಹಾಗೂ ಸಂಸ್ಕೃತಿಯನ್ನು ಗೌರವಿಸುವ ಇವರ  ನಾಗಮಂಡಲ ಚಂದ್ರಶೇಖರ ಕಂಬಾರರವರ ನಾಟಕ ಹಾಗೂ  ಕಾದಂಬರಿಗಳನ್ನು ನೆನಪಿಸುವಂತೆ ಮಾಡುತ್ತದೆ. ತಾವು ಬದುಕಿದ ನೆಲಮೂಲ ಸಂಸ್ಕೃತಿಯ ಪ್ರಭಾವಳಿಯಲ್ಲಿ ವಿಶಿಷ್ಟ ರೂಹು ಪಡೆದ ಇವರ ಭಾಷೆಯಂತೂ ಧಾರವಾಡ ಹಾಗೂ ಬೆಳಗಾವಿ ಕನ್ನಡಗಳ ಸಮ್ಮಿಳಿತದಿಂದ ಸವಿಜೇನಿನ ಸಿಹಿಯನ್ನು ಪಡೆದುಕೊಂಡಿದೆ. ಸಾಂಸ್ಕೃತಿಕ ನಗರಿಯಾದ ಧಾರವಾಡ ಹಾಗೂ ಮಲೆನಾಡ ಸೆರಗಿನ ಬೆಳಗಾವಿಯ ಮಣ್ಣಿನ ಸೊಗಡಿನ ಸುಗಂಧವನ್ನು ಬೀರುವ ಇವರ ಭಾಷಾಪ್ರೌಢಿಮೆ ಬೆರಗುಗೊಳಿಸುವಂತಹುದು. ಸಿನೇಮಾ, ನಟನೆ, ನಿರ್ದೇಶನ ಕ್ಷೇತ್ರಗಳು ಕೈಬೀಸಿ ಕರೆದಾಗ  ಕಲಾವಿದನ ಪರಕಾಯ ಪ್ರವೇಶವನ್ನು ಮಾಡಿ ಕಲಾಲೋಕದಲ್ಲಿಯೂ ಸೈ ಎನಿಸಿಕೊಂಡ ಧೀಮಂತ ವ್ಯಕ್ತಿತ್ವ ಕಾರ್ನಾಡರದು. "ಗಾನಯೋಗಿ ಪಂಚಾಕ್ಷರಿ ಗವಾಯಿಗಳು' ಸಿನೆಮಾದಲ್ಲಿನ ಅವರ ಗುರು ಪಾತ್ರವಂತೂ  ಜನಮನಸೂರೆಗೊಂಡ ಬಗೆಯೇ ವರ್ಣಿಸಲಸದಳ.  ಯು. ಆರ್. ಅನಂತಮೂರ್ತಿಯವರ 'ಸಂಸ್ಕಾರ' ಕಾದಂಬರಿ ಆಧಾರಿತ ಚಲನಚಿತ್ರದಲ್ಲಿನ  ಪ್ರಾಣೇಶಾಚಾರ್ಯರ ಪಾತ್ರವು ಕನ್ನಡಕ್ಕೆ ಪ್ರಥಮ ಸ್ವರ್ಣಕಮಲ ಗೌರವವನ್ನು  ತಂದುಕೊಟ್ಟ ಹೆಗ್ಗಳಿಕೆ ಹೊಂದಿದೆ.
ತುಘಲಕ್ ಕನ್ಮಡ ವಾಙ್ಮಯ ಲೋಕದ ಅದ್ವಿತೀಯ ನಾಟಕರತ್ನಗಳಲ್ಲಿ ಅನನ್ಯವಾದುದು.  ವರ್ತಮಾನದ ದೇಶ ದೇಶಗಳ ಮಧ್ಯದ ಜಾಗತಿಕ ವಿವಾದದ ವೈಮನಸ್ಸುಗಳಿಗೂ ಕನ್ನಡಿ ಹಿಡಿದು ಪರಿಹಾರಗಳನ್ನು ಸೂಚಿಸುವಂತಿರುವ ಈ ನಾಟಕದ ಪ್ರಸ್ತುತತೆ ಗಿರೀಶ ಕಾರ್ನಾಡರವರ ಪ್ರತಿಭಾವಿಲಾಸದ ವೈಶಾಲ್ಯತೆಯ ದೂರದೃಷ್ಟಿಗೆ ಸಾಕ್ಷಿಯಾಗಿದೆ. ಇಂತಹ ಅಪೂರ್ವ ಪ್ರತಿಭಾಸಂಪನ್ನರನ್ನು ಕಳೆದುಕೊಂಡ ಭಾರತೀಯ ಸಾಂಸ್ಕೃತಿಕ ಲೋಕ ಬಡವಾಗಿದೆ.ಬಾಲ್ಯದಲ್ಲಿ ಗೆಳೆಯರಿಂದ ಬಣ್ಣಿಸಲ್ಪಟ್ಟ ಕಾರ್ನಾಡರೆಂಬ ಸಿಹಿಯಾದ "ಮಾವಿನ ತಳಿರು" ಇಹದ ಮಾಮರದಿಂದ ಬೇರ್ಪಟ್ಟಿದೆ.  ಕರುನಾಡಿನ ಅಜರಾಮರ ಕಲೋಪಾಸಕ ಕಾರ್ನಾಡರಿಗೆ ಶ್ರದ್ಧಾಂಜಲಿ.


'ತುಘಲಕ್'ನೊಂದಿಗೆ  ಮಾತಿಗಿಳಿದಾಗ...
ಪುರಾಣವನ್ನಾಧರಿಸಿದ 'ಯಯಾತಿ', ಚರಿತ್ರೆಯನ್ನಾಧರಿಸಿದ 'ತುಘಲಕ್' ನಂತಹ ಶ್ರೇಷ್ಠ ನಾಟಕಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ ಗಿರೀಶ ಕಾರ್ನಾಡರು ಕನ್ನಡಕ್ಕೆ ಪ್ರಥಮ ಸ್ವರ್ಣಕಮಲ ಪ್ರಶಸ್ತಿ ತಂದುಕೊಟ್ಟು ಕನ್ನಡ ರಂಗಭೂಮಿ ಹಾಗೂ ಸಿನೇಮಾರಂಗವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಿದ ಅಪ್ರತಿಮ ಸಾಧಕರು. ಅವರ ೨೭ ನೇಯ ವಯಸ್ಸಿನಲ್ಲಿಯೇ ರಚಿತವಾದ ತುಘಲಕ್ ಅವರನ್ನು ಕೀರ್ತಿಯ ಶಿಖರಕ್ಕೇರಿಸಿದ ನಾಟಕ.ನನ್ನ ಹೃನ್ಮನಗಳನ್ನು ಸೆಳೆದ ನಾಟಕಗಳಲ್ಲಿ ತುಘಲಕ್ ಅತ್ಯಂತ ವಿಶಿಷ್ಟವಾದುದು.ಇದರ ರಂಗಪ್ರಯೋಗವಂತೂ ನನ್ನನ್ನು ಗತಕಾಲದ ಚರಿತ್ರೆಯತ್ತ ಹೆಜ್ಜೆ ಹಾಕಿ ಶೋಧನೆಗಿಳಿಯುವಂತೆ ಪ್ರೇರೇಪಿಸಿತು.ಇತಿಹಾಸದೊಂದಿಗಿನ ಅನುಸಂಧಾನವೇ ಈ ನಾಟಕದ ಸೃಷ್ಟಿಯ ರಹಸ್ಯಗಳಲ್ಲೊಂದು. ತುಘಲಕ್  ವಿಶಿಷ್ಟವಾದ  ಚಿಂತನೆಯ ಹೊಸ ಹೊಳವುಗಳನ್ನು ಸ್ಫುರಿಸಬಲ್ಲ ಮಾರ್ಗದರ್ಶಿ ನಾಟಕವಾಗಿದೆ. ದೌಲತಾಬಾದ್ ನಿಂದ ದೆಹಲಿಗೆ ದೆಹಲಿಯಿಂದ ದೌಲತಾಬಾದ್ ಗೆ ರಾಜಧಾನಿಯ ವರ್ಗಾವಣೆ, ಬೆಳ್ಳಿಯ ನಾಣ್ಯಗಳ ಬದಲಾಗಿ ತಾಮ್ರದ ನಾಣ್ಯಗಳನ್ನು ಜಾರಿಗೆ ತರುವಂತಹ  ದುಡುಕಿನ ಜನಪರ ಯೋಜನೆಗಳನ್ನು ಜಾರಿಗೆ ತಂದು ವಿಫಲನಾದ ಮೂರ್ಖ ದೊರೆಯೆಂದು ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ  ತುಘಲಕ್ ನನ್ನು ರಂಗದ ಮೇಲೆ ನಿಲ್ಲಿಸಿ ಇತಿಹಾಸದ ಮಣ್ಣಿನಲ್ಲಿ ಹೂತುಹೋಗಿರುವ  ಅಪರೂಪದ ಚಕ್ರವರ್ತಿಯೆಂದು ದೃಶ್ಯೀಕರಿಸಿ ಸಾರುವ ನಾಟಕ ವೆಂದರೆ ಅದು ಗಿರೀಶ ಕಾರ್ನಾಡರ ತುಘಲಕ್. ರಾಜಕೀಯದ ಚದುರಂಗದಾಟವನ್ನು  ಬಲ್ಲವನಾಗಿದ್ದ ಚಾಣಾಕ್ಷ ತುಘಲಕ್ ತನ್ನ ಸಾಮ್ರಾಜ್ಯದ ಉಳಿವಿಗಾಗಿ  ಚಾಣಕ್ಯನ ತಂತ್ರಗಳ ದಾಳಗಳನ್ನುರುಳಿಸಿ ಗೆಲ್ಲುವ ರಾಜತಂತ್ರ ನಿಪುಣನೂ ಆಗಿದ್ದನೆಂಬುದಕ್ಕೆ ನಾಟಕ ನಿದರ್ಶನಗಳನ್ನು ಒದಗಿಸುತ್ತದೆ.ಗಿರೀಶ ಕಾರ್ನಾಡರು "ತುಘಲಕ್ ರಾಜಧಾನಿಯನ್ನು ಪದೇ ಪದೇ ಬದಲಾಯಿಸುವುದರ ಜೊತೆಗೆ ತನ್ನ ಸಾಮ್ರಾಜ್ಯದಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ನಿಷೇಧಿಸಿದ್ದ ಅಚ್ಚರಿಯ ಸಂಗತಿ ಈ ನಾಟಕ ಸೃಷ್ಟಿಸಲೊಂದು ಕಾರಣವಾಯಿತು.ಇತಿಹಾಸದ  ಗರ್ಭದಲ್ಲಡಗಿದ್ದ ಈ ಚಿಕ್ಕ ಎಳೆಯೇ ನನ್ನ ನಾಟಕಕ್ಕೆ ಪ್ರೇರಣೆಯನ್ನೊದಗಿಸಿತು" ಎಂದು ನಾಟಕ ರಚನೆಯಾದ ಸಂದರ್ಭವನ್ನು ಕುರಿತು ವಿವೇಚಿಸುತ್ತಾರೆ.
ನಿಜ.ಕೃತಿಯೊಂದು ಜನ್ಮತಾಳಲು ಮಹತ್ ಸಂಗತಿಗಳೇ ಘಟಿಸಬೇಕೆಂದೇನಿಲ್ಲ,ತನ್ನ ಬಾಣದ ಮರ್ಮಾಘಾತದಿಂದ ತತ್ತರಿಸಿ ನಲುಗುವ ಕ್ರೌಂಚಪಕ್ಷಿಗಳ ನರಳಾಟದಿಂದ ಹೊಮ್ಮಿದ ಮಾನಿಷಾದ ಶ್ಲೋಕವಾಗಿರಬಹುದು,  ಬೀದಿಯ ಪಕ್ಕ ಮೈಯರಳಿಸಿಕೊಂಡು ನಿಂತ  ಹೆಸರಿಲ್ಲದ ಹೂಗಳ ಸೌಂದರ್ಯವಿರಬಹುದು, ಸೂರ್ಯನ ಹೊಂಗಿರಣಗಳಿಗೆ ಮೈಚಾಚಿಕೊಂಡು ಹರಡಿದ ಸರೋವರವರದ ನೋಟವಿರಬಹುದು, ವಸಂತಕ್ಕೊಮ್ಮೆ ಭುವಿಯಲಂಕರಿಸುವ ಶ್ರಾವಣದ ಚಿಗುರಿರಬಹುದು, ಮೂಡಲಮನೆಯ ಬಾಗಿಲು ತೆರೆದು ರವಿ ಚಿಮುಕಿಸುವ ಇಬ್ಬನಿಯ ಹನಿಗಳಾಟದಂತಹ ಚಿಕ್ಕ ಸಂಗತಿಗಳೂ ಬರಹಗಾರನಲ್ಲಿ ಕೃತಿ ಸೃಷ್ಟಿಯ ಸ್ಪೂರ್ತಿಯ ಚಿಲುಮೆಗಳನ್ನು ಚಿಮ್ಮಿಸಬಲ್ಲವು. ಇತಿಹಾಸ ಹಾಗೂ ಪುರಾಣಗಳನ್ನು ತುಸು ಹೆಚ್ಚಾಗಿಯೇ ಪ್ರೀತಿಸುವ ಗಿರೀಶ ಕಾರ್ನಾಡರನ್ನು ವಿಲಕ್ಷಣ ವ್ಯಕ್ತಿತ್ವದ ತುಘಲಕ್ ಸೆಳೆದದ್ದರಲ್ಲಿ ಅಚ್ಚರಿಯೇನಲ್ಲ.
:ತುಘಲಕ್' ನಾಟಕ ಸಮಕಾಲೀನ ರಾಜಕೀಯ, ಸಾಮಾಜಿಕ ಸಂದರ್ಭಗಳ ಅವಲೋಕನಕ್ಕೆ ಮುನ್ನುಡಿ ಬರೆಯುವಂತಿದೆ.  ವ್ಯಕ್ತಿಯು ಭಾವತರಂಗಗಳೊಂದಿಗೆ  ಮುಖಾಮುಖಿಯಾಗುವ ಬಗೆಯನ್ನು ತುಘಲಕ್ ನ ಮುಖೇನ ತೆರೆದಿಡುವ ನಾಟಕವು ಚರಿತ್ರೆಯ ಕೇಂದ್ರವಾದ ವ್ಯಕ್ತಿಯನ್ನು ಮರುವ್ಯಾಖ್ಯಾನಿಸುತ್ತದೆ. ೧೪ ನೇ ಶತಮಾನದಲ್ಲಿಯೇ  ಪ್ರಜಾಪರ ಭಾವೈಕ್ಯತೆಯ ಶಾಂತಿಯ ಬನವನ್ನಾಗಿ ತನ್ನ ಸಾಮ್ರಾಜ್ಯವನ್ನು  ಸೃಷ್ಟಿಸಬೇಕೆಂಬ ಹಂಬಲದ ಈ ಸರ್ವಾಧಿಕಾರಿ,ತನಗೆ ಎದುರಾದ ಧರ್ಮ ಹಾಗೂ ರಾಜಕೀಯದೊಂದಿಗಿನ  ಸಂಘರ್ಷಗಳನ್ನು ಚಾಣಾಕ್ಷತನದಿಂದ  ಮೆಟ್ಟಿನಿಂತರೂ ಕೊನೆಗೆ ಜೊತೆಗಾರರಿಲ್ಲದ ಒಂಟಿತನಕ್ಕೆ ಬಲಿಯಾಗುವ ದುರಂತನಾಯಕನಾಗುವುದು ವಿಪರ್ಯಾಸವೇ ಸರಿ. ಇತಿಹಾಸ ತಜ್ಞರಿಂದ, ರಾಜಪಂಡಿತರಿಂದ  'ಹುಚ್ಚುದೊರೆ' ಎಂದು ಪಟ್ಟಗಟ್ಟಿಸಿಕೊಂಡವನ ರಾಜತಂತ್ರ ನೈಪುಣ್ಯತೆಯ ಹತ್ತಾರು ಮುಖಗಳನ್ನು ಪ್ರತ್ಯೇಕ ಅಂಕಪರದೆಯಿಲ್ಲದೇ  ಅನಾವರಣಗೊಳಿಸುವ ಈ ತುಘಲಕ್ ನಾಟಕ ನಮ್ಮ ಪೂರ್ವಾಗ್ರಹಗಳನ್ನು ಕಳಚಿಕೊಂಡು ಇತಿಹಾಸದೊಂದಿಗೆ ಮರು ಅನುಸಂಧಾನಕ್ಕಿಳಿಯುವ ಅಗತ್ಯವನ್ನು ಪ್ರತಿಪಾದಿಸುತ್ತದೆ.ಚರಿತ್ರೆ ಪುರಾಣಗಳ ಮೂಲಕ  ಭಾರತೀಯ ಸಂಸ್ಕೃತಿಯ ಅನನ್ಯತೆಯನ್ನು ಎತ್ತಿಹಿಡಿಯುವ ಕಾರ್ನಾಡರು ತಮ್ಮ ಪ್ರಥಮ ನಾಟಕ "ಯಯಾತಿ"ಗೆ ದೊರೆತ ಮನ್ನಣೆಯಿಂದಾಗಿ ಕನ್ನಡಕ್ಕೆ ದಕ್ಕುವಂತಾಗಿದ್ದು ಕನ್ನಡಿಗರ ಭಾಗ್ಯವೆಂದೇ ಹೇಳಬೇಕು. ಚಾರಿತ್ರಿಕ ಸತ್ಯಗಳಿಗೆ ನಿಷ್ಠವಾಗಿರುವ ವಸ್ತುವೊಂದನ್ನು ತಮ್ಮ ಸೃಜನಶೀಲತೆಯ ಮೂಸೆಯಲ್ಲಿ ಕರಗಿಸಿ ಒಪ್ಪವಿಟ್ಟು, ಪ್ರಮಾಣಬದ್ಧ ಸುಂದರ ಪುತ್ಥಳಿಯನ್ನಾಗಿ ನಿರ್ಮಿಸಿದ ಹೆಗ್ಗಳಿಕೆ ಕಾರ್ನಾಡರದು.
ಸರ್ವಾಧಿಕಾರದ ದರ್ಪವೋ, ಪ್ರಜಾರಕ್ಷಣೆಯ ಕಂಕಣಬದ್ಧತೆಯೊ,ರಾಜಕಾರಣದ ಚದುರಂಗದಾಟವೋ, ಧರ್ಮನಿರಪೇಕ್ಷತೆಯ ಒತ್ತಡವೋ, ಪರಿಸ್ಥಿತಿಯ ಸುಳಿಗೆ ಸಿಲುಕಿ ಸಾಮ್ರಾಜ್ಯವನ್ನಾಳುವ ರಾಜತಂತ್ರ ಪಾಂಡಿತ್ಯವೋ, ಪ್ರತಿಕ್ಷಣವೂ ಎಚ್ಚರವಾಗಿದ್ದು ತನ್ನನ್ನು ಮುನ್ನಡೆಸುತ್ತಿದ್ದ ತನ್ನೊಳಗಿನ ಆತ್ಮಸಾಕ್ಷಿಗೆ ಉತ್ತರವನ್ನು ಹುಡುಕುವ ಮಹತ್ವಾಕಾಂಕ್ಷೆಯೋ ಅಥವಾ ವಿಜ್ಞಾನದ ಸಂಯುಕ್ತವಸ್ತುವಿನಂತೆ ಇವೆಲ್ಲ ಗುಣಗಳನ್ನು  ಸಂಯೋಜಿಸಿಕೊಂಡು ವಿಭಿನ್ನವಾಗಿ ರೂಪುತಳೆದ ಚತುರ ಆಡಳಿತಗಾರನೊಬ್ಬನ ಲಕ್ಷಣವೋ ಗೊತ್ತಿಲ್ಲ, ಕಾರ್ನಾಡರು ಸೃಜಿಸಿದ ತುಘಲಕ್ ನ ಬಹುಮುಖ ವಿಸ್ತಾರದ ಅರ್ಥವ್ಯಾಪ್ತಿಯಂತೂ ಅನಂತವಾದುದು; ಮುಕ್ತವಾದುದು; ಅನನ್ಯವಾದುದು.
ಧರ್ಮಪಾಲನೆಯ ಕಾರಣಕ್ಕಾಗಿ ತನ್ನನ್ನು ಟೀಕಿಸಿದ ಧರ್ಮಗುರು ಶೇಖ್ ಇಮಾಮುದ್ದೀನ್ ನನ್ನು ತನ್ನೊಂದಿಗೆ ಹಗೆತನವಿಟ್ಟುಕೊಂಡಿದ್ದ ಸಾಮಂತ ಅರಸನೊಬ್ಬನೊಂದಿಗೆ ಸಂಧಾನಕ್ಕೆ ಕಳುಹಿಸಿ ರಣರಂಗದಲ್ಲಿ ಕೊಲ್ಲಿಸಿ ಟೀಕೆಯನ್ನು,ಟೀಕಾಕಾರನನ್ನೂ ಮಣ್ಣೊಳಗೆ ಹೂತುಹಾಕುವ  ತುಘಲಕ್ ನ ಪ್ರಯತ್ನ ಯಶಸ್ವಿಯಾಗುತ್ತದೆ. ತನ್ನ ಸಿಂಹಾಸನಕ್ಕೆ ಕುತ್ತಾಗುವರೆಂದು ತಂದೆ ಹಾಗೂ ತಮ್ಮನನ್ನು ಅಲ್ಲದೇ ತನ್ನ ಹಿತಚಿಂತಕ ನಜೀಬ್ ನನ್ನು ವಿಷವಿಕ್ಕಿ ಕೊಲ್ಲಿಸಿದ ಹೆತ್ತತಾಯಿಯನ್ನೂ ಅರಮನೆಯಿಂದ ಸಾವಿನ ಮನೆಗೆ ದೂಡುವ  ಸರ್ವಾಧಿಕಾರಿಯಾಗಿಯೂ ತುಘಲಕ್ ಗೋಚರಿಸುವ ಪರಿ ಈ ನಾಟಕದಲ್ಲಿ ವಿಲಕ್ಷಣವಾಗಿ ಮೂಡಿಬಂದಿದೆ. 
ತಾನು ಪ್ರಾರ್ಥನೆಯಲ್ಲಿರುವಾಗ   ಧರ್ಮಾಂಧ ಅಮೀರರು ಹಾಗೂ ಪ್ರಾಣಸ್ನೇಹಿತ ಶಹಾಬುದ್ದೀನ್ ಹೂಡುವ ಕೊಲೆಯ ಸಂಚಿನಿಂದ ಪಾರಾಗುವ ದೊರೆ ಕೊಲೆಗಡುಕರನ್ನು  ಬೇಟೆಯಾಡುತ್ತಾನೆ.ಕರುಳುಬಳ್ಳಿಯೊಂದಿಗೆ ತಳುಕು ಹಾಕಿಕೊಂಡಿರುವ ಮಾನವ ಸಂಬಂಧಗಳನ್ನೇ ಬಲಿಕೊಡುವ ತುಘಲಕ್, ಒಂದು ಹಂತದಲ್ಲಿ ತಾನು ಆರಾಧಿಸುವ ಸಾಮ್ರಾಜ್ಯದ ನಂಟಿನಿಂದ,  ಏಕಾಂತದ ಪರದತ್ತ ಪಯಣಿಸಲು ಬೇಕಾದ ಪೂರ್ವಸಿದ್ಧತೆಗಳನ್ನು ಕೈಗೊಳ್ಳುವ ದಾಸರಂತೆ ಗ್ರಾಹ್ಯನಾದರೂ ಪಾಪಪ್ರಜ್ಞೆಯಿಂದಾಗಿ ಆ ಸದವಕಾಶವನ್ನು ಕಳೆದುಕೊಂಡ ನತದೃಷ್ಟನಾಗುತ್ತಾನೆ. ತುಘಲಕ್ ಒಬ್ಬ ವೃತ್ತಿಪರ ಅರಸನಂತೆ ಸಮರ್ಥ ಆಡಳಿತಗಾರನಾಗಿದ್ದ ಪ್ರಜಾಪರಿಪಾಲಕನಾಗಿದ್ದ ಎಂಬುದಕ್ಕೆ ನಾಟಕ ನಿದರ್ಶನಗಳನ್ನೊದಗಿಸುತ್ತದೆ. ರಾಜ್ಯಾಡಳಿತಕ್ಕಿಂತಲೂ ತುಘಲಕ್ ನ ವೈಯಕ್ತಿಕ ವ್ಯಕ್ತಿತ್ವವನ್ನು ಕುರಿತು ವಿವೇಚಿಸುವ ನಾಟಕ ಚಕ್ರವರ್ತಿಯೊಬ್ಬನ  ಅಂತರಂಗದ  ವ್ಯಾಪಾರವಿಲಾಸವನ್ನು ಮನೋಜ್ಞವಾಗಿ ತೆರೆದಿಡುತ್ತದೆ.
ತುಘಲಕ್ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಪಡೆಮೂಡಿ  ನವ್ಯತೆಯಿಂದ ಕಂಗೊಳಿಸಿದ ಕೃತಿರತ್ನ. ಈ ನಾಟಕದಲ್ಲಿ ತುಘಲಕ್ ಅತ್ಯಂತ ಕ್ರಿಯಾಶೀಲ ಹಾಗೂ ಚಲನಶೀಲವಾಗಿರುವ ಪ್ರಧಾನ ಪಾತ್ರ. ತನ್ನ ಮಾನಸಿಕ ಹಾಗೂ ಭಾವನಾತ್ಮಕ ತೊಳಲಾಟದೊಡನೆಯೂ ಒಬ್ಬ ಅತ್ಯುತ್ತಮ ಸಾಮ್ರಾಜ್ಯಶಾಹಿ ಎಂದು ಕರೆಸಿಕೊಳ್ಳಬಹುದಾದ ಪಾತ್ರವದು.
ರಾಜಕಾರಣದಲ್ಲಿ ಎದುರಾಗುವ ಸವಾಲುಗಳನ್ನೆಲ್ಲಾ ಮೆಟ್ಟಿನಿಂತು ತನ್ನ ಆಳ್ವಿಕೆಯ ಘನೋದ್ಧೇಶಗಳನ್ನು ಈಡೇರಿಸಿಕೊಳ್ಳುವ ತುಘಲಕ್ ಈ ಉದ್ದೇಶಗಳ ಸಫಲತೆಯಿಂದಾಗಿಯೇ ಅಂತಿಮವಾಗಿ ಒಂಟಿತನದ ಜಟಿಲವಾದ ಕಠಿಣ ಸಂದಿಗ್ಧತೆಗೆ ಒಳಗಾಗುವುದು ವಿಪರ್ಯಾಸವೇ ಸರಿ. ಚಕ್ರವರ್ತಿಯಾಗಿ ರಾಜ್ಯವನ್ನಾಳಬಲ್ಲ ಸರಳ ಚಾರಿತ್ರಿಕ ಪಾತ್ರವೊಂದು ರಾಜಕೀಯ, ಸಾಮಾಜಿಕ, ಧಾರ್ಮಿಕ ಸಮಸ್ಯೆಗಳನ್ನೆದುರಿಸುವ  ಭರದಲ್ಲಿ ಚಲನೆಯಲ್ಲಿರುವಂತೆಯೇ ಹೇಗೆಲ್ಲಾ ತನ್ನನ್ನು ಸಂಕೀರ್ಣತೆಗೊಡ್ಡಿಕೊಳ್ಳುತ್ತದೆ ಎಂಬುದಕ್ಕೆ ತುಘಲಕ್ ಸಾಕ್ಷಿಯಾಗುತ್ತಾನೆ. ಸ್ವಾತಂತ್ರ್ಯೋತ್ತರ ಭಾರತದ ರಾಜಕೀಯ ವಿಪ್ಲವಗಳು, ಸಾಂಸ್ಕೃತಿಕ ಹಾಗೂ ಸಾಮಾಜಿಕ ಪಲ್ಲಟಗಳು,ಅಭಿವೃದ್ಧಿಯ ಹೆಸರಿನಲ್ಲಿ ನಡೆದ ನೈತಿಕ ಪತನಗಳು,  ಸಂಕ್ರಮಣ ಕಾಲದ ಸಾಹಿತ್ಯದ ಸ್ಥಿತ್ಯಂತರಗಳು ಕಾರ್ನಾಡರು ಈ ನಾಟಕ ರಚಸುವಂತೆ ಭೂಮಿಕೆಯನ್ನೊದಗಿಸಿರಬೇಕು. 'ತುಘಲಕ್' ಅಲ್ಲದೇ ವಸಾಹತೋತ್ತರ ಕಾಲಘಟ್ಟದ ಚಿಂತನೆಯ ದಟ್ಟ  ಪ್ರಭಾವವನ್ನು 'ತುಘಲಕ್' ಅಲ್ಲದೇ ಕಾರ್ನಾಡರ ಇತರೆ ನಾಟಕಗಳಲ್ಲಿಯೂ ಸ್ಪಷ್ಟವಾಗಿ ಕಾಣಬಹುದು.   ಇವರ "ನಾಗಮಂಡಲ" ನಾಟಕದ  ವಸ್ತುವಿನ ಮೇಲೆ ನಮ್ಮ  ಪರಂಪರೆ ಹಾಗೂ ಗ್ರಾಮೀಣ ಸಂಸ್ಕೃತಿಯ ಗಾಢವಾದ ಛಾಯೆಯಿರುವುದನ್ನು ಗುರುತಿಸಬಹುದಾಗಿದೆ. ಜಾನಪದ ಸಂಸ್ಕೃತಿಯನ್ನೇ ಜೀವಾಳವಾಗಿಟ್ಡುಕೊಂಡ 'ನಾಗಮಂಡಲ' ಅವರ ಅನನ್ಯ ರಚನೆಗಳಲ್ಲಿ ವಿಭಿನ್ನ. ಭಾರತೀಯ ಪರಂಪರೆ ಹಾಗೂ ಸಂಸ್ಕೃತಿಯನ್ನು ಗೌರವಿಸುವ ಇವರ  ನಾಗಮಂಡಲ ಚಂದ್ರಶೇಖರ ಕಂಬಾರರವರ ನಾಟಕ ಹಾಗೂ  ಕಾದಂಬರಿಗಳನ್ನು ನೆನಪಿಸುವಂತೆ ಮಾಡುತ್ತದೆ. ತಾವು ಬದುಕಿದ ನೆಲಮೂಲ ಸಂಸ್ಕೃತಿಯ ಪ್ರಭಾವಳಿಯಲ್ಲಿ ವಿಶಿಷ್ಟ ರೂಹು ಪಡೆದ ಇವರ ಭಾಷೆಯಂತೂ ಧಾರವಾಡ ಹಾಗೂ ಬೆಳಗಾವಿ ಕನ್ನಡಗಳ ಸಮ್ಮಿಳಿತದಿಂದ ಸವಿಜೇನಿನ ಸಿಹಿಯನ್ನು ಪಡೆದುಕೊಂಡಿದೆ. ಸಾಂಸ್ಕೃತಿಕ ನಗರಿಯಾದ ಧಾರವಾಡ ಹಾಗೂ ಮಲೆನಾಡ ಸೆರಗಿನ ಬೆಳಗಾವಿಯ ಮಣ್ಣಿನ ಸೊಗಡಿನ ಸುಗಂಧವನ್ನು ಬೀರುವ ಇವರ ಭಾಷಾಪ್ರೌಢಿಮೆ ಬೆರಗುಗೊಳಿಸುವಂತಹುದು. ಸಿನೇಮಾ, ನಟನೆ, ನಿರ್ದೇಶನ ಕ್ಷೇತ್ರಗಳು ಕೈಬೀಸಿ ಕರೆದಾಗ  ಕಲಾವಿದನ ಪರಕಾಯ ಪ್ರವೇಶವನ್ನು ಮಾಡಿ ಕಲಾಲೋಕದಲ್ಲಿಯೂ ಸೈ ಎನಿಸಿಕೊಂಡ ಧೀಮಂತ ವ್ಯಕ್ತಿತ್ವ ಕಾರ್ನಾಡರದು. "ಗಾನಯೋಗಿ ಪಂಚಾಕ್ಷರಿ ಗವಾಯಿಗಳು' ಸಿನೆಮಾದಲ್ಲಿನ ಅವರ ಪಾತ್ರವಂತೂ  ಜನಮನಸೂರೆಗೊಂಡ ಬಗೆಯೇ ವರ್ಣಿಸಲಸದಳ.  ಯು. ಆರ್. ಅನಂತಮೂರ್ತಿಯವರ 'ಸಂಸ್ಕಾರ' ಕಾದಂಬರಿ ಆಧಾರಿತ ಚಲನಚಿತ್ರದಲ್ಲಿನ  ಪ್ರಾಣೇಶಾಚಾರ್ಯರ ಪಾತ್ರವಂತೂ ಕನ್ನಡಕ್ಕೆ ಪ್ರಥಮ ಸ್ವರ್ಣಕಮಲ ಗೌರವವನ್ನು  ತಂದುಕೊಟ್ಟ ಹೆಗ್ಗಳಿಕೆ ಹೊಂದಿದೆ.
ತುಘಲಕ್ ಕನ್ಮಡ ವಾಙ್ಮಯ ಲೋಕದ ಅದ್ವಿತೀಯ ನಾಟಕರತ್ನಗಳಲ್ಲಿ ಅನನ್ಯವಾದುದು. ದೇಶ ದೇಶಗಳ ಮಧ್ಯದ ಜಾಗತಿಕ ವಿವಾದದ ವೈಮನಸ್ಸುಗಳಿಗೂ ಕನ್ನಡಿ ಹಿಡಿಯುವಂತಿರುವ ಈ ನಾಟಕದ ಪ್ರಸ್ತುತತೆ ಗಿರೀಶ ಕಾರ್ನಾಡರವರ ಪ್ರತಿಭಾವಿಲಾಸದ ವೈಶಾಲ್ಯತೆಯ ದೂರದೃಷ್ಟಿಗೆ ಸಾಕ್ಷಿಯಾಗಿದೆ. ಇಂತಹ ಅಪೂರ್ವ ಪ್ರತಿಭಾಸಂಪನ್ನರನ್ನು ಕಳೆದುಕೊಂಡ ಭಾರತೀಯ ಸಾಂಸ್ಕೃತಿಕ ಲೋಕ ಬಡವಾಗಿದೆ.ಬಾಲ್ಯದಲ್ಲಿ ಗೆಳೆಯರಿಂದ ಬಣ್ಣಿಸಲ್ಪಟ್ಟ ಕಾರ್ನಾಡರೆಂಬ "ಮಾವಿನ ತಳಿರು" ಇಹದ ಮರದಿಂದ ಬೇರ್ಪಟ್ಟಿದೆ.  ಕರುನಾಡಿನ ಅಜರಾಮರ ಕಲೋಪಾಸಕ ಕಾರ್ನಾಡರಿಗೆ ಶ್ರದ್ಧಾಂಜಲಿ.
x

Tuesday, 11 June 2019

"ತುಘಲಕ್" ನೊಂದಿಗೆ ಮಾತಿಗಿಳಿದಾಗ...
ಪುರಾಣವನ್ನಾಧರಿಸಿದ 'ಯಯಾತಿ', ಚರಿತ್ರೆಯನ್ನಾಧರಿಸಿದ 'ತುಘಲಕ್' ನಂತಹ ಶ್ರೇಷ್ಠ ನಾಟಕಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ ಗಿರೀಶ ಕಾರ್ನಾಡರು ಕನ್ನಡಕ್ಕೆ ಪ್ರಥಮ ಸ್ವರ್ಣಕಮಲ ಪ್ರಶಸ್ತಿ ತಂದುಕೊಟ್ಟು ಕನ್ನಡ ರಂಗಭೂಮಿ ಹಾಗೂ ಸಿನೇಮಾರಂಗವನ್ನು ಅಂತಾರಾಷ್ಟ್ರೀಯ ಮಟ್ಡಕ್ಕೇರಿಸಿದ ಅಪ್ರತಿಮ ಸಾಧಕರು. ಅವರ ೨೭ ನೇಯ ವಯಸ್ಸಿನಲ್ಲಿಯೇ ರಚಿತವಾದ ತುಘಲಕ್ ಅವರನ್ನು ಕೀರ್ತಿಯ ಶಿಖರಕ್ಕೇರಿಸಿದ ನಾಟಕ.ನನ್ನ ಹೃನ್ಮನಗಳನ್ನು ಸೆಳೆದ ನಾಟಕಗಳಲ್ಲಿ ತುಘಲಕ್ ಅತ್ಯಂತ ವಿಶಿಷ್ಟವಾದುದು.ಇದರ ರಂಗಪ್ರಯೋಗವಂತೂ ನನ್ನನ್ನು ಗತಕಾಲದ ಚರಿತ್ರೆಯತ್ತ ಹೆಜ್ಜೆ ಹಾಕಿ ಶೋಧನೆಗಿಳಿಯುವಂತೆ ಪ್ರೇರೇಪಿಸಿತು.ಇತಿಹಾಸದೊಂದಿಗಿನ ಅನುಸಂಧಾನವೇ ಈ ನಾಟಕದ ಸೃಷ್ಟಿಯ ರಹಸ್ಯಗಳಲ್ಲೊಂದು. ತುಘಲಕ್  ವಿಶಿಷ್ಟವಾದ  ಚಿಂತನೆಯ ಹೊಸ ಹೊಳವುಗಳನ್ನು ಸ್ಫುರಿಸಬಲ್ಲ ಮಾರ್ಗದರ್ಶಿ ನಾಟಕವಾಗಿದೆ. ದೌಲತಾಬಾದ್ ನಿಂದ ದೆಹಲಿಗೆ ದೆಹಲಿಯಿಂದ ದೌಲತಾಬಾದ್ ಗೆ ರಾಜಧಾನಿಯ ವರ್ಗಾವಣೆ, ಬೆಳ್ಳಿಯ ನಾಣ್ಯಗಳ ಬದಲಾಗಿ ತಾಮ್ರದ ನಾಣ್ಯಗಳನ್ನು ಜಾರಿಗೆ ತರುವಂತಹ  ದುಡುಕಿನ ಜನಪರ ಯೋಜನೆಗಳನ್ನು ಜಾರಿಗೆ ತಂದು ವಿಫಲನಾದ ಮೂರ್ಖ ದೊರೆಯೆಂದು ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ  ತುಘಲಕ್ ನನ್ನು ರಂಗದ ಮೇಲೆ ನಿಲ್ಲಿಸಿ ಇತಿಹಾಸದ ಮಣ್ಣಿನಲ್ಲಿ ಹೂತುಹೋಗಿರುವ  ಅಪರೂಪದ ಚಕ್ರವರ್ತಿಯೆಂದು ದೃಶ್ಯೀಕರಿಸಿ ಸಾರುವ ನಾಟಕ ವೆಂದರೆ ಅದು ಗಿರೀಶ ಕಾರ್ನಾಡರ ತುಘಲಕ್. ರಾಜಕೀಯದ ಚದುರಂಗದಾಟವನ್ನು  ಬಲ್ಲವನಾಗಿದ್ದ ಚಾಣಾಕ್ಷ ತುಘಲಕ್ ತನ್ನ ಸಾಮ್ರಾಜ್ಯದ ಉಳಿವಿಗಾಗಿ  ಚಾಣಕ್ಯನ ತಂತ್ರಗಳ ದಾಳಗಳನ್ನುರುಳಿಸಿ ಗೆಲ್ಲುವ ರಾಜತಂತ್ರ ನಿಪುಣನೂ ಆಗಿದ್ದನೆಂಬುದಕ್ಕೆ ನಾಟಕ ನಿದರ್ಶನಗಳನ್ನು ಒದಗಿಸುತ್ತದೆ.ಗಿರೀಶ ಕಾರ್ನಾಡರು "ತುಘಲಕ್ ರಾಜಧಾನಿಯನ್ನು ಪದೇ ಪದೇ ಬದಲಾಯಿಸುವುದರ ಜೊತೆಗೆ ತನ್ನ ಸಾಮ್ರಾಜ್ಯದಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ನಿಷೇಧಿಸಿದ್ದ ಅಚ್ಚರಿಯ ಸಂಗತಿ ಈ ನಾಟಕ ಸೃಷ್ಟಿಸಲೊಂದು ಕಾರಣವಾಯಿತು.ಇತಿಹಾಸದ  ಗರ್ಭದಲ್ಲಡಗಿದ್ದ ಈ ಚಿಕ್ಕ ಎಳೆಯೇ ನನ್ನ ನಾಟಕಕ್ಕೆ ಪ್ರೇರಣೆಯನ್ನೊದಗಿಸಿತು" ಎಂದು ನಾಟಕ ರಚನೆಯಾದ ಸಂದರ್ಭವನ್ನು ಕುರಿತು ವಿವೇಚಿಸುತ್ತಾರೆ.
ನಿಜ.ಕೃತಿಯೊಂದು ಜನ್ಮತಾಳಲು ಮಹತ್ ಸಂಗತಿಗಳೇ ಘಟಿಸಬೇಕೆಂದೇನಿಲ್ಲ,ತನ್ನ ಬಾಣದ ಮರ್ಮಾಘಾತದಿಂದ ತತ್ತರಿಸಿ ನಲುಗುವ ಕ್ರೌಂಚಪಕ್ಷಿಗಳ ನರಳಾಟದಿಂದ ಹೊಮ್ಮಿದ ಮಾನಿಷಾದ ಶ್ಲೋಕವಾಗಿರಬಹುದು,  ಬೀದಿಯ ಪಕ್ಕ ಮೈಯರಳಿಸಿಕೊಂಡು ನಿಂತ  ಹೆಸರಿಲ್ಲದ ಹೂಗಳ ಸೌಂದರ್ಯವಿರಬಹುದು, ಸೂರ್ಯನ ಹೊಂಗಿರಣಗಳಿಗೆ ಮೈಚಾಚಿಕೊಂಡು ಹರಡಿದ ಸರೋವರವರದ ನೋಟವಿರಬಹುದು, ವಸಂತಕ್ಕೊಮ್ಮೆ ಭುವಿಯಲಂಕರಿಸುವ ಶ್ರಾವಣದ ಚಿಗುರಿರಬಹುದು, ಮೂಡಲಮನೆಯ ಬಾಗಿಲು ತೆರೆದು ರವಿ ಚಿಮುಕಿಸುವ ಇಬ್ಬನಿಯ ಹನಿಗಳಾಟದಂತಹ ಚಿಕ್ಕ ಸಂಗತಿಗಳೂ ಬರಹಗಾರನಲ್ಲಿ ಕೃತಿ ಸೃಷ್ಟಿಯ ಸ್ಪೂರ್ತಿಯ ಚಿಲುಮೆಗಳನ್ನು ಚಿಮ್ಮಿಸಬಲ್ಲವು.ತುಘಲಕ್' ನಾಟಕ ಸಮಕಾಲೀನ ರಾಜಕೀಯ, ಸಾಮಾಜಿಕ ಸಂದರ್ಭಗಳ ಅವಲೋಕನಕ್ಕೆ ಮುನ್ನುಡಿ ಬರೆಯುವಂತಿದೆ.  ವ್ಯಕ್ತಿಯು ಭಾವತರಂಗಗಳೊಂದಿಗೆ  ಮುಖಾಮುಖಿಯಾಗುವ ಬಗೆಯನ್ನು ತುಘಲಕ್ ನ ಮುಖೇನ ತೆರೆದಿಡುವ ನಾಟಕವು ಚರಿತ್ರೆಯ ಕೇಂದ್ರವಾದ ವ್ಯಕ್ತಿಯನ್ನು ಮರುವ್ಯಾಖ್ಯಾನಿಸುತ್ತದೆ. ೧೪ ನೇ ಶತಮಾನದಲ್ಲಿಯೇ  ಪ್ರಜಾಪರ ಭಾವೈಕ್ಯತೆಯ ಶಾಂತಿಯ ಬನವನ್ನಾಗಿ ತನ್ನ ಸಾಮ್ರಾಜ್ಯವನ್ನು  ಸೃಷ್ಟಿಸಬೇಕೆಂಬ ಹಂಬಲದ ಈ ಸರ್ವಾಧಿಕಾರಿ,ತನಗೆ ಎದುರಾದ ಧರ್ಮ ಹಾಗೂ ರಾಜಕೀಯದೊಂದಿಗಿನ  ಸಂಘರ್ಷಗಳನ್ನು ಚಾಣಾಕ್ಷತನದಿಂದ  ಮೆಟ್ಟಿನಿಂತರೂ ಕೊನೆಗೆ ಜೊತೆಗಾರರಿಲ್ಲದ ಒಂಟಿತನಕ್ಕೆ ಬಲಿಯಾಗುವ ದುರಂತನಾಯಕನಾಗುವುದು ವಿಪರ್ಯಾಸವೇ ಸರಿ. ಇತಿಹಾಸ ತಜ್ಞರಿಂದ, ರಾಜಪಂಡಿತರಿಂದ  'ಹುಚ್ಚುದೊರೆ' ಎಂದು ಪಟ್ಟಗಟ್ಟಿಸಿಕೊಂಡವನ ರಾಜತಂತ್ರ ನೈಪುಣ್ಯತೆಯ ಹತ್ತಾರು ಮುಖಗಳನ್ನು ಪ್ರತ್ಯೇಕ ಅಂಕಪರದೆಯಿಲ್ಲದೇ  ಅನಾವರಣಗೊಳಿಸುವ ಈ ತುಘಲಕ್ ನಾಟಕ ನಮ್ಮ ಪೂರ್ವಾಗ್ರಹಗಳನ್ನು ಕಳಚಿಕೊಂಡು ಇತಿಹಾಸದೊಂದಿಗೆ ಮರು ಅನುಸಂಧಾನಕ್ಕಿಳಿಯುವ ಅಗತ್ಯವನ್ನು ಪ್ರತಿಪಾದಿಸುತ್ತದೆ.ಚರಿತ್ರೆ ಪುರಾಣಗಳ ಮೂಲಕ  ಭಾರತೀಯ ಸಂಸ್ಕೃತಿಯ ಅನನ್ಯತೆಯನ್ನು ಎತ್ತಿಹಿಡಿಯುವ ಕಾರ್ನಾಡರು ತಮ್ಮ ಪ್ರಥಮ ನಾಟಕ "ಯಯಾತಿ"ಗೆ ದೊರೆತ ಮನ್ನಣೆಯಿಂದಾಗಿ ಕನ್ನಡಕ್ಕೆ ದಕ್ಕುವಂತಾಗಿದ್ದು ಕನ್ನಡಿಗರ ಭಾಗ್ಯವೆಂದೇ ಹೇಳಬೇಕು.
ಚಾರಿತ್ರಿಕ ಸತ್ಯಗಳಿಗೆ ನಿಷ್ಠವಾಗಿರುವ ವಸ್ತುವೊಂದನ್ನು ತಮ್ಮ ಸೃಜನಶೀಲತೆಯ ಮೂಸೆಯಲ್ಲಿ ಕರಗಿಸಿ ಒಪ್ಪವಿಟ್ಟು, ಪ್ರಮಾಣಬದ್ಧ ಸುಂದರ ಪುತ್ಥಳಿಯನ್ನಾಗಿ ನಿರ್ಮಿಸಿದ ಹೆಗ್ಗಳಿಕೆ ಕಾರ್ನಾಡರದು. ಸರ್ವಾಧಿಕಾರದ ದರ್ಪವೋ, ಪ್ರಜಾರಕ್ಷಣೆಯ ಕಂಕಣಬದ್ಧತೆಯೊ,ರಾಜಕಾರಣದ ಚದುರಂಗದಾಟವೋ, ಧರ್ಮನಿರಪೇಕ್ಷತೆಯ ಒತ್ತಡವೋ, ಪರಿಸ್ಥಿತಿಯ ಸುಳಿಗೆ ಸಿಲುಕಿ ಸಾಮ್ರಾಜ್ಯವನ್ನಾಳುವ ರಾಜತಂತ್ರ ಪಾಂಡಿತ್ಯವೋ, ಪ್ರತಿಕ್ಷಣವೂ ಎಚ್ಚರವಾಗಿದ್ದು ತನ್ನನ್ನು ಮುನ್ನಡೆಸುತ್ತಿದ್ದ ತನ್ನೊಳಗಿನ ಆತ್ಮಸಾಕ್ಷಿಗೆ ಉತ್ತರವನ್ನು ಹುಡುಕುವ ಮಹತ್ವಾಕಾಂಕ್ಷೆಯೋ ಅಥವಾ ವಿಜ್ಞಾನದ ಸಂಯುಕ್ತವಸ್ತುವಿನಂತೆ ಇವೆಲ್ಲ ಗುಣಗಳನ್ನು  ಸಂಯೋಜಿಸಿಕೊಂಡು ವಿಭಿನ್ನವಾಗಿ ರೂಪುತಳೆದ ಚತುರ ಆಡಳಿತಗಾರನೊಬ್ಬನ ಲಕ್ಷಣವೋ ಗೊತ್ತಿಲ್ಲ, ಕಾರ್ನಾಡರು ಸೃಜಿಸಿದ ಬಹುಮುಖ ವಿಸ್ತಾರದ ಅರ್ಥವ್ಯಾಪ್ತಿಯಂತೂ ಅನಂತವಾದುದು; ಮುಕ್ತವಾದುದು; ಅನನ್ಯವಾದುದು.ಧರ್ಮಪಾಲನೆಯ ಕಾರಣಕ್ಕಾಗಿ ತನ್ನನ್ನು ಟೀಕಿಸಿದ ಧರ್ಮಗುರು ಶೇಖ್ ಇಮಾಮುದ್ದೀನ್ ನನ್ನು ತನ್ನೊಂದಿಗೆ ಹಗೆತನವಿಟ್ಟುಕೊಂಡಿದ್ದ ಸಾಮಂತ ಅರಸನೊಬ್ಬನೊಂದಿಗೆ ಸಂಧಾನಕ್ಕೆ ಕಳುಹಿಸಿ ರಣರಂಗದಲ್ಲಿ ಕೊಲ್ಲಿಸಿ ಟೀಕೆಯನ್ನು,ಟೀಕಾಕಾರನನ್ನೂ ಮಣ್ಣೊಳಗೆ ಹೂತುಹಾಕುವ  ತುಘಲಕ್ ನ ಪ್ರಯತ್ನ ಯಶಸ್ವಿಯಾಗುತ್ತದೆ. ತನ್ನ ಸಿಂಹಾಸನಕ್ಕೆ ಕುತ್ತಾಗುವರೆಂದು ತಂದೆ ಹಾಗೂ ತಮ್ಮನನ್ನು ಅಲ್ಲದೇ ತನ್ನ ಹಿತಚಿಂತಕ ನಜೀಬ್ ನನ್ನು ವಿಷವಿಕ್ಕಿ ಕೊಲ್ಲಿಸಿದ ಹೆತ್ತತಾಯಿಯನ್ನೂ ಅರಮನೆಯಿಂದ ಸಾವಿನ ಮನೆಗೆ ದೂಡುವ  ಸರ್ವಾಧಿಕಾರಿಯಾಗಿಯೂ ತುಘಲಕ್ ಗೋಚರಿಸುವ ಪರಿ ಈ ನಾಟಕದಲ್ಲಿ ವಿಲಕ್ಷಣವಾಗಿ ಮೂಡಿಬಂದಿದೆ.
ತಾನು ಪ್ರಾರ್ಥನೆಯಲ್ಲಿರುವಾಗ   ಧರ್ಮಾಂಧ ಅಮೀರರು ಹಾಗೂ ಪ್ರಾಣಸ್ನೇಹಿತ ಶಹಾಬುದ್ದೀನ್ ಹೂಡುವ ಕೊಲೆಯ ಸಂಚಿನಿಂದ ಪಾರಾಗುವ ದೊರೆ ಕೊಲೆಗಡುಕರನ್ನು  ಬೇಟೆಯಾಡುತ್ತಾನೆ. ತುಘಲಕ್ ಒಬ್ಬ ವೃತ್ತಿಪರ ಅರಸನಂತೆ ಸಮರ್ಥ ಆಡಳಿತಗಾರನಾಗಿದ್ದ ಪ್ರಜಾಪರಿಪಾಲಕನಾಗಿದ್ದ ಎಂಬುದಕ್ಕೆ ನಾಟಕ ನಿದರ್ಶನಗಳನ್ನೊದಗಿಸುತ್ತದೆ. ರಾಜ್ಯಾಡಳಿತಕ್ಕಿಂತಲೂ ತುಘಲಕ್ ನ ವೈಯಕ್ತಿಕ ವ್ಯಕ್ತಿತ್ವವನ್ನು ಕುರಿತು ವಿವೇಚಿಸುವ ನಾಟಕ ಚಕ್ರವರ್ತಿಯೊಬ್ಬನ  ಅಂತರಂಗದ  ವ್ಯಾಪಾರವಿಲಾಸವನ್ನು ಮನೋಜ್ಞವಾಗಿ ತೆರೆದಿಡುತ್ತದೆ. ಸಮುದಾಯ ರಂಗತಂಡ ವ್ಯಕ್ತಿಗಳನ್ನೇ ಕಾಯಿಗಳನ್ನಾಗಿ ಮಾಡಿಕೊಂಡು ರೂಪಿಸಿದ ಚದುರಂಗದಾಟದ ರೂಪಕ  ತುಘಲಕ್ ನಾಟಕದ ರಂಗಪ್ರಯೋಗಕ್ಕೆ ವಿನೂತನ ಕಳೆಯನ್ನು ತಂದುಕೊಟ್ಟಿದೆ.ತುಘಲಕ್ ಕನ್ಮಡ ವಾಙ್ಮಯ ಲೋಕದ ಅದ್ವಿತೀಯ ನಾಟಕರತ್ನಗಳಲ್ಲಿ ಅನನ್ಯವಾದುದು.

ದೇಶ ದೇಶಗಳ ಮಧ್ಯದ ಜಾಗತಿಕ ವಿವಾದದ ವೈಮನಸ್ಸುಗಳಿಗೂ ಕನ್ನಡಿ ಹಿಡಿಯುವಂತಿರುವ ಈ ನಾಟಕದ ಪ್ರಸ್ತುತತೆ ಗಿರೀಶ ಕಾರ್ನಾಡರವರ ಪ್ರತಿಭಾವಿಲಾಸದ ವೈಶಾಲ್ಯತೆಗೆ ಸಾಕ್ಷಿಯಾಗಿದೆ. ಇಂತಹ ಅಪೂರ್ವ ಪ್ರತಿಭಾಸಂಪನ್ನರನ್ನು ಕಳೆದುಕೊಂಡ ಭಾರತೀಯ ಸಾಂಸ್ಕೃತಿಕ ಲೋಕ ಬಡವಾಗಿದೆ.ಬಾಲ್ಯದಲ್ಲಿ ಗೆಳೆಯರಿಂದ ಬಣ್ಣಿಸಲ್ಪಟ್ಟ ಕಾರ್ನಾಡರೆಂಬ "ಮಾವಿನ ತಳಿರು" ಇಹದ ಮರದಿಂದ ಬೇರ್ಪಟ್ಟಿದೆ.  ಕರುನಾಡಿನ ಅಜರಾಮರ ಕಲೋಪಾಸಕ ಕಾರ್ನಾಡರಿಗೆ ಶ್ರದ್ಧಾಂಜಲಿ.



Saturday, 27 April 2019

ಕಾವ್ಯೋದ್ಯಾನವನದಲ್ಲೊಂದು ವಿಹಾರ...ಭಾಗ ೧

ಕಾವ್ಯೋದ್ಯಾನವನದಲ್ಲೊಂದು ವಿಹಾರ...ಭಾಗ ೧
"ಜಾಡಮಾಲಿಯ ಜೀವ ಕೇಳುವುದಿಲ್ಲ"ಇದೊಂದು ನಾಡಿನ ದಣಿವರಿಯದ ಬರಹಗಾರರಾದ ಡಾ. ರಾಜಶೇಖರ ಮಠಪತಿ( ರಾಗಂ) ರವರ ಅನುವಾದಿತ ಕೃತಿಯಾದರೂ,
ರಾಗಂರವರನ್ನು   ಆವರಿಸಿಕೊಂಡಿರುವ ನೆಲದ ಸೊಗಡಿನ ಅದಮ್ಯ ಪ್ರೀತಿಯನ್ನು  ಬಣ್ಣಿಸುವ ರಚನೆಯಾಗಿರುವುದು ಮಹತ್ವವಾಗಿದೆ. ರಾಗಂರವರು ರಕ್ತದ ಮಡುವಿನಲ್ಲಿ ಚಿತ್ತಾರಗೊಂಡ ಕಾವ್ಯದ ಕಲಾಕೃತಿಗಳನ್ನು ಹಾಗೂ ಕವಿಗಳನ್ನು  ಮನಮುಟ್ಟುವಂತೆ ಅನುವಾದಿಸಿದ್ದಾರೆ. ಜಗತ್ತಿನ ಭಾಷೆಯನ್ನು ಕನ್ನಡದ ಜಾಯಮಾನಕ್ಕೆ ಒಗ್ಗಿಸುವ ಅವರ ಕಾವ್ಯಭಾಷೆ ಅದೆಷ್ಟು  ಆರ್ದ್ರವಾಗಿದೆ ಎಂಬುದಕ್ಕೆ ಈ ಕೆಳಗಿನ ಸಾಲುಗಳನ್ನು ಗಮನಿಸಿ...
"ಏಕೆ ಕಾಡುತ್ತಿರುವೆ ಕನಸುಗಳೆ?

ಏಕೆ ಹರಿಯುತ್ತಿರುವೆ ಕಣ್ಣೀರ ಹನಿಗಳಂತೆ

ಕೋಲ್ಮಿಂಚಿನಂತೆ, ಕದ್ದೋಡುವ ಕಳ್ಳನಂತೆಸುಮ್ಮನಿದ್ದರೂ ಸತಾಯಿಸುವ ನೊಣಗಳಂತೆ ಏಕೆ, ಏಕೆ,ಏಕೆ ಕದಿಯುತ್ತೀರಿ ನನ್ನ ಏಕಾಂತವನ್ನು..." 

ಖಡ್ಗ ಹಾಗೂ ಕಾವ್ಯದ ಗುರಿಗಳು ವಿಭಿನ್ನವಾಗಿದ್ದರೂ ಅವೆರಡೂ ಸಂಧಿಸಿ  ಸೃಜಿಸಿದ ಅಪರೂಪದ ಕಾವ್ಯಾನುವಾದ ಕೃತಿ "ಜಾಡಮಾಲಿಯ ಜೀವ ಕೇಳುವುದಿಲ್ಲ..." .ರಾಗಂರವರಿಗೆ ಕಾಡಿದ ಜಾಡಮಾಲಿ ದುಡಿಯುವ ವರ್ಗದ ಪರಿಶ್ರಮಜೀವಿ. ಆಕೆಯ ಅಂತಃಶಕ್ತಿ ಅನಂತವಾದುದು.ಅಗಣಿತವಾದುದು.ಆ ಜೀವಚೈತನ್ಯವೇ ರಾಗಂರವರ ಈ ಕೃತಿಗೆ ಸ್ಪೂರ್ತಿಯಾಗಿರುವುದು ವಿಶೇಷ. ಕಾವ್ಯಕ್ಕೆ ಹೇಗೆ ಆರಂಭ ಮಧ್ಯೆ ಅಂತ್ಯಗಳಿಲ್ಲವೋ ಈ ಕೃತಿಯಲ್ಲಿರುವ ಕವಿವರ್ಯರಿಗೂ ಆದಿ ಅಂತ್ಯಗಳ ಸೀಮೆಗಳಿಲ್ಲ; ಚೌಕಟ್ಟುಗಳೆಂಬ ಗಡಿಗಳಿಲ್ಲ; ಅಂತಿಮವೆಂಬ ಗೆರೆಗಳಿಲ್ಲ. ಇಲ್ಲಿ ಇರುವುದೊಂದೇ ಅದು ಅನಂತ, ಅತೀತ, ಅಮರ. ಈ ಕೃತಿಯ ಕಾವ್ಯಕತೆಗಳು ನಿರಂತರವಾಗಿ ಧುಮ್ಮಿಕ್ಕುವ ಪ್ರವಾಹ. ಕಾಲ ಸ್ಥಳ ವನ್ನೂ ಮೀರಿದ ಕಾವ್ಯಸಂವಾದ ಈ ಕೃತಿಯ ಪರಮ ಉದ್ದೇಶಗಳಲ್ಲಿ ಒಂದು. ಕಾವ್ಯವೆಂದರೆ ರಾಗಂ ಮಣ್ಣಿಗಿಳಿಯುತ್ತಾರೆ.  ಜೋಳಿಗೆಯ ನೆಲದಲ್ಲಿ ಇಳಿಯಬಿಟ್ಟಿರುವ ನೂರು  ಮರಗಳ ಬೇರಿಗಿಳಿಯುತ್ತಾರೆ. ಕಾವ್ಯವೆಂದರೆ  ರಾಗಂ ಜಾಡಮಾಲಿಯೊಂದಿಗೆ ಉದ್ಯಾನವನದಲ್ಲಿ ದಿನಗಟ್ಟಲೇ ಅಲೆಯುತ್ತಾರೆ. ಅಲ್ಲಿ ತಲೆಯೆತ್ತಿ ಮಂದಹಾಸ ಬೀರುತ್ತಾ ಕೈಬೀಸಿ ಸ್ವಾಗತಿಸುತ್ತಿರುವ ದೇಶವಿದೇಶಗಳ ಸಸಿಗಳೊಂದಿಗೆ ಮಾತಿಗಿಳಿಯುತ್ತಾರೆ. ಕಾವ್ಯದ ಸಂಗಾತ ಬಯಸಿದಾಗೊಮ್ಮೆ ಜೋಳಿಗೆಯಲ್ಲರಳಿದ ಮಲ್ಲಿಗೆಯ ಮೊಗ್ಗಿನ ಚೆಲುವನ್ನು ಕಂಡು ಬೆರಗಾಗಿ ಪಿಸುಮಾತಿಗಿಳಿಯುತ್ತಾರೆ. ಮಣ್ಣಿನಿಂದ ಮರ ಹೀರಿದ ಜೀವಸತ್ವ ಹೂವಾಗಿ ಅರಳಿ ಹಣ್ಣಾಗಿ ರಸದುಂಬುವಂತೆ, ರಾಗಂರವರು ಹೀರಿದ ನೆಲದ ಸೊಗಡು ಮಾಗಿ ಅಲೌಕಿಕತೆಗೇರಿ ಕಾವ್ಯವಾಗಿ ಅದೆಷ್ಟೋ ಜೀವಗಳ ಮನದುಂಬುತ್ತದೆ.
ಕಾವ್ಯವೆಂದರೆ ರಾಗಂ ಮಣ್ಣಿನೊಂದಿಗೆ ಸಂವಾದಕ್ಕಿಳಿಯುತ್ತಾರೆ. ಅವರ ಹಳೆಯ ಮನೆಯ ಮೇಲ್ಮುದ್ದಿಯ ಹಾಳು ಮಣ್ಣೂ ಇವರನ್ನು ಬಳಿ ಕರೆದು ಸಂವಾದಿಸುತ್ತದೆಯೆಂದರೆ ರಾಗಂರವರಲ್ಲಿ ನೆಲದ ಸೊಗಡಿನ ನಂಟು ಅದೆಷ್ಟು ಗಾಢವಾಗಿ ಆಳವಾಗಿ ಜೀವದೊಳಗಿಳಿದಿದೆ ಎಂಬುದನ್ನು ಅರಿಯಬೇಕು. ಹಾಗೆ ಅರಿತಾಗಲೇ ಅವರ ಕಾವ್ಯ ತನ್ನ ಮನೆಗೆ ಕರೆದೊಯ್ಯುತ್ತದೆ. ಬಳಿಸಾರಿ ತಲ್ಲಣಗಳನ್ನು ಹೆಕ್ಕಿ ತೋರುವ ಮನಸು ಮಾಡುತ್ತದೆ.
" ಮಸೀದಿ ಮಂದಿರಗಳ ಕರೆಗೆಓಡುವ ಹುಚ್ಚು ಮನವೆನಿನ್ನೆದೆಯ ದೇಗುಲವನೆಂದಾದರೂ ಹೊಕ್ಕೆಯೇನು?  ಇಲ್ಲಿ ಕಾಣದ ದೇವರುನಿನಗೆಂದಾದರೂ ಅಲ್ಲಿ ಕಂಡನೇನು?  "ಈ ಕೃತಿಯಲ್ಲಿ ಪದಗಳಾಗಿರುವ ಬುಲ್ಲೇಷಾನ ಕಾವ್ಯದ ಸಾಲುಗಳು ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪನವರ "ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆಇಲ್ಲೇ ಇರುವ ಪ್ರೀತಿ ಪ್ರೇಮಗಳ ಗುರುತಿಸದಾದೆನು ನಮ್ಮೊಳಗೆ""ಅನ್ವೇಷಣೆ"  ಕವಿತೆಯ ಪಾದಗಳನ್ನು  ನೆನಪಿಸುತ್ತವೆ. ದೇಶ, ಕಾಲಗಳು ಭಿನ್ನವಾಗಿದ್ದರೂ ಕಾವ್ಯ ಒಂದೇ, ಕಾವ್ಯದ ಆಶಯವೂ ಕೂಡ ಎಂಬುದಕ್ಕೆ ಮೇಲಿನ ಕವಿತೆ ದೃಷ್ಟಾಂತವಾಗಿದೆ.ರಾಗಂ ರವರ ಅನುವಾದಗಳೂ ಹಾಗೆಯೇ... "ಜಾನ್ ಕೀಟ್ಸ್...... ನೀರ ಮೇಲೆ ನೆನಪ ಬರೆದು "  ಕೃತಿ ಜಾನ್ ಕೀಟ್ಸ್ ಬರೆದ ಪತ್ರಗಳ ಅನುವಾದವಾದರೂ ರಾಗಂರವರ ಕಾವ್ಯಭಾಷೆಯಿಂದ ಸ್ವತಂತ್ರ ಕೃತಿಯೆಂಬಂತೆ  ಜೀವಂತಿಕೆಯಿಂದ ಕಂಗೊಳಿಸುತ್ತದೆ. ನನ್ನ ಮನೆಯ ಮುಂದೆ ಅರಳಿದ ದುಂಡುಮಲ್ಲಿಗೆಯ ಸುಗಂಧವನ್ನು ಹೀರಿದಾಗೊಮ್ಮೆ ಪಂಪ ರನ್ನ ಜನ್ನ  ಕುವೆಂಪು ಬೇಂದ್ರೆ ಸುಳಿಯುವಂತೆ, ಮೊದಲ ಮಳೆಯ ಹನಿಗೆ ಸುಗಂಧಿತವಾದ ಮಣ್ಣು  ಪರಿಮಳ ಬೀರಿದೊಡನೆ ನೆನಪಾಗುವುದು  ರಾಗಂರವರ  ಕಾವ್ಯಾಲಾಪ. ಈ ಜಾಡಮಾಲಿಯ...... ಕೃತಿಯನ್ನು ಕೈಗೆತ್ತಿಕೊಂಡಾಗಲೇ ಅದು ಬೀರುತ್ತಿರುವುದು  ಕಾವ್ಯಸುಮದ ಪರಿಮಳವೆಂದು ಮನಸು ಅರಿತುಬಿಡುತ್ತದೆ. "ಖಂಡಾಂತರ ಕಾವ್ಯಕ್ಕೊಂದು ಸಾಕ್ಷಿ" ಎಂಬ ಅಡಿಬರಹದೊಂದಿಗೆ ಸಹೃದಯರ ಕೈಗಿಳಿದ ಈ ಕೃತಿ ಖಂಡಗಳನ್ನೂ ಮೀರಿದ ಕಾವ್ಯಸಂವಾದಕ್ಕೆ ವೇದಿಕೆಯಾಗಿದೆ. ಕಾವ್ಯಕ್ಕೆ ಊರು, ನಗರ, ರಾಜ್ಯ, ದೇಶ, ಖಂಡಗಳೆಂಬ ಸೀಮೆಗಳಿಲ್ಲ. ಕಾವ್ಯ ಸೀಮಾತೀತ; ಕಾಲಾತೀತ; ಭಾವಾತೀತ;ರಂಜನಾತೀತ; ದೇಹಾತೀತ;ಆತ್ಮಾತೀತ. ರಾಗಂರವರೇ ಹೇಳುವಂತೆ ಗಾಳಿಯೊಡನಾಟದ ಗಂಧದಂತೆ ಸೀಮಾತೀತವಾಗುವುದೇ ಜೀವದ ಸಾರ್ಥಕ್ಯ ಹಾಗೂ ಕಾವ್ಯದ ಗುರಿ. ವೈಯಕ್ತಿಕತೆಯನ್ನೂ ಮೀರಿದ್ದು ಕಾವ್ಯವಾಗಬಲ್ಲದು ಎಂಬುದಕ್ಕೆ ಈ ಕೃತಿಯಲ್ಲಿ ಅನಾವರಣಗೊಂಡಿರುವ ವ್ಯಕ್ತಿತ್ವಗಳೇ ನಿದರ್ಶನಗಳಾಗಿವೆ.
"ಜೋಳಿಗೆಯಲ್ಲಿ ನೆಟ್ಟ ಮರಗಳಂತೆ, ಕಾವ್ಯದ ಈ ಅನಾಥ ಬೀಜಗಳನ್ನು ಎಲ್ಲೆಲ್ಲಿಂದಲೋ ತಂದೆ. ಯಾವುದೇ ನಿರ್ದಿಷ್ಟ ಗುರಿ, ಉದ್ದೇಶ ಈ ಕ್ರಿಯೆಯ ಹಿಂದಿಲ್ಲ. ದೇಶ ಕಾಲಗಳ ಪರಿವೆಯಿಲ್ಲದೆ ಹೊರಟ ದಾರಿಹೋಕನ ಜೋಳಿಗೆಗೆ ಬಿದ್ದ ಭಾವದ ಜೀವಗಳಿವು.ಸುಮಾರು ಎರಡು ದಶಕಗಳ ಹಾದಿ-ಹುಡಿ-ಮಣ್ಣು ಈ ಜೋಳಿಗೆಯಲ್ಲಿತ್ತು ಎನ್ನಿಸುತ್ತದೆ.ದಾರಿಹೋಕನ ಯಾತ್ರೆ  ಅವಿರತ ಅನಂತವಾಗಿತ್ತು.ಮುಂದೆಲ್ಲೋ ಮಳೆಯಾಯಿತು.ನಾನು ನೆನೆದುಹೋದೆ. ಆದರೆ ಈ ಜೋಳಿಗೆಯ ಬೀಜಗಳೆಲ್ಲ ಮೊಳೆತು ಕವಿತೆಯಾದವು." ಎಂಬ ರಾಗಂರವರ ಆರಂಭಿಕ ನುಡಿಗಳು ಈ ಕೃತಿಯ ಹುಟ್ಟು, ಉದ್ದೇಶವನ್ನು ಸಾರುತ್ತವೆ. ಹೌದು. ರಾಗಂರವರು ಕಾವ್ಯವೆಂದರೆ ಹೀಗೆ ಅಲೆಮಾರಿಯಾಗುತ್ತಾರೆ. ಲೋಕದಲ್ಲಿ ಸಿಗುವ ವೈವಿಧ್ಯಮಯ ಕಾವ್ಯಬೀಜಗಳನ್ನು ಆಯ್ದು ತಂದು ಇಲ್ಲಿ ಪ್ರೀತಿಯಿಂದ  ನೆಟ್ಟಿದ್ದಾರೆ. ಜತನದಿಂದ ಬೆಳೆಸಿ  ಅಕ್ಷರಗಳಾಗಿ ಪೋಣಿಸಿದ್ದಾರೆ.ತಮ್ಮ ಕಾವ್ಯಭಾಷೆಯ ನೀರೆರೆದು ಸುಂದರ ವಾತಾವರಣದಲ್ಲಿ ತಾವೇ ಜಾಡಮಾಲಿಯಾಗಿ ಸಲುಹಿ ಜಗಕೆ ನೆರಳಾಗುವ ಹೆಮ್ಮರಗಳಾಗಿ ಪೋಷಿಸಿದ್ದಾರೆ.

ಜಗತ್ತಿನ ದುರಂತ ಕವಿತೆಗಳು ಹಾಗೂ ಕವಿವರೇಣ್ಯರೆಲ್ಲಾ ರಾಗಂರವರ ಈ  ಕಾವ್ಯದರಮನೆಯಲ್ಲಿ ನಿರಮ್ಮಳವಾಗಿ ನಿರಾಳರಾಗಿ ಧೀಮಂತವಾಗಿ ಮಲಗಿದ್ದಾರೆ. ಸಮಾಧಿಯಲ್ಲಿಯೂ ಸಲ್ಲಾಪ  ನಡೆಸಿದ್ದಾರೆ; ಕಾವ್ಯದ ನೆನಪಾಗಿ ಆಲಾಪಿಸಿದ್ದಾರೆ; ಪಿಸುಗುಟ್ಟಿದ್ದಾರೆ. ಇತಿಹಾಸದ ಧೂಳಿನಡಿಯಲ್ಲಿ ಹೆಸರಿಲ್ಲದೆ  ಮರೆಯಾಗಿ ಹೋಗಬಹುದಾದ ಕಾವ್ಯಗಳನ್ನು, ಕಾವ್ಯಾರಾಧಕರನ್ನು  ರಾಗಂರವರು ಹೆಕ್ಕಿ ತೆಗೆದು ಹೊಳಪು ನೀಡಿದ್ದಾರೆ; ಬೆಳಕು ತೋರಿದ್ದಾರೆ. ನಮ್ಮ ಪಂಪನಂತೆ ಕಾವ್ಯ ಹಾಗೂ ಖಡ್ಗಗಳ ಸಾಂಗತ್ಯದಲ್ಲಿದ್ದ ಅಝರ್ ಬಝೈನಿನ ವೀರ ಕವಿ ಅಹಮದ್ ಜಾವೇದ್ ನ  ಕವಿತೆಯ"ನಿಸ್ಸಂಶಯ,  ನಾನೊಬ್ಬ ಕವಿನನ್ನಾಸೆ ಬೇರೆ, ಆಶಯವೂ ಆದರೆ ಉರಿದ ಈ ಮನೆ ಕುರಿತುಏನೆಂದು ಹಾಡಲಿ?"  ಎಂಬ ಸಾಲುಗಳು ರಾಗಂರವರೇ ಈ ಕೃತಿಯನ್ನು  ಹಾಗೂ ಬಹುಮುಖ್ಯವಾಗಿ ಮೊನ್ನೆ ತಾನೇ ಭಾರತದ ಕಣ್ಣೀರ ಹನಿಯಂತಿರುವ ಶ್ರೀಲಂಕಾದಲ್ಲಿ ನಡೆದ ಭಯೋತ್ಪಾದಕರ ಮಾರಣಹೋಮದ ರಕ್ತಪಾತವನ್ನೂ ಕುರಿತು ಹಾಡಿದಂತಿವೆ ಅಲ್ಲವೆ? ಮಾನವ ಸಂಬಂಧಗಳು ಶಿಥಿಲವಾಗುತ್ತಿರುವ ಸಂದರ್ಭದಲ್ಲಿ ಗಾಢವಾದ ಮಾನವ ಸಂಬಂಧಗಳ ಫಲಿತವಾಗಿರುವ ' ಡಾಲ್ಗಾ' ಹಾಗೂ ' ಗೋಶ್ಮಾ' ಎಂಬ ಕವನಸಂಕಲನಗಳ ಕರ್ತೃ ಅಝರ್ ಬಝೈನಿನ ಕಾಡುವ ಕವಿ ಅಹಮದ್ ಜಾವೇದ್ ನನ್ನು ಕುರಿತ ಚರ್ಚೆ ಔಚಿತ್ಯಪೂರ್ಣವೆನಿಸುತ್ತದೆ." ಓ ಸೂರ್ಯನೇ, ಮರದ ಮಗುವೇ ಮರ ಸಾಯಬಾರದು ನೀರಡಿಕೆಯಿಂದ ತಿಳಿದುಕೊ, ಅದು ನಿನ್ನ ಬೀಜಗಳ ಭೂಮಿ ನಿನ್ನ ಪ್ರೀತಿಗೊಂದು ಸಾಕ್ಷಿ " ಎಂದು ಪ್ರೀತಿಗೊಂದು ನವ ಪರಿಭಾಷೆಯೊಂದನ್ನು ಸೃಜಿಸಿ, ಲೋಕದೊಳಗಿದ್ದೂ ಒಂಟಿಯಾಗಿ ಬದುಕಿದ, ಸೌಂದರ್ಯವೇ ಮೈವೆತ್ತಿ ನಿಂತಂತಿದ್ದ ಮೆಕ್ಸಿಕನ್ ಚೆಲುವೆ, ಚಿಂತಕಿ, ಕಾವ್ಯಾರಾಧಕಿ ಹಾಗೂ ಕುಂಚಕಲಾವಿದೆ  ಫ್ರಿದಾ ಕಾಹಲೊವಾ ಳ ಭಗ್ನ ಶಿಲಾಬಾಲಿಕೆಯಂತಹ ಬದುಕನ್ನು  ರಾಗಂರವರು ಅವಳದೇ ಮತ್ತೊಂದು  ಕವಿತೆಯ ಮೂಲಕ ಹೀಗೆ ಕಟ್ಟಿಕೊಡುತ್ತಾರೆ -
ಕತ್ತಲೆಯ ಪ್ರತಿಬಿಂಬ ನೀನು
ನನ್ನೊಳಗಿಳಿಯುವ ಗಾಢ ಬಣ್ಣದ ಅಲಗು ನೀನುನೆಳಲು ನೀನುಬೆಳಕು ನೀನುಕಣ್ಣ ಕಾಂತಿಯೂ ನೀನು
..ಕತ್ತಲೆಯನ್ನಪ್ಪಿಕೊಂಡು ಬೆಳಕೇ ಆಗಿಬಿಡಬೇಕು ನಾನು".ಜಗತ್ತಿನ ವಿಭಿನ್ನ ಸಂಸ್ಕೃತಿಯ ಪ್ರತೀಕಗಳಂತಿರುವ ಇಂತಹ ಅಮರ ಕಾವ್ಯಗಳನ್ನು ಹಾಗೂ ಅಮರ ಕವಿಗಳನ್ನು ಹೆಕ್ಕಿ ತೆಗೆದು ಹೀಗೆ ಆಪ್ಯಾಯಮಾನವಾಗಿ ಕಟ್ಟಿಕೊಟ್ಟ ರಾಗಂ ರವರಿಗೆ ನಾವು ಋಣಿಯಾಗಲೇಬೇಕು.

ರಾಗಂರವರು  ಹಾಡಿರುವ ಈ ಕಾವ್ಯಗಳು ಅಮರಗೀತೆಗಳೇ ಆಗಿವೆ. ಬೆಂಗಳೂರಿನ ಉದ್ಯಾನವನದಲ್ಲಿ ರಾಗಂರವರನ್ನು ಭೇಟಿಯಾದ ಜಾಡಮಾಲಿ ನನಗೂ ಸಿಕ್ಕಿದ್ದಳು. ರಾಗಂರವರು  ಅಂದು ಕಬ್ಬನ್ ಉದ್ಯಾನವನದಲ್ಲಿ  ಜಾಡಮಾಲಿಯೊಂದಿಗೆ ಸಸ್ಯ ಮರಗಳೊಂದಿಗಿನ ಆಕೆಯ ಒಡನಾಟದ ಕುರಿತು ಮಾತಿಗಿಳಿದಾಗ ಅವರ ಪಕ್ಕದಲ್ಲಿದ್ದು  ನಾನೂ ಸಾಕ್ಷಿಯಾಗಿದ್ದು ನನ್ನ ಸೌಭಾಗ್ಯವೇ ಸರಿ.ಅಂದು ಕಂಡ ಅಪರೂಪದ ಸಸ್ಯಗಳ ಕೆನ್ನೆ ಸವರಿ ಖುಷಿಪಟ್ಟಿದ್ದೆ. ಅನಕ್ಷರಸ್ಥಳಾಗಿದ್ದರೂ  ಮರ ಗಿಡಗಳೊಂದಿಗಿನ ಮೂವತ್ತು ವರ್ಷಗಳ ಒಡನಾಟ, ಸಸ್ಯಸಂಕುಲದ ಬಗೆಗಿನ ಆಕೆಯ ಜ್ಞಾನ, ತಿಳುವಳಿಕೆ, ಆಸ್ಥೆ, ಅಕ್ಕರೆಯನ್ನು ಕಂಡು ಮೂಕವಿಸ್ಮಿತನಾಗಿದ್ದೆ. ಉದ್ಯಾನವನದ ಪೋಷಕಿಯಾಗಿದ್ದ ಅದೇ ಜಾಡಮಾಲಿ  ರಾಗಂರವರಿಗೆ ಹೀಗೆ ಕೃತಿಯಾಗಿ ದಕ್ಕಿದರೆ, ನನಗೆ ರಾಗಂರವರ ಮೂಲಕ ಕಾವ್ಯಕಾರಣವಾಗಿ ಹೀಗೆ ಕೆಲವು ಸಾಲುಗಳಾಗಿ ದಕ್ಕುತ್ತಿರುವುದು ಅಪೂರ್ವದ ಸಂಗತಿ." ನಿಮ್ಮ ಪಾದದ ಧೂಳು ನನ್ನ ನಗ್ನತೆಯ ಮುಚ್ಚಿದೆನಿಮ್ಮ ಹಾಳು ಮಾತು ನನ್ನನ್ನು ಮೌನದ ಕೂಪಕ್ಕೆ ನೂಕಿದೆ " ಎಂದು ಕವಿತೆಯೇ ಕೊರಳೆತ್ತಿ ಹಾಡಿದಂತಿರುವ ಈ ಸಾಲುಗಳ ಜನಕ ಬೇರಾರೂ ಅಲ್ಲ, ಬೆತ್ತಲೆಯ ಸಂತನೆಂದು, ತತ್ವಜ್ಞಾನಿಯೆಂದು, ಗಮ್ಮತ್ತೇ ಗೊತ್ತಿರದ ತುಂಬಿದ ಮದಿರೆಯ ಬಾಟಲಿಯಂತೆ ಮನುಷ್ಯನ ಜೀವನವೆಂದು ಘಂಟಾಘೋಷವಾಗಿ ಸಾರಿದ ಇರಾನಿನ ರುಬಾಯಿ ಕವಿ ಮೊಹಮ್ಮದ್ ಸಯೀದ್ ಸರ್ಮದ್ ಖಶಾನಿಯದು. ಅಕ್ಕಮಹಾದೇವಿ, ದಿಗಂಬರರು ಬದುಕಿದ ಭಾರತದ  ಬೆತ್ತಲೆಯ ಪರಂಪರೆಯ ಮುಂದುವರೆದ ಕೊಂಡಿಯೆಂಬಂತೆ ಬಾಳಿದ ಸರ್ಮದ್ "ನಿಜವಾದ ಪ್ರೇಮಿಗೆ ಸಾವಿನಂಜಿಕೆಯಿಲ್ಲ, ಗೊತ್ತುಪ್ರೀತಿಯ ಕಸಾಯಿಖಾನೆಯಲ್ಲಿಯೇ ನಂಬಿಗಸ್ತರ ನೆತ್ತರು ಹರಿಯುತ್ತದೆಆದರೆ ಹೀಗೆ ಒಮ್ಮೆ ಕೊಂದವನನ್ನು ಮತ್ತೊಮ್ಮೆ ಕೊಲ್ಲಲಾಗದು "ಎಂದು ಮಾನವ ಮಾನವರ ಮಧ್ಯೆ ಇರಬೇಕಾದ ಅಮರಪ್ರೇಮವನ್ನು ಕುರಿತು ಷರಾ ಬರೆಯುತ್ತಾನೆ. ಹೀಗೆ ವೈವಿಧ್ಯಮಯ ಕಾವ್ಯಕುಸುಮಗಳನ್ನು ಅವುಗಳ ಸುಗಂಧದೊಂದಿಗೆ ಪರಿಚಯಿಸುವ ಅದ್ವಿತೀಯ ಕೃತಿಯೆಂದರೆ ಡಾ. ರಾಜಶೇಖರ ಮಠಪತಿ(ರಾಗಂ) ಯವರ "ಜಾಡಮಾಲಿಯ ಜೀವ......" ಕಾವ್ಯ  ಹಾಗೂ ಕಾವ್ಯಪೂಜಾರಿಗಳನ್ನು  ಕಂಡ ರಾಗಂ ಎಂಬ " ಜಾಡಮಾಲಿಯ ಜೀವ  ಕೇಳುವುದಿಲ್ಲ ".
ಹೌದು. ಕಾವ್ಯಕ್ಕಾಗಿ  ಅಲೆಮಾರಿಗಳಾಗಿ ಭಾಷೆ ಭಾಷೆಗಳನ್ನು, ದೇಶ ದೇಶಗಳನ್ನು, ಸಂಸ್ಕೃತಿ ಸಂಸ್ಕೃತಿಗಳನ್ನು, ಖಂಡ ಖಂಡಗಳನ್ನು  ಅವಿರತ ಸುತ್ತುವ ರಾಗಂ ಒಬ್ಬ ಕಾವ್ಯಜಂಗಮ.  ಉರ್ದು ,ಪರ್ಶಿಯನ್, ಹಿಂದಿ,ಇಂಗ್ಲೀಷ್ ಹೀಗೆ ಜಗತ್ತಿನ ವಿವಿಧ ಸಂಸ್ಕೃತಿಯ ಕಾವ್ಯಜಂಗಮರನ್ನು ಜಾಡಮಾಲಿಯ ಅನುಭವ ಮಂಟಪದೊಳು ತಂದು  ಸಂವಾದಕ್ಕೆ ನಿಲ್ಲಿಸುತ್ತಾರೆ. ಕಾವ್ಯವನ್ನೇ ಉಸಿರಾಗಿಸಿಕೊಂಡು, ಕಾವ್ಯವನ್ನೇ ಬದುಕಾಗಿಸಿಕೊಂಡ ಕಾವ್ಯತಪಸ್ವಿಗಳನ್ನು ಈ ಕೃತಿಯ ಮೂಲಕ ಕಟ್ಟಿಕೊಡುವ ಮೌಲಿಕ ಪ್ರಯತ್ನ ರಾಗಂರವರದು. ಶುಷ್ಕ  ಅನುವಾದ ಓದಿಸಿಕೊಳ್ಳುವುದು ಕಷ್ಟ. ಜೀವ ತುಂಬುವ  ಪರಕಾಯ ಪ್ರವೇಶದ ಅನುವಾದ ರಾಗಂರವರದು. ಮೂಲ ಕಾವ್ಯದ ಅನುಕರ್ತರಾದರೂ  ಅನುಕಾರ್ಯರಷ್ಟೇ ಪ್ರಭಾವ ಬೀರುವ ಶಕ್ತಿ ರಾಗಂರವರ ಭಾಷೆಗಿದೆ. ಕಾವ್ಯ ದಕ್ಕದಿದ್ದಾಗ ಜಾನ್ ಕೀಟ್ಸ್ ನಂತೆ  ಚಡಪಡಿಸುತ್ತಾರೆ. ಕಾವ್ಯದ ಬೇರುಗಳನ್ನು ಹುಡುಕಿ ಮಾಳಿಗೆಯಿಂದ ಜೋಳಿಗೆಗಿಳಿಯುತ್ತಾರೆ. ಇದ್ದಕ್ಕಿದ್ದಂತೆ ಕಾವ್ಯಾರಾಧಕರನ್ನು ಸೆಳೆಯಬಲ್ಲ " ಜಾಡಮಾಲಿಯ ಜೀವ ಕೇಳುವುದಿಲ್ಲ" ಎಂಬ ಕೃತಿಯು ರೂಪು ತಳೆಯುತ್ತದೆ." ಕಾವ್ಯ ಹುಟ್ಟಬೇಕೆಂದರೆ ಕವಿಯಾಗಿರಲೇಬೇಕೆಂದೇನಿಲ್ಲ; ಕನಸುಗಾರನಾಗಿರಬೇಕು;  ಪ್ರಾಮಾಣಿಕನಾಗಿರಬೇಕು; ಇವೆಲ್ಲಕ್ಕಿಂತಲೂ ಹೆಚ್ಚಾಗಿ ಮುಗ್ಧತೆಯ ಪ್ರತಿರೂಪವಾಗಿರಬೇಕು " ಎಂಬ ಈ ಕೃತಿಯಲ್ಲಿನ ಕಾವ್ಯಕಟ್ಟುವ ಕಲೆಯ ಸಾಲುಗಳನ್ನು ಓದಬೇಕಾದರೆ ನನ್ನ ಮಗುವನ್ನು ತೊಟ್ಟಿಲಿನಲ್ಲಿ ಮಲಗಿಸಲು ನನ್ನ ತಾಯಿ ಹಾಡುವ ಅವನಿಗಿಷ್ಟವಾದ 

" ಆಡಿ ಬಾ ನನ ಕಂದ ಅಂಗಾಲ ತೊಳದೇನ 

ತೆಂಗಿನ ಕಾಯಿ ತಿಳಿನೀರ! ತಕ್ಕೊಂಡು

ಬಂಗಾರದ ಮಾರಿ ತೊಳದೇನ "

 ಎಂಬ ಹಾಡಿನಲ್ಲಿಯ ಮುಗ್ಧತೆಯ ನೆನಪಾಗುತ್ತದೆ.        

" ಬಾ ಗುಬ್ಬಿ ಕಾಳು ತಗೋಬಾ ಗುಬ್ಬಿ ಕಾಳು ತಿನ್ನು"ಎಂಬ ತೊದಲುನುಡಿಗಳನ್ನಾಡುತ್ತ ನಮ್ಮ ಮನೆಯ ಮುಂದಿನ ದಾಸವಾಳದ ಟೊಂಗೆಯ ಮೇಲೆ ಕುಳಿತ ಗುಬ್ಬಿಗಳನ್ನು ಕರೆಯುವ ನನ್ನ ಮಗುವಿನ  ಮುಗ್ಧತೆಯ ಬಾಲಭಾಷೆಯ ಮುದ ಮನದ ಮುಂದೆ ಸುಳಿಯುತ್ತದೆ.


Friday, 5 April 2019

ಚಂದ್ರಗಿರಿಯ ತೀರದಲ್ಲೊಂದು ವಿಹಾರ...
ಯುಗಾದಿ ಅಮವಾಸ್ಯೆಯ ನವಮನ್ವಂತರದ ಶುಭಮುಂಜಾವು ಐಚ್ಛಿಕ ಕನ್ನಡದ ವಿದ್ಯಾರ್ಥಿಗಳಿಗೆ ಚಂದ್ರಗಿರಿಯ ತೀರದಲ್ಲಿ ಕಾದಂಬರಿ ಕುರಿತು ಪಾಠ ಸಾಗಿತ್ತು. ಅನೌಪಚಾರಿಕ ಕುಶಲೋಪರಿಯೊಂದಿಗೆ ಪ್ರಾರಂಭವಾದ ತರಗತಿ ಗಂಭೀರ ಚರ್ಚೆಗೆ ಹೊರಳಿಕೊಳ್ಳುವುದರಲ್ಲಿತ್ತು. ಧಾರವಾಹಿಯಂತೆ ಕುತೂಹಲವನ್ನಿಟ್ಟುಕೊಂಡೇ ಮುಂದುವರಿದಿದ್ದ ಈ ಕಾದಂಬರಿ ಕಥೆ ಹಾಗೂ ಸಂವಾದ  ಅಂತಿಮ ಹಂತದ ಕ್ಲೈಮ್ಯಾಕ್ಸ ಘಟ್ಟಕ್ಕೆ ಬಂದು ನಿಂತಿತ್ತು. ನಾದಿರಾ ತನ್ನ ಪತಿಯನ್ನೇ ಪುನರ್ವಿವಾಹವಾಗಲು ಪರಪುರುಷನನ್ನು ಒಂದು ದಿನದ ಮಟ್ಟಿಗಾದರೂ ಮದುವೆಯಾಗಿ ಅವನಿಂದ ತಲಾಖ್ ಪಡೆಯಲೇಬೇಕೆಂಬ ತೊಡಕಿನ ಕುರಿತು ಚರ್ಚಿಸಲು ನಾದಿರಾಳ ತಂದೆ ಮಹಮ್ಮದ್ ಖಾನ್ ನ ಗೆಳೆಯ ಕಾದರ್ ಖಾಜಿಗಳ ಹತ್ತಿರ ಹೋದ ಪ್ರಸಂಗದ ವಿಶ್ಲೇಷಣೆ ನಡೆದಿತ್ತು. ಕಾದರ್ ಕೇಳಿದ ಪ್ರಶ್ನೆಗಳಿಗೆ ಖಾಜಿಯವರು ತಲಾಖ್ ನ್ನು ಒಂದೇ ಬಾರಿಗೆ ಮೂರೂ ಸಲ ಹೇಳಿಬಿಡುವುದಲ್ಲ. ಮೂರು ತಿಂಗಳ ಅಂತರದಲ್ಲಿ ಪ್ರತ್ಯೇಕವಾಗಿ ಒಂದೊಂದು ಬಾರಿ ಹೇಳಿ ದಂಪತಿಗಳಿಗೆ ಒಂದಾಗುವ ಅವಕಾಶ ಕಲ್ಪಿಸಿಕೊಡುವ ಪದ್ಧತಿ ಖುರಾನ್ ನಲ್ಲಿ ಇರುವುದರ ಬಗ್ಗೆ ಬೆಳಕು ಚೆಲ್ಲುತ್ತಾರೆ ಎಂದಿದ್ದೇ ತಡ ಚರ್ಚೆಗಿಳಿದ ವಿದ್ಯಾರ್ಥಿನಿಯೊಬ್ಬಳು "ಹಾಗಾದರೆ ನಾದಿರಾಳ ಪತಿ ರಶೀದ್ ತಲಾಖ್ ಕೊಡುವಾಗ  ಯಾಕೆ ಹಾಗೆ ಮಾಡಲಿಲ್ಲ ಸರ್ ? " ಎಂದಳು . ಖಾಜಿಗಳು ಹೇಳುತ್ತಿರುವ ಉತ್ತರವಿನ್ನೂ ಮುಗಿದಿಲ್ಲ ಎನ್ನುತ್ತಲೇ ಮುಂದುವರೆಸಿ  "ಈ ಮೂರ್ಖ  ಗಂಡಸರು ತಮ್ಮ ಸೌಕರ್ಯಕ್ಕಾಗಿ ಕೈಗೊಂಡ ಉಪಾಯಗಳು " ಎಂದು ಖಾಜಿಯವರು ಉತ್ತರ ಕೊಡುವುದನ್ನು ಗಡಸು ಧ್ವನಿಯಿಂದಲೇ ಎತ್ತರಿಸಿ ಹೇಳಿದಾಗ ಪ್ರಶ್ನೆ ಕೇಳಿದ ವಿದ್ಯಾರ್ಥಿನಿಗೆ ಅರ್ಧ ಉತ್ತರ ಹೊಳೆದಾಗಿತ್ತು. ಮಹಮ್ಮದ್ ಖಾನ್ ರಶೀದ್ ನಂತಹ ಗಂಡಸರು ತಾವೇ ಮಾಡಿಕೊಂಡ ಬದಲಾವಣೆಗಳ ಬಲಿಪಶು ನಾದಿರಾ ಎಂಬ ನತದೃಷ್ಟ ಹೆಣ್ಣು ಎಂಬುದನ್ನು ನೆನೆದು ವಿಷಾದಿಸುವಂತೆ ಮೌನಿಯಾದಳು. ಈ ಸಂದರ್ಭದಲ್ಲಿ ಲೇಖಕಿಯರಾದ ಸಾರಾ ರವರು  ಕಾದರ್ ನ ಮೂಲಕ   ಹೆಣ್ಣುಮಕ್ಕಳು ಅನುಭವಿಸುತ್ತಿರುವ ಬವಣೆಗಳನ್ನು ಕುರಿತು ಖಾಜಿಗಳನ್ನು ಕೇಳಿದ  ಪ್ರಶ್ನೆಗಳು ಸಮಕಾಲೀನ  ಆಧುನಿಕ ಸಮಾಜವನ್ನೂ ಎಚ್ಚರಿಸುವಂತಿವೆ. ರಾತ್ರಿಯೆಲ್ಲ ಧೋ ಎಂದು ಸುರಿದ ಮಳೆಗೆ ಯುಗಾದಿಯ ಸೂರ್ಯೋದಯದ  ಪ್ರಕೃತಿ ಹೇಗೆ  ನವವಧುವಿನಂತೆ ಹಸಿರುಟ್ಟು ಕಂಗೊಳಿಸುತ್ತಿದೆಯೋ ಹಾಗೆಯೇ ಅಂದೊಂದು ದಿನ ನಾದಿರಾ ಎದ್ದ ಬೆಳಗು ಮಣ್ಣಿನ ಸುವಾಸನೆಯನ್ನು ಹೊತ್ತು ಅವಳನ್ನು ಸ್ವಾಗತಿಸಿತ್ತು.

ನಾದಿರಾಳ ಬದುಕು ಪ್ರಕೃತಿಯ ಮನ್ವಂತರದಂತೆ  ಹೊಸದೊಂದು ವಸಂತಕೆ ಹೊರಳಿಕೊಳ್ಳುತ್ತಿದ್ದ ಸುಸಂದರ್ಭದ ವರ್ಣನೆಯು, ಮುಂಗಾರು ಮಳೆ  ಧರೆಗಿಳಿಯಲು  ಕಾತರದಿಂದ ಸಜ್ಜಾಗುತ್ತಿದ್ದ ಕಾಲದ ಬೆಳಗಿನಲ್ಲಿ  ನನ್ನ  ತರಗತಿಯಲ್ಲಿ ಸಾಧ್ಯವಾಗಿದ್ದು ಕಾದಂಬರಿ ಕತೆಗೊಂದು ಸೂಕ್ತವಾದ ಹಾಗೂ ಅಷ್ಟೇ ಆಪ್ತವಾದ  ಪರಿಸರವನ್ನು ಒದಗಿಸಿತ್ತು.ಇಂತಹ ವಿಶಿಷ್ಟ  ಸಂದರ್ಭಗಳ ವರ್ಣನೆಯಿಂದಾಗಿ  ಕಾದಂಬರಿಯು ಕರಾವಳಿ ಸಂಸ್ಕೃತಿಯ  ದೃಶ್ಯಕಾವ್ಯವಾಗಿ ಮೂಡಿಬಂದಿದೆ. ಹೀಗೆ ಕತೆಯ ಜೊತೆ ಸಂವಾದ ಸಾಗುತ್ತಿದ್ದಾಗಲೇ ಒಬ್ಬ ವಿದ್ಯಾರ್ಥಿನಿಯನ್ನು ಕರೆದು ಕತೆಯ ಮುಂದುವರಿದ ಭಾಗವನ್ನು ವಿವರಿಸಲು ಹೇಳಿದಾಗ ತಾನು ಪಠ್ಯವನ್ನು  ಗ್ರಹಿಸಿದಂತೆ ಕತೆಯನ್ನು ಅದರ ವಿವರವನ್ನು ತರಗತಿಯ ಮುಂದೆ ಉತ್ಸಾಹದಿಂದಲೇ ಹಂಚಿಕೊಂಡದ್ದು ನನಗೆ ಅಪಾರ ಸಂತಸವನ್ನುಂಟು ಮಾಡಿತು. ಮತ್ತೊಬ್ಬ ವಿದ್ಯಾರ್ಥಿನಿಯನ್ನು ಕರೆದು ಕತೆಯನ್ನು ಮುಂದುವರೆಸಲು ಹೇಳಿದೆ.ಇದೇ ಸರಿಯಾದ ಅವಕಾಶವೆಂದು ಬಗೆದ ವಿದ್ಯಾರ್ಥಿನಿ ಮುಂದಿನ ಕಥಾಭಾಗವನ್ನು ಹೇಳಿ ಕಥೆಯನ್ನು ಕೊನೆಗೊಳಿಸಿದಾಗ ಎಲ್ಲ ವಿದ್ಯಾರ್ಥಿಗಳ ಮೊಗದಲ್ಲಿ ನಾದಿರಾಳ ಸ್ವಾತಂತ್ರ್ಯ,ಸಂಸಾರ, ಸುಖ,ನೆಮ್ಮದಿ,ಬದುಕು,ಶಕ್ತಿ,ಧೈರ್ಯ,ಪ್ರೀತಿ, ವಾತ್ಸಲ್ಯ ಕೊನೆಗೆ  ಪ್ರಾಣವನ್ನೂ ಬಲಿ ಪಡೆದ  ಬದಲಾಗದ  ಸಾಂಸ್ಥಿಕ ವ್ಯವಸ್ಥೆಯ ಬಗ್ಗೆ ಆಕ್ರೋಶ ಮಡುಗಟ್ಟಿತ್ತು.ತರಗತಿಯನ್ನಾವರಿಸಿದ ವಿಷಣ್ಣ ಭಾವವನ್ನು  ಚಿಂತನೆಯ ಚೈತನ್ಯವಾಗಿ ಪರಿವರ್ತಿಸುವ ಸವಾಲಿನೊಂದಿಗೆ  ಪ್ರಶ್ನೆ ಕೇಳುವ ಸರದಿ ನನ್ನದಾಯಿತು. ಹತ್ತಿರದಲ್ಲಿದ್ದ    ಚಂದ್ರಗಿರಿ ನದಿಯನ್ನು ಬಿಟ್ಟು  ಮಸೀದಿಯ ಕೊಳದಲ್ಲಿ ನಾದಿರಾ  ಮುಳುಗಲು ಕಾರಣವೇನಿರಬಹುದು ? ಎಂದು ಒಂದು ಪ್ರಶ್ನೆಯನ್ನೆಸೆದೆ. ಪ್ರಶ್ನೆ ಕೇಳಿದುದರ ಇಂಗಿತವನ್ನರಿತ ವಿದ್ಯಾರ್ಥಿನಿಯೊಬ್ಬಳು " ರಶೀದ್ ನನ್ನು ಸೇರಲು ಬಹುದೊಡ್ಡ ಅಡ್ಡಿಯಾಗಿದ್ದ ಚಂದ್ರಗಿರಿಯ ಬಗ್ಗೆ ನಾದಿರಾಳಲ್ಲಿ ಒಂದು ಬಗೆಯ ಆಕ್ರೋಶ ಮನೆ ಮಾಡಿರಬಹುದು ಸರ್ " ಎಂದುಲಿದಾಗ, ನಾನು" ಇದರ ಜೊತೆಗೆ ಚಂದ್ರಗಿರಿ ನಾದಿರಾಳಂತಹ  ನೂರಾರು ಹೆಣ್ಣುಮಕ್ಕಳ ಕಣ್ಣೀರಿನ ನದಿಯಾಗಿ ಹರಿದವಳು ಹೇಗೆ ತಾನೇ ಈ ಹೆಣ್ಣಿಗೆ ಸಾಂತ್ವನ ನೀಡಬಲ್ಲಳು ಎಂಬುದು ಮತ್ತೊಂದು ಕಾರಣವಾಗಿರಬಹುದಲ್ಲದೇ, ಧರ್ಮದ ನಿಯಮಗಳನ್ನೇ ಉಸಿರಾಡಿಸಿ, ಧರ್ಮದ ನಿಯಮದಂತೆಯೇ ಬೆಳೆದು, ಧರ್ಮದ ನಿಯಮಗಳನ್ನೇ ಬದುಕಿ, ಆ ನಿಯಮಗಳ ಒಂದಕ್ಷರವನ್ನೂ  ಮೀರಲಾಗದ ನಾದಿರಾಳಿಗೆ ಧರ್ಮದ ಸಂಕೇತವಾದ ಮಸೀದಿಯ ಆವರಣದಲ್ಲಿನ ಕೊಳಕ್ಕಿಂತ ಔಚಿತ್ಯಪುರ್ಣವಾದ  ನ್ಯಾಯ ಸ್ಥಾನ ದೊರಕುವುದಿನ್ನೆಲ್ಲಿ ?
ಎಂಬ ಉತ್ತರವನ್ನು ದನಿಗೂಡಿಸಿ ಆಕೆಯ ಸಾವು ಕತೆಯ ಅಂತ್ಯವಲ್ಲ ; ಬದಲಾಗಲೇಬೇಕಾದ ಸಾಂಸ್ಥಿಕ ವ್ಯವಸ್ಥೆಗೊಂದು ಮುನ್ನುಡಿಯೂ ಹೌದು  ಎಂಬ ಸತ್ಯದರ್ಶನದ ವಿಮರ್ಶೆಗೆ ತೊಡಗಿ ನಾದಿರಾಳ ತಣ್ಣಗಿನ ಈ ಪ್ರತಿಭಟನೆ ಸಮಾಜಕ್ಕೊಂದು ಎಚ್ಚರಿಕೆಯ ಕರೆಗಂಟೆಯಲ್ಲದೇ ಎಂಥವರನ್ನೂ ಮರುಗಟ್ಟಿಸಬಲ್ಲದು  ಎನ್ನುವಾಗ ಅದೇಕೋ  ಕುವೆಂಪುರವರ ಈ ಸಾಲುಗಳು ನೆನಪಾದವು.....
"ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿ
ಬಡತನವ ಬುಡಮಟ್ಟ ಕೀಳಬನ್ನಿ
ಮೌಢ್ಯತೆಯ ಮಾರಿಯನು ಹೊರದೂಡಲೈತನ್ನಿ
ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ
ಓ ಬನ್ನಿ ಸೋದರರೆ ಬೇಗ ಬನ್ನಿ
ಸಿಲುಕದಿರಿ ಮತವೆಂಬ ಮೋಹದಜ್ಞಾನಕ್ಕೆ
ಮತಿಯಿಂದ ದುಡಿಯಿರೈ ಲೋಕಹಿತಕೆ
ಆ ಮತದ ಈ ಮತದ ಹಳೆಮತದ ಸಹವಾಸ
ಸಾಕಿನ್ನು ಸೇರಿರೈ ಮನುಜ ಮತಕೆ
ಓ ಬನ್ನಿ ಸೋದರರೆ ವಿಶ್ವಪಥಕೆ
ನಾದಿರಾಳಂತಹ ಅದೆಷ್ಟೋ ಜೀವಗಳು  ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆ ಹಾಗೂ ಸಾಂಸ್ಥಿಕ ವ್ಯವಸ್ಥೆಯ  ಕಾರಣದಿಂದಾಗಿ ಸಮಕಾಲೀನ ಸಂದರ್ಭದಲ್ಲಿಯೂ ನರಳುತ್ತಿರುವ ಧ್ವನಿಗಳು ಆಗಾಗ ಕೇಳಿ ಬರುತ್ತಿರುವುದು ವಿಷಾದನೀಯ ಸಂಗತಿ. ಕಾಲಕ್ಕೆ ತಕ್ಕಂತೆ ಇಂದು ಶೋಷಣೆಯ ಸ್ವರೂಪ ಆಕೃತಿ ವಿಧಾನಗಳು ಭಿನ್ನವಾಗಿರಬಹದು ಆದರೆ ಶೋಷಣೆಯುಂಟು ಮಾಡಬಹುದಾದ ದುಃಖ  ಸಂಕಟಗಳ ಅಂತರಂಗದ ನರಳುವಿಕೆಯೆಂದೆಂದಿಗೂ ಒಂದೇ. ಆಧುನಿಕ ಮಾಹಿತಿ ತಂತ್ರಜ್ಞಾನದ ಯುಗದಲ್ಲಿಯೂ ಮಹಿಳೆಯರಿಗೆ ದೇಗುಲ ಪ್ರವೇಶದಂತಹ ವಿಷಯಗಳು ಸುಪ್ರಿಂಕೋರ್ಟ್ ನ ಕಟಕಟೆಯಿಂದ  ಆದೇಶಗಳಾಗಿ ಹೊರಬರುತ್ತಿವೆಯೆಂದರೆ  ಶೋಷಿತರ ಧ್ವನಿಗಳ ಆರ್ತನಾದ  ಕಡಿಮೆಯಾಗಿಲ್ಲವೆಂದೇ ಅರ್ಥವಲ್ಲವೇ?


Saturday, 9 March 2019

ಚಂದ್ರಗಿರಿಯ ತೀರದಲ್ಲಿ ಮಹಿಳೆ...

ಚಂದ್ರಗಿರಿಯ ತೀರದಲ್ಲಿ ಮಹಿಳೆ...
ವಿಶ್ವ ಮಹಿಳಾ ದಿನಾಚರಣೆಯ ಸಂದರ್ಭ. ಅಂತಿಮ  ವರ್ಷದ ಬಿ ಎ ತರಗತಿಯಲ್ಲಿ ( ಐಚ್ಛಿಕ ಕನ್ನಡ ವಿಷಯ) ಸ್ತ್ರೀ ಸಂವೇದನೆಯ, ಬಂಡಾಯ ಲೇಖಕಿಯರಾದ ಸಾ.ರಾ.ಅಬೂಬಕ್ಕರ್ ರವರ  " ಚಂದ್ರಗಿರಿಯ ತೀರದಲ್ಲಿ " ಕಾದಂಬರಿಯ ಕಥಾವಸ್ತುವನ್ನು ಕುರಿತು ಚರ್ಚಿಸುತ್ತಿದ್ದೆ. ಸ್ತ್ರೀ ಶೋಷಣೆಯ ಕರಾಳ ಮುಖವನ್ನು ಬಯಲು ಮಾಡುವ ಕಾದಂಬರಿ ಧರ್ಮ, ಸಂಪ್ರದಾಯ, ಸಾಮಾಜಿಕ ವ್ಯವಸ್ಥೆ ಎಂಬ ಸ್ಥಾಪಿತ ಕಟ್ಟಳೆಗಳ ಮಧ್ಯೆ ನರಳುವ ಸ್ತ್ರೀಯ ದುಸ್ಥಿತಿಯನ್ನು ಇನ್ನಿಲ್ಲದಂತೆ ಕಟ್ಟಿಕೊಡುತ್ತದೆ. ಮಹಮ್ಮದ್ ಖಾನ್ ಎಂಬ ಒರಟು ಧರ್ಮಬೀರುವಿನ ಕೈಯ್ಯಲ್ಲಿ ಸಂಪ್ರದಾಯದ ಸಂಕೋಲೆಗೆ ಸಿಲುಕಿ ನಲುಗುವ ಫಾತೀಮಾಳ ಜೀವ ಮನೆಯ ಮುಂದೆ ನಿಶಾಂತವಾಗಿ ಹರಿಯುತ್ತಿದ್ದ ಚಂದ್ರಗಿರಿಯ ನದಿಗೆ ಅರ್ಪಣೆಯಾಗಬಾರದಿತ್ತೆ ಎಂದು ಹಂಬಲಿಸುವುದನ್ನು ನೆನೆದರೆ ಎಂಥವರ ಹೃದಯವೂ ಕರಗಿಹೋಗುತ್ತದೆ. ವಿಶ್ವ ಮಹಿಳಾ ದಿನದಂದು ನನ್ನ ತರಗತಿಯಲ್ಲಿ ನಡೆಸಿದ ಈ ಚರ್ಚೆ ಒಂದು ಬಗೆಯಲ್ಲಿ ಔಚಿತ್ಯಪೂರ್ಣ ಹಾಗೂ  ಅರ್ಥಪೂರ್ಣತೆಗೆ ಕಾರಣವಾದರೂ ಪಟ್ಟಭದ್ರ ಧಾರ್ಮಿಕ ಸಮಾಜದಲ್ಲಿ ನಡೆಯುವ  ಮಹಿಳಾ ಶೋಷಣೆ ಯನ್ನು ಕುರಿತು ಗಂಭೀರವಾಗಿ ಚಿಂತಿಸುವಂತೆ ಮಾಡಿತು.೨೮ ವರ್ಷದ ದೈತ್ಯ ಅಜಾನುಬಾಹು ಒರಟು ಸ್ವಭಾವದ ಮಹಮ್ಮದ್ ಖಾನ್ ನೊಂದಿಗೆ ಮದುವೆಯಾದಾಗ ಕುಸುಮದಂತಿದ್ದ ಫಾತೀಮಾಳ ವಯಸ್ಸು ಕೇವಲ ೧೧ ವರ್ಷ ಎಂದಾಕ್ಷಣವೇ  ಹಲ್ಲಿಯಂತೆ ಲೊಚಗುಟ್ಟಿ ಮರುಗಿದ  ನನ್ನ ತರಗತಿಯ ವಿದ್ಯಾರ್ಥಿಗಳಲ್ಲಿರುವ ಮಾನವೀಯ ಅನುಕಂಪದ  ಸಂವೇದನೆ ಈ ಸಂಪ್ರದಾಯವಾದಿಗಳಲ್ಲೇಕಿಲ್ಲ ಎಂಬುದು ನನಗೆ ಈಗಲೂ  ಅಚ್ಚರಿಯಾಗಿ ಕಾಡುತ್ತದೆ.
ಇದು ಯಾವುದೇ ಒಂದು ಧರ್ಮ, ಜಾತಿ, ಮತಕ್ಕೆ ಸಂಬಂಧಿಸಿದ ಸಂಗತಿಯೆಂದು ನಾನು ಚರ್ಚಿಸಲು ಬಯಸುವುದಿಲ್ಲ. ಬಹುತ್ವದ ಸಂಸ್ಕೃತಿಯನ್ನು ಮಡಿಲಲ್ಲಿಟ್ಟುಕೊಂಡು ತೂಗುತ್ತಿರುವ ಭಾರತೀಯ ಸಮಾಜದಲ್ಲಿ ಅಲ್ಲಲ್ಲಿ ಬಾಲ್ಯವಿವಾಹಗಳು ಘಟಿಸುತ್ತಲೇ ಇವೆ.ನಿಷೇಧದ ಕಾನೂನಿದ್ದರೂ ಲೆಕ್ಕಿಸದೇ ಜವಾಬ್ದಾರಿಯುತವೆಂದು ಕೊಚ್ಚಿಕೊಳ್ಳುವ  ತಂದೆ ತಾಯಿಗಳೇ ಮುಂದೆ ನಿಂತು ಗುಪ್ತವಾಗಿ ನಡೆಸುವ ಬಾಲ್ಯವಿವಾಹಗಳು ಸ್ತ್ರೀಸಮಾಜವನ್ನು ಶೋಷಿಸುವ ಮತ್ತೊಂದು ಪರಿಯನ್ನು ಬಣ್ಣಿಸುತ್ತವೆ.ಇದು ಸಂಪ್ರದಾಯ ಪರಂಪರೆಯ ಹೆಸರಿನಲ್ಲಿ ಎಲ್ಲ ಮತ ಧರ್ಮಗಳಲ್ಲಿಯೂ ಅನೂಚಾನವಾಗಿ ನಡೆದುಕೊಂಡು ಬಂದಿದೆ.ಜಗತ್ತಿನ ಮನುಕುಲದ  ಕಲ್ಮಶಗಳನ್ನೆಲ್ಲಾ ತೊಳೆದು ನುಂಗಿ ವಿಷಕಂಠೆಯಾದ ಚಂದ್ರಗಿರಿಯ ನದಿಯಂತೆ, ಫಾತೀಮಾ ತನ್ನ ಗಂಡನ ಪಾಪಕರ್ಮಗಳನ್ನೆಲ್ಲಾ ಮೌನಿಯಾಗಿ ಸಹಿಸುತ್ತಲೇ ಅನುಭವಿಸಿ ಸಂಸಾರದ ಅನುಭಾವಿಯಾಗಿ ಹರಿದವಳು.ನದಿಯ ಒಂದು ಕಡವಿನಲ್ಲಿ ,ಹೆಂಡತಿ ಫಾತೀಮಾಳನ್ನೇ ಕ್ರೂರವಾಗಿ ಬೆತ್ತದೇಟಿನಿಂದ ಹಿಂಸಿಸುವ  ಧರ್ಮಬೀರುವಾಗಿ, ಕಟ್ಟಾ ಸಂಪ್ರದಾಯವಾದಿಯಾಗಿದ್ದ ಕಠಿಣ ಹೃದಯದ ಮಹಮ್ಮದ್ ಖಾನ್, ಬದಲಾವಣೆಯನ್ನು ಕನಸಿನಲ್ಲಿಯೂ ಬಯಸದ,  ನಿಂತಲ್ಲಿಯೇ ನಿಂತ ಕೊಳದ ಜಲಧಿಯಂತೆ ಮಲೆತ ಧರ್ಮವೆಂಬ ಸ್ಥಾವರದ ಸಂಕೇತವಾದರೆ, ಅದೇ ನದಿಯ ಮತ್ತೊಂದು ದಂಡೆಯಲ್ಲಿ ಧಾರ್ಮಿಕ ಸಂಪ್ರದಾಯದ ಆವರಣದಲ್ಲಿದ್ದೂ ನವೋದಯದ ಕಡೆಗೆ ತುಡಿಯುವ ಪ್ರಗತಿಪರ ಚಿಂತನೆಯ ಜಂಗಮದ ಪ್ರತಿನಿಧಿಯಾಗಿ  ಮಹಮ್ಮದ್ ಖಾನ್ ರ ಮಗಳು "ನಾದಿರಾ"ಳ ಗಂಡ ರಶೀದ್ ನೆಲೆ ನಿಲ್ಲುತ್ತಾನೆ ಎಂದು ಚರ್ಚಿಸುತ್ತಲೇ ಪಾಠದ ಮಧ್ಯೆ " ರಶೀದ್ ಹಾಗೂ ಮಹಮ್ಮದ್ ಖಾನ್ ಪಾತ್ರಗಲ್ಲಿ ನಿಮಗಿಷ್ಟವಾದ ಪಾತ್ರ ಯಾವುದು?"  ಎಂಬ  ಒಂದು ಪ್ರಶ್ನೆಯನ್ನೆಸೆದಾಗ ಬಂದ ಉತ್ತರ ನಿರೀಕ್ಷಿತವಾಗಿತ್ತು.
ಕತೆಯಲ್ಲಿ ಯಾರಿಗೂ ಬೇಡವಾದ ಮಹಮ್ಮದ್ ಖಾನ್ ನಿಗಿಂತ ತನ್ನ ಹೆಂಡತಿ  " ನಾದಿರಾ"  ಎಂಬ ಹೆಣ್ಣನ್ನು ತನ್ನದೇ ಜೀವವೆಂಬಂತೆ ಪ್ರೀತಿಸುವ  ಮಾನವೀಯ ಹೃದಯವುಳ್ಳ "ರಶೀದ್" ನನ್ನ ವಿದ್ಯಾರ್ಥಿಗಳ ಹೃದಯವನ್ನಾಕ್ರಮಿಸಿದ್ದ. ಈ ಚರ್ಚೆ ಮುಂದುವರಿಯುತ್ತಿದ್ದಂತೆ ಸಮಯವಾಗಿದ್ದರಿಂದ ತರಗತಿಯಿಂದ ಹೊರಬಂದ ನಾನು ಕಾಲೇಜಿನ ಕಾರಿಡಾರಿನಲ್ಲಿ ನಡೆಯುತ್ತಿದ್ದ ವಿಶ್ವ ಮಹಿಳಾ ದಿನಾಚರಣೆಯ ಸಿದ್ಧತೆಗಳನ್ನು ಕಂಡು ಪುಳಕಗೊಂಡೆ.
ಅಲ್ಲಿಂದ ನೇರವಾಗಿ ಪ್ರಥಮ ವರ್ಷದ  ಬಿ.ಕಾಂ. ತರಗತಿಗೆ ಪ್ರವೇಶಿಸಿದ ನಾನು ಅವಶ್ಯಕ ಕನ್ನಡ ವಿಷಯದಲ್ಲಿ  ಅಪೂರ್ಣವಾಗಿದ್ದ  "ಅಕ್ಷರ ದೇವರು" ಎಂಬ ಕತೆಯ ಕುರಿತು ಚರ್ಚೆಯನ್ನು ಮುಂದುವರೆಸಿದೆ. ಉತ್ತರ ಕರ್ನಾಟಕದ ಭಾಷೆ ಹಾಗೂ ನೆಲದ ಸೊಗಡಿನ ಗ್ರಾಮೀಣ ಸಂಸ್ಕೃತಿಯ ಸೌರಭವನ್ನು ನಾಡಿನ ತುಂಬೆಲ್ಲಾ ಹರಡುತ್ತಿರುವ ನಮ್ಮದೇ ಬಾಗಲಕೋಟ ಜಿಲ್ಲೆಯ ಅನನ್ಯ ಕತೆಗಾರ ಡಾ. ಅಬ್ಬಾಸ್ ಮೇಲಿನಮನಿಯವರು ರಚಿಸಿದ ಕಥೆಯೇ "ಅಕ್ಷರ ದೇವರು". ಅತ್ತ ಸಭಾಭವನದಲ್ಲಿ ಮಹಿಳಾ ದಿನಾಚರಣೆಯ ರಾಗಬದ್ದ  ಗೀತೆಗಳು, ಭಾಷಣದ ಸದ್ದು ಕೇಳುತ್ತಿದ್ದರೆ,ಇತ್ತ ಹೆಣ್ಣುಮಕ್ಕಳ ಸಂಖ್ಯೆಯೇ ಹೆಚ್ಚಾಗಿದ್ದ ನನ್ನ ತರಗತಿಯಲ್ಲಿ ಸಂಕನಗೌಡ ಹಾಗೂ ವಸಂತದೇಸಾಯಿಯರೆಂಬ ಊಳಿಗಮಾನ್ಯ ಸಂಸ್ಕೃತಿಯ ಹೆಮ್ಮರಗಳು ಜನರನ್ನು  ಶೋಷಿಸುತ್ತಿದ್ದ ಪರಿಯನ್ನು ಕುರಿತು  ಚರ್ಚೆ ಸಾಗಿತ್ತು.ಗೌಡರು ಹಾಗೂ ದೇಸಾಯಿಯಯರ ಶೋಷಣೆಯನ್ನು ದಿಟ್ಟತನದಿಂದ ಎದುರಿಸಿ ಗೆದ್ದ ಮಹಿಳೆ "ತಾಯವ್ವಗೌಡ್ತಿ" ಯ ಸಾಧನೆಯ ಕತೆಗೆ ವಿದ್ಯಾರ್ಥಿಗಳೂ ತಲೆದೂಗಿದರು. ತಾವು ಕಬಳಿಸಬೇಕೆಂದಿದ್ದ, ಬೆಲೆಬಾಳುವ  ಜಾಗೆಯನ್ನು, ತಾಯವ್ವಗೌಡ್ತಿ ಊರಿನ ಶಾಲೆಗೆ ದಾನ ಮಾಡಿದ್ದನ್ನು ಗೌಡರು ಹಾಗೂ ದೇಸಾಯಿಯರಿಗೆ ಸಹಿಸಿಕೊಳ್ಳಲಾಗಲಿಲ್ಲ. ಗಲಭೆ ಎಬ್ಬಿಸಿ ತಾಲೂಕಾ ಕಛೇರಿಗೆ ದೂರು ಕೊಟ್ಟು  ಪಿತೂರಿ ನಡೆಸಿದರೂ ಜಗ್ಗದ ತಾಯವ್ವ ಗೌಡ್ತಿಯ ಗೌಡರ ವಿರುದ್ಧದ  ಎದೆಗಾರಿಕೆಯನ್ನು ತರಗತಿಯಲ್ಲಿ ಬಣ್ಣಿಸುವಾಗಲಂತೂ " ಅರ್ಥಪೂರ್ಣ ಸಂದರ್ಭಕ್ಕೆ ಔಚಿತ್ಯಪೂರ್ಣ ಕತೆ "ಎಂದು ನನಗನ್ನಿಸಿತು. ಇದನ್ನೇ ಆಧಾರವಾಗಿಟ್ಟುಕೊಂಡು ಕತೆಯನ್ನು ಸಮಕಾಲೀನಗೊಳಿಸುವ ವಿಮರ್ಶೆಗೆ ತೊಡಗಿದೆ. ಕತೆಯಲ್ಲಿ ಬರುವ ದುರ್ಬಲರನ್ನು ಕಪಿಮುಷ್ಠಿಯಲ್ಲಿಟ್ಟುಕೊಂಡು ಆಳುವ ಯಜಮಾನ ಸಂಸ್ಕೃತಿಯ ಸಂಕನಗೌಡ  ಹಾಗೂ ದೇಸಾಯಿಯರಂತಹ ನಾಯಕರುಗಳು ನಮ್ಮ ಸಮಕಾಲೀನ ಸಮಾಜದಲ್ಲಿ ಅಲ್ಲಲ್ಲಿ ಇನ್ನೂ  ಕಾಣಸಿಗುತ್ತಿರುವುದು ದುರಂತವೇ ಸರಿಯೆಂದು ವಿಷಾದಿಸಿದೆ. ಪೂರಕವಾಗಿ ವಿದ್ಯಾರ್ಥಿಗಳು ಜೀತಪದ್ಧತಿ,ಕಾರ್ಮಿಕರ ಶೋಷಣೆ, ರೈತರ ಸಂಕಷ್ಟ ಮುಂತಾದ  ಕೆಲವು ಉದಾಹರಣೆಗಳನ್ನು ನೀಡಿದ್ದು ಸಂತಸ ತಂದಿತು.

ಚಹಾ ಮತ್ತು ನಾನು

 ಚಹಾ ಮತ್ತು ನಾನು ದೂರವಾಗು ಎಂದರೆ ನಮ್ಮಿಬ್ಬರಿಗೂ ಸಾಧ್ಯವೇ ಪ್ರಿಯೆ ಪ್ರಾಣದಿಂದ ಬೇರೆಯಾದವರುಂಟೆ? ಕಾಣುವುದಿಲ್ಲ ಛಾಯೆ ಆತ್ಮದಿಂದ ಹೊರನಡೆದವರುಂಟೆ ? ನೀನೊಂದು ಮಾಯೆ ರಸ...