Total Pageviews
Wednesday, 22 January 2020
Sunday, 19 January 2020
ಅಲಿಬಾಬಾನ ಗುಹೆಯೊಳಗೆ
ಆಕಳಿಸುವ ಜಗದ ನೆತ್ತಿಯ
ಮೇಲೆ ಕುಕ್ಕಿದಂತೆ
ಜ್ಯೋತಿ ಹಚ್ಚಿಟ್ಟ ಮಹಾಮನೆಯೆ ಜಗುಲಿಯೆಲ್ಲಿ
ಸಿರಿ ತುಂಬಿದ ಅರಮನೆಗಳೇ ಎಲ್ಲ ಇಲ್ಲಿ
ಗುಹೆಗಳ ಒಳ ಹೊಕ್ಕು ಬಾಚಿಕೊಂಡ
ಭೋಗದ ಚೀಲಗಳೇ ಬೆನ್ನ ಮೇಲೆ
ಅಲಿಬಾಬಾಗಳ ಕಣ್ಣುಗಳ ಭಿತ್ತಿಯೊಳಗೆ
ಮುತ್ತು ರತ್ನ ಹವಳ ಸುವರ್ಣ
ಮಹಾಮಾಲೆ
ಶರಣ ಪ್ರಮಥಂಗಳ ಮಾತು
ಮಥನ ಅನುಭಾವದ ನವನೀತವೆತ್ತಣ
ದಾಸಯ್ಯರು ತೋರಿದ ಮಧುಸೂದನನ
ಕೊಳಲಗಾನವೆತ್ತಣ
ಮುಕ್ತಿಯ ಪದಮಾಲಿಕೆ
ಶರೀಫರ ತಂಬೂರಿಯ ನಾದದೀಪಿಕೆ
ಮರೆತು ಹೋಗಿ ಹಾದಿ ತಪ್ಪಿದವರು
ಚಿಟ್ಟೆಯಾಗಿ ಹೊರಬರಲಾಗದ ತಹತಹಿಕೆ
ಕಾಮದೆಳೆ ಮೋಹ ಮತ್ಸರದ ಬಲೆ
ಹೆಣೆದು ಸಿಲುಕಿ ಗುದ್ದಿ ಒದ್ದಾಡಿ
ಬಳಲಿ ಬೆಂದು ಹೋದ ತೆರಣಿ
ತೊಳಲಾಟದ ಕನವರಿಕೆಯ ಕನಸು
ಸಿರಿ ಸುಖದ ಹಳಹಳಿಕೆಯ ಮನಸು
ಮಬ್ಬು ಮುಸುಕಿದ ಹಾದಿಯ ತುದಿ
ಅಡ್ಡ ಹರಿಯುತಿದೆ ಭವದ ನದಿ
ದಡದಾಚೆ ಕರೆದೊಯ್ಯುವ ಅಂಬಿಗನ ದೋಣಿ
ಚೌಡಯ್ಯನಿಲ್ಲದೆ ಎಲ್ಲೆಲ್ಲೂ ಸೋರುವ
ತೂತುಗಳ ಖಣಿ
ಎಲ್ಲಿ ಪಯಣದ ಯೋಗ
ಇಲ್ಲ ಧ್ಯಾನದ ಜಾಗ
ಮಹಾಮಾಯೆಯಾಟ ಭವದ ಚಕ್ರವ್ಯೂಹ
ಸುಲಭ ಹೊರಟ ಅಭಿಮನ್ಯುಗಳಿಗೆ
ದಿಕ್ಕಿಲ್ಲದ ದ್ವಂದ್ವ ಭವಿಗಳಿಗೆ
ದುರಾಸೆ ಮೂಟೆ ಒಂದೆಡೆಗೆ
ಧುಮ್ಮಿಕ್ಕಿ ಹರಿವ ನದಿ ಇನ್ನೊಂದೆಡೆಗೆ
ತೆರೆಯದ ಭದ್ರ ಬಾಗಿಲು ಮಗದೊಂದೆಡೆಗೆ
ಬಳಲುವುದೊಂದೇ ಕಾಯಕ
ನಿತ್ಯ ಸಂತೆಯ ಮಿಥ್ಯಗಳೊಳಗೆ
ಸತ್ಯ ಶೋಧನೆಯ ಕುಹಕದಲಿ ಮುಳುಗಿ
ಭೋಗದರಮನೆಯೊಳಗೆ ಝಗಮಗಿಸುವ
ಥಳುಕು ಬಳುಕು
ಗುರಿಯಿಲ್ಲದ ನಾಳೆಗಳ ಕನಸು
ಮುಂದೆ ತೆವಳುವವರಿಲ್ಲ
ಹಿಂದೆ ತಳ್ಳುವವರೇ ಎಲ್ಲ
ಬಾಗಿಲ ಬಳಿ ನಿಂತನರಸ ಬಿಜ್ಜಳ
ತಪ್ಪಿಸಿಕೊಳ್ಳದಂತೆ ಒಂದೇ ಒಂದು
ಸಾಮ್ರಾಜ್ಯದ ಹುಳ
ಕನಕನ ಕಿಂಡಿಯೇ ಬೆಳಕಿನ ಪಥ
ಸಾಹಸದ ಪಯಣ ದೂರ ಗಾವುದ
ಕಾಣುವುದಾರಿಗೋ ಎಲ್ಲ ಚೀಲ
ಹೊತ್ತವರೇ
ಸುತ್ತುವುದಲ್ಲಿಯೇ ಗೂಡೊಳಗೆ
ಸಿರಿಯ ಕೃತಕ ಮಯನರಮನೆಯೊಳಗೆ
ಬಂಧನ ಮುಕ್ತಿ ಬಂಧನ ಮುಕ್ತಿ
ಮಂತ್ರಜಪದ ಮಂಥನ
ಜಾರುಬೀಳುವುದರೊಳಗೆ
Wednesday, 1 January 2020
ಜಡತೆಯುರುಳು
ಬತ್ತಿದೊಡಲಲ್ಲಿಯೂ ಚಿಮ್ಮುವ
ಜೀವನೋತ್ಸಾಹವೇ
ನೀನೆಷ್ಟು ಚಿರಂತನ
ಸುಕ್ಕು ಗಟ್ಟಿ ಮಡಿಕೆಗಳೆದ್ದ ಚರ್ಮ
ಕುಂಟುತ್ತಾ ಗುರಿಮುಟ್ಟುವ ಕರ್ಮ
ಜೋತುಬಿದ್ದ ಹುಬ್ಬು ದೃಷ್ಟಿ
ಬೆಂದು ಬಾಗಿ ನಡುಗುವ ಮೈ
ನಿನ್ನ ನೆಲೆಯ ಕಂಡವರೊಮ್ಮೆ
ತಲೆದೂಗಬೇಕು ಬಾಗಿ
ಮುನ್ನಡೆಯಬೇಕು
ಜಗದ ಬೆಳಗನೆಬ್ಬಿಸುವ ನೇಸರ
ಸಂಜೆ ಮರೆತು ಕುಣಿಯಬೇಕು
ನೋಡಿ ಮತ್ತೆ ಬೆಳಗಬೇಕು
ಏನು ಬೆರಗು ಇಲ್ಲ ಕೊರಗು
ಚೈತನ್ಯದ ಜೊತೆಗೂಡಿ
ಹೊರಟಿಹುದು ಅನಂತದೆಡೆಗೆ
ಸುಕ್ಕಿರದ ಒಡಲುಗಳಲಿ
ಸುಕ್ಕಿರದ ಒಡಲುಗಳಲಿ
ಹೊಕ್ಕುಳಿಯಲೇಕೆ ಹಿಂಜರಿಕೆ
ಓ ಜೀವನ ಪ್ರೀತಿಯೇ
ಮುಪ್ಪರಿಗೊಂಡು ಮುಪ್ಪುಗಳಲಿ
ಆರ್ಭಟಿಸಿ ಮುನ್ನಡೆವಂತೆ
ನರ್ತಿಸುವುದಿಲ್ಲವೇಕೆ
ಉದಯಕಾಲದ ಯುವಸಸಿಗಳಲಿ
ಆಲಸ್ಯದ ಭೂತವಿಹುದು
ದೇಹವನ್ನೇ ಮನೆಯ ಮಾಡಿ
ಜಡದ ಜೇಡ ಕಟ್ಟಿಹುದು
ಎಚ್ಚರಿಸಿ ಹೊರಗಟ್ಟಿ ತುಳಿದು
ಚೈತನ್ಯದ ನದಿ ಹರಿಸಬಾರದೇಕೆ
ಕನಸು ಬತ್ತಿರುವ ಎದೆಗಳಲಿ
ಉತ್ಸಾಹದ ಚಿಲುಮೆ ಚಿಮ್ಮಿಸಬಾರದೇಕೆ
ಕ್ರಾಂತಿ ಕಿಡಿಯ ಹೊತ್ತಿಸಿ
ಜಾಗೃತಿಯ ಮೂಡಿಸಬಾರದೇಕೆ
ಜಡತೆಯುರುಳಿನಿಂದ ಕೊರಳು
ಪಾರುಮಾಡಬಾರದೇಕೆ
ಕರ್ಮಸಿದ್ಧಾಂತದ ಹಾದಿ
ತೋರಿ ಕರೆದೊಯ್ಯಬಾರದೇಕೆ
ಏಳಿ ಎದ್ದೇಳಿ ಎಂದರೂ
ಏಳದವರ ನಾಟಕಕೆ
ತೆರೆ ಎಳೆಯಬಾರದೇಕೆ
ಜಡತೆಯುರುಳು
ಬತ್ತಿದೊಡಲಲ್ಲಿಯೂ ಚಿಮ್ಮುವ
ಜೀವನೋತ್ಸಾಹವೇ
ನೀನೆಷ್ಟು ಚಿರಂತನ
ಸುಕ್ಕು ಗಟ್ಟಿ ಮಡಿಕೆಗಳೆದ್ದ ಚರ್ಮ
ಕುಂಟುತ್ತಾ ಗುರಿಮುಟ್ಟುವ ಕರ್ಮ
ಜೋತುಬಿದ್ದ ಹುಬ್ಬು ದೃಷ್ಟಿ
ಬೆಂದು ಬಾಗಿ ನಡುಗುವ ಮೈ
ನಿನ್ನ ನೆಲೆಯ ಕಂಡವರೊಮ್ಮೆ
ತಲೆದೂಗಬೇಕು ಬಾಗಿ
ಮುನ್ನಡೆಯಬೇಕು
ಜಗದ ಬೆಳಗನೆಬ್ಬಿಸುವ ನೇಸರ
ಸಂಜೆ ಮರೆತು ಕುಣಿಯಬೇಕು
ನೋಡಿ ಮತ್ತೆ ಬೆಳಗಬೇಕು
ಏನು ಬೆರಗು ಇಲ್ಲ ಕೊರಗು
ಚೈತನ್ಯದ ಜೊತೆಗೂಡಿ
ಹೊರಟಿಹುದು ಅನಂತದೆಡೆಗೆ
ಸುಕ್ಕಿರದ ಒಡಲುಗಳಲಿ
ಹೊಕ್ಕುಳಿಯಲೇಕೆ ಹಿಂಜರಿಕೆ
ಓ ಜೀವನ ಪ್ರೀತಿಯೇ
ಮುನ್ನಡೆಸುವಂತೆ
ಮುಪ್ಪರಿಗೊಂಡು ಮುಪ್ಪುಗಳಲಿ
ಆರ್ಭಟಿಸಿ ಮುನ್ನಡೆವಂತೆ
ನರ್ತಿಸುವುದಿಲ್ಲವೇಕೆ
ಉದಯಕಾಲದ ಯುವಸಸಿಗಳಲಿ
ಆಲಸ್ಯದ ಭೂತವಿಹುದು
ದೇಹವನ್ನೇ ಮನೆಯ ಮಾಡಿ
ಜಡದ ಜೇಡ ಕಟ್ಟಿಹುದು
ಎಚ್ಚರಿಸಿ ಹೊರಗಟ್ಟಿ ತುಳಿದು
ಚೈತನ್ಯದ ನದಿ ಹರಿಸಬಾರದೇಕೆ
ಕನಸು ಬತ್ತಿರುವ ಎದೆಗಳಲಿ
ಉತ್ಸಾಹದ ಚಿಲುಮೆ ಚಿಮ್ಮಿಸಬಾರದೇಕೆ
ಕ್ರಾಂತಿ ಕಿಡಿಯ ಹೊತ್ತಿಸಿ
ಜಾಗೃತಿಯ ಮೂಡಿಸಬಾರದೇಕೆ
ಜಡತೆಯುರುಳಿನಿಂದ ಕೊರಳು
ಪಾರುಮಾಡಬಾರದೇಕೆ
ಕರ್ಮಸಿದ್ಧಾಂತದ ಹಾದಿ
ತೋರಿ ಕರೆದೊಯ್ಯಬಾರದೇಕೆ
ಏಳಿ ಎದ್ದೇಳಿ ಎಂದರೂ
ಏಳದವರ ನಾಟಕಕೆ
ತೆರೆ ಎಳೆಯಬಾರದೇಕೆ
x
Monday, 30 December 2019
ಪ್ರೇಮದೀಕ್ಷೆ
ತಾಜಮಹಲಿನೊಳಗಿನ ಪ್ರೇಮ
ಸುಗಂಧ ಹರಡಿ ಕರೆದು ತಬ್ಬುತಿದೆಕೊಸರಿ ಬಿಡಿಸಿಕೊಂಡಷ್ಟೂ ಬಿಗಿದಪ್ಪಿ ಹಬ್ಬುತಿದೆ
ಮೈಸವರಿ ಹೃದಯದೊಳಗಿಳಿದುಸಂತೈಸಿ ಅಮಲು ಹರಿಸಿಬತ್ತಿಹೋದ ಬೆಚ್ಚಗಿನ ಭಾವಬಿಂದು ಬಂಧುಗಳಹೆಕ್ಕಿ ಹೆಕ್ಕಿ ತೆಗೆಯುತಿದೆ
ಭಾಷೆ ಕಲಿಸಿ, ಮೌನ ನಿಲಿಸಿಧ್ಯಾನದೊಳಗೆ ಮೆರೆದುಬಯಕೆಗಳಿಗೆ ಸ್ಪೂರ್ತಿ ತುಂಬಿಪ್ರೇಮಮೂರ್ತಿಯ ಕಡೆದುಇನ್ನು ಮಹಲು ತನ್ನದೆಂದುಬೀಗುತಿದೆ
ಅಮೃತಶಿಲೆಯ ಬಿಳುಪು ಅಲ್ಲಿಪ್ರೇಮ ನಿತ್ಯ ನಲಿವ ಹೊಳಪುಬಲೆ ಬೀಸಿದಂತೆ ಸೆಳೆದು ಸಮಾಧಿಯಾದ ನೆನಪು ತೆಗೆದುಘಮಲು ಹರಿಸಿ ಉಸಿರುತಿದೆ
ನಿರ್ಮಲತೆಯ ಗಂಧ ತೀಡಿತಂಗಾಳಿಯ ಹೆಜ್ಜೆ ಬಳಸಿಕಲಾದೇವಿಯ ನಾಟ್ಯವಿದೆಂದುಶಹಜಾನನ ಪ್ರೇಮದೆದೆಯ ತೋರಿಆರ್ದ್ರ ಭಾವ ಹಣಿಸುತಿದೆ
ಎದೆಯೊಳಗೆ ಇಳಿದ ಮಹಲುನೂರ್ ಳಂತೆ ಆಳಿ ಒಡಲುಹಂಬಲದ ದಾರಿ ತೋರಿಪ್ರೀತಿ ಅಮೃತತ್ವ ಉಣಿಸಿಹೊರಗೆದ್ದು ಕುಣಿಯತಿದೆ
ಒಳಗೆ ಪಿಸುಮಾತುಗಳ ಸದ್ದುಜಹಾನರ ಸಲ್ಲಾಪದ ಮುದ್ದುಸಮಾಧಿಯ ಮೇಲೆ ಚಾಚಿಕೊಂಡ ಗುಲಾಬಿಯೆಸಳುಗಳ ಮೋಹಜಾಲಆವರಿಸಿ ಎಡೆಬಿಡದೆ ಅನುರಣಿಸಿಮತ್ತೆ ಮತ್ತೆ ಸೆಳೆಯುತಿದೆ
ನಿಜದೊಲುಮೆ ಗೂಡು ತಮ್ಮದೆಂದುಪ್ರೇಮದ ಮಹಾ ರೂಪಕವೆಂದುಕಂಬಗಳ ಮೇಲೆ ಮೈಚಾಚಿದ ಕುಸುರಿ ಚಿತ್ತಾರದ ವ್ಯೂಹವೂ ಬಂಧಿಸಿ ಕರೆದೊಯ್ಯುತಿದೆ
ಉದ್ಯಾನವನದ ಹುಲ್ಲುಮೊರಡಿಕೈಬೀಸಿ ಬಾಚಿ ಕರೆದುಚಂದಿರನ ತಂಬೆಳದಿಂಗಳ ಮಜ್ಜನದ ನರುಗಂಪನೆರೆದುಪ್ರೇಮದೀಕ್ಷೆ ನೀಡುತಿದೆ
Wednesday, 4 December 2019
ಬಂದಿದೆ ಬಂದಿದೆ ವಿಜ್ಞಾನದ ಹಬ್ಬ
ನಮಗೆಂದೇ ತಂದಿದೆ ಬೆಳಕಿನ ಹಬ್ಬ
ಏಳು ಬಣ್ಣಗಳ ತಿಳಿಯುವ ಹಬ್ಬ
ಹಲವು ವಿಷಯಗಳ ಕಲಿಯುವ ಹಬ್ಬ
ಪರಿಸರ ಗಣಿತ ಸಮಾಜದ ಹಬ್ಬ
ಹಾಡು ನಾಟಕ ಕುಣಿಯುವ ಹಬ್ಬ
ಮಾಡುತ ನಲಿಯುತ ಕಲಿಯುವ ಹಬ್ಬ
ಹರ್ಷದಿ ಆಡಿ ತಿಳಿಯುವ ಹಬ್ಬ
ಬದುಕಿನ ಪಾಠವ ಕಲಿಸುವ ಹಬ್ಬ
ಜ್ಞಾನದ ದೀವಿಗೆ ಹಿಡಿಯುವ ಹಬ್ಬ
ಚಟುವಟಿಕೆ ಪ್ರಯೋಗ ದರ್ಶನ ಹಬ್ಬ
ನೆಚ್ಚಿನ ಕೌಶಲ ಗಳಿಸುವ ಹಬ್ಬ
ನಾವ್ ಇಂದೇ ಜ್ಞಾನಿಗಳಾಗುವ ಹಬ್ಬ
ಗೆಳೆಯರೊಂದಿಗೆ ಕಲಿಯುವ ಹಬ್ಬ
ವಿಶ್ಲೇಷಣೆ, ತರ್ಕ, ಕಾರಣ ಹಬ್ಬ
ಪರಿಸರವನ್ನು ಅರಿಯುವ ಹಬ್ಬ
ತಿರುಗುವ ಭೂಮಿಯ ಹಿಡಿಯುವ ಹಬ್ಬ
ನ್ಯೂಟನ್ ಬೋಸ್ ನೆನಪಿನ ಹಬ್ಬ
ಕೂಡಿ ಕಳೆದು ಭಾಗಿಸುವ ಹಬ್ಬ
ಸಂಧಿ ವಚನ ವ್ಯಾಕರಣದ ಹಬ್ಬ
ರೈಮ್ಸ ಗೇಮ್ಸ ಟಿ ಪಿ ಆರ್ ಹಬ್ಬ
ಭೂಗೋಳವ ಸುತ್ತಿ ಬರೆಯುವ ಹಬ್ಬ
ಗೀತ ಸಂಗೀತ ಒಗಟಿನ ಹಬ್ಬ
ನಾಟಕ ನಾಟ್ಯವನಾಡುವ ಹಬ್ಬ
ನಾವೆಲ್ಲರೂ ಹಕ್ಕಿಗಳಾಗುವ ಹಬ್ಬ
ಹಾರಿ ಚಂದಿರ ಹಿಡಿಯುವ ಹಬ್ಬ
ಮರ ಗಿಡಗಳು ನಾವು ಆಗುವ ಹಬ್ಬ
ಉಸಿರಿನ ಹಸಿರು ತುಂಬುವ ಹಬ್ಬ
ನಮ್ಮೊಡನೆ ತಾರೆಗಳಿಳಿಯುವ ಹಬ್ಬ
ಸೌರಮಂಡಲಕೆ ನೆಗೆಯುವ ಹಬ್ಬ
ಬುಧ ಗುರು ಶುಕ್ರವ ಮುಟ್ಟುವ ಹಬ್ಬ
ಶನಿಯ ಉಂಗುರ ಧರಿಸುವ ಹಬ್ಬ
ಹುಣಸೆ ಬೀಜ ಗೋಲಿಗಳ ಹಬ್ಬ
ಎಣಿಸಿ ಲೆಕ್ಕವ ಮಾಡುವ ಹಬ್ಬ
ಗುಣಿಸಿ ಸಂತಸ ಹಂಚುವ ಹಬ್ಬ
ಭಾಗಿಸಿ ಕಷ್ಟವ ಕಳೆಯುವ ಹಬ್ಬ
ಬಣ್ಣದ ಚಿತ್ರವ ಬಿಡಿಸುವ ಹಬ್ಬ
ಬರಹದ ಕಲೆಯ ಅರಳಿಸೊ ಹಬ್ಬ
ರೇಖೆಯ ಮೇಲೆ ಪಯಣದ ಹಬ್ಬ
ಚಿತ್ತಾರದ ಮಾಯಾಲೋಕದ ಹಬ್ಬ
ಮೈಟೋಕಾಂಡ್ರಿಯ ಮೀರಿಸೋ ಹಬ್ಬ
ಹೃದಯದ ಮಾತು ಕೇಳುವ ಹಬ್ಬ
ಮೆದುಳಿನ ಚಿಂತನೆ ಅರಿಯುವ ಹಬ್ಬ
ಕರುಳಿನ ಕೂಗು ಆಲಿಸೋ ಹಬ್ಬ
ಭೂಪಟ ನಕಾಶೆ ರಚಿಸುವ ಹಬ್ಬ
ಏಳು ಖಂಡಗಳ ಜಿಗಿಯುವ ಹಬ್ಬ
ಸಾಗರದೊಳಗೆ ಮುಳುಗುವ ಹಬ್ಬ
ಜಲಚರಗಳೊಂದಿಗೆ ಆಡುವ ಹಬ್ಬ
ಜೀವಿಯ ನಿಜ ಜಾತಿ ತಿಳಿಯುವ ಹಬ್ಬ
ತಾರತಮ್ಯವ ತೊಲಗಿಸೋ ಹಬ್ಬ
ಕಲಿಕೆಯ ಅಂಬರವೇರುವ ಹಬ್ಬ
ಪಂಚತಂತ್ರಗಳ ಬಳಸುವ ಹಬ್ಬ
ಜೀವನ ಕಲೆಯ ತೋರಿಸೊ ಹಬ್ಬ
ಅಜ್ಞಾನದ ಬಲೆಯ ಬಿಡಿಸುವ ಹಬ್ಬ
ಪ್ರೀತಿ ಸಂತಸದಿ ಕುಣಿಯುವ ಹಬ್ಬ
ಜ್ಞಾನಸಾಗರದಿ ಈಜುವ ಹಬ್ಬ
ನೆಲ ಜಲ ಗಾಳಿಯಲಾಡುವ ಹಬ್ಬ
ಸೀಳಿ ರಚನೆಯ ತಿಳಿಯುವ ಹಬ್ಬ
ಕಾಡು ಪರ್ವತ ಏರುವ ಹಬ್ಬ
ಮಂಗಳನಂಗಳ ಕಾಣುವ ಹಬ್ಬ
Subscribe to:
Posts (Atom)
ಚಹಾ ಮತ್ತು ನಾನು
ಚಹಾ ಮತ್ತು ನಾನು ದೂರವಾಗು ಎಂದರೆ ನಮ್ಮಿಬ್ಬರಿಗೂ ಸಾಧ್ಯವೇ ಪ್ರಿಯೆ ಪ್ರಾಣದಿಂದ ಬೇರೆಯಾದವರುಂಟೆ? ಕಾಣುವುದಿಲ್ಲ ಛಾಯೆ ಆತ್ಮದಿಂದ ಹೊರನಡೆದವರುಂಟೆ ? ನೀನೊಂದು ಮಾಯೆ ರಸ...
-
'ತುಘಲಕ್'ನೊಂದಿಗೆ ಮಾತಿಗಿಳಿದಾಗ... ಪುರಾಣವನ್ನಾಧರಿಸಿದ 'ಯಯಾತಿ' ಚರಿತ್ರೆಯನ್ನಾಧರಿಸಿದ 'ತುಘಲಕ್' ನಂತಹ ಶ್ರೇಷ್ಠ ನಾಟಕಗಳನ...
-
ಚಂದ್ರಗಿರಿಯ ತೀರದಲ್ಲಿ ಮಹಿಳೆ... ವಿಶ್ವ ಮಹಿಳಾ ದಿನಾಚರಣೆಯ ಸಂದರ್ಭ. ಅಂತಿಮ ವರ್ಷದ ಬಿ ಎ ತರಗತಿಯಲ್ಲಿ ( ಐಚ್ಛಿಕ ಕನ್ನಡ ವಿಷಯ) ಸ್ತ್ರೀ ಸಂವೇದನೆಯ, ಬಂಡಾಯ ಲೇಖಕ...
-
ಚಹಾ ಮತ್ತು ನಾನು ದೂರವಾಗು ಎಂದರೆ ನಮ್ಮಿಬ್ಬರಿಗೂ ಸಾಧ್ಯವೇ ಪ್ರಿಯೆ ಪ್ರಾಣದಿಂದ ಬೇರೆಯಾದವರುಂಟೆ? ಕಾಣುವುದಿಲ್ಲ ಛಾಯೆ ಆತ್ಮದಿಂದ ಹೊರನಡೆದವರುಂಟೆ ? ನೀನೊಂದು ಮಾಯೆ ರಸ...


