Total Pageviews
Friday, 24 November 2023
ಉಳುಕುಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳುಕತ್ತಲೆಯ ಧಿಮಾಕನ್ನೊರೆಯಲು ಸಾಕು ಉಬ್ಬಿದ ಅಸ್ಥಿ ಮಜ್ಜೆಗಳುಜಾರಿದ ಪಾದಗಳಿಗೆ ರೂಢಿಯಿಲ್ಲದ ದಿಗ್ಭ್ರಮೆಬಿದ್ದ ನಂತರ ಕಳಚುವುದೆಲ್ಲ ಕಟ್ಟಿಕೊಂಡ ವಿಭ್ರಮೆ
ಬಲು ನಾಜೂಕು; ಧಾವಂತಗಳು ನೂಕಿ ನಡೆಯುವ ಜಗದೊಳುದಿಟ್ಟಿಸಿದರೆ ನಾನು ಅತ್ತಿಯ ಹಣ್ಣಿನೊಳಗಿನ ಯಕಃಶ್ಚಿತ ಹುಳುಏಳುಬೀಳುಗಳೇ ಆತ್ಮವನ್ನೆಚ್ಚರಿಸುವ ಪ್ರೇಮ ಸಂಗಾತಿಗಳುಬೆನ್ನು ಹತ್ತುತ್ತೇವೆ ಬರೀ ಮೇಲೇರಿ ನೆಲೆಯೂರಬೇಕೆಂಬ ಧೂಳು
ಬಲು ಹಿತ ; ನೋವು ನೋವೆನ್ನುವುದರ ನಾಮಸ್ಮರಣೆಹೊಳೆಯುವ ಟೈಲುಗಳಿಗೆಲ್ಲಿದೆ ಹೆಜ್ಜೆ ನೆನಪಿಡಬೇಕೆನ್ನುವ ಕರುಣೆಕೊಟ್ಟುಬಿಡಬೇಕಷ್ಟೇ ಬರಹಕ್ಕಾಗಿ ಕಲ್ಲಿನ ಕೈಗಳಿಗೆ ಹಣೆಸೌಭಾಗ್ಯ ಗೀಚಿದರೆ ನಮಗಿನ್ನು ಆಯುಷ್ಯದ ಹೊಣೆ
ಪಾದ ಅಲುಗಿಸಿದಾಗೊಮ್ಮೆ ಮಧುರ ಯಾತನೆಹಿತವೋ ಹಿತ ಮಸಾಜಿನ ತೈಲದ ಸುವಾಸನೆನೋವಿನೊಳಗೊಂದು ಕಾಣದ ಪರಮಾನಂದದ ಗೂಡುಹೃದಯಕ್ಕೊಂದು ಮರೆಯಲಾಗದ ಕಾವಿನ ಹಾಡು
ಜಗವೆಲ್ಲಾ ತುಂಬಿತುಳುಕುತಿರುವ ಥಳಕು ಬಳುಕುಹೆಕ್ಕಿ ತೆಗೆಯುವವರಾರು ಹೂತು ಹಾಕಿರುವ ನೆಲದೊಳಗಿನ ಹೆಜ್ಜೆಗಳ ಹುಳುಕುಜಾರಿ ಬೀಳುವುದರ ಹಿಂದಿರಬೇಕು ನುಂಗಿಬಿಡಬೇಕೆನ್ನುವ ಪಾಪದ ಕೊಂಕುಸುರುಳಿ ಸುರುಳಿಯೊಳಗಡಗಿದೆ ಕಾಲನ ನಿಗೂಢ ಚುಳುಕು
ಉಳುಕು
ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು ಸತ್ಯದ ರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳುಕತ್ತಲೆಯ ಧಿಮಾಕನ್ನೊರೆಯಲು ಸಾಕು ಉಬ್ಬಿದ ಅಸ್ತಿ ಮಜ್ಜೆಗಳುಜಾರಿದ ಪಾದಗಳಿಗೆ ರೂಢಿಯಿಲ್ಲದ ದಿಗ್ಭ್ರಮೆಬಿದ್ದ ನಂತರ ಕಳಚುವುದೆಲ್ಲ ಕಟ್ಟಿಕೊಂಡ ವಿಭ್ರಮೆ
ಬಲು ನಾಜೂಕು; ಧಾವಂತಗಳು ನೂಕಿ ನಡೆಯುವ ಜಗದೊಳುದಿಟ್ಟಿಸಿದರೆ ನಾನು ಅತ್ತಿಯ ಹಣ್ಣಿನೊಳಗಿನ ಯಕಃಶ್ಚಿತ ಹುಳುಏಳುಬೀಳುಗಳೇ ಆತ್ಮವನ್ನೆಚ್ಚರಿಸುವ ಪ್ರೇಮ ಸಂಗಾತಿಗಳುಬೆನ್ನು ಹತ್ತುತ್ತೇವೆ ಬರೀ ಮೇಲೇರಿ ನೆಲೆಯೂರಬೇಕೆಂಬ ಧೂಳು
ಬಲು ಹಿತ ; ನೋವು ನೋವೆನ್ನುವುದರ ನಾಮಸ್ಮರಣೆಹೊಳೆಯುವ ಟೈಲುಗಳಿಗೆಲ್ಲಿದೆ ಹೆಜ್ಜೆ ನೆನಪಿಡಬೇಕೆನ್ನುವ ಕರುಣೆಕೊಟ್ಟುಬಿಡಬೇಕಷ್ಟೇ ಬರಹಕ್ಕಾಗಿ ಕಲ್ಲಿನ ಕೈಗಳಿಗೆ ಹಣೆಸೌಭಾಗ್ಯ ಗೀಚಿದರೆ ನಮಗಿನ್ನು ಆಯುಷ್ಯದ ಹೊಣೆ
ಪಾದ ಅಲುಗಿಸಿದಾಗೊಮ್ಮೆ ಮಧುರ ಯಾತನೆಹಿತವೋ ಹಿತ ಮಸಾಜಿನ ತೈಲದ ಸುವಾಸನೆನೋವಿನೊಳಗೊಂದು ಕಾಣದ ಪರಮಾನಂದದ ಗೂಡುಹೃದಯಕ್ಕೊಂದು ಮರೆಯಲಾಗದ ಕಾವಿನ ಹಾಡು
ಜಗವೆಲ್ಲಾ ತುಂಬಿತುಳುಕುತಿರುವ ಥಳಕು ಬಳುಕುಹೆಕ್ಕಿ ತೆಗೆಯುವವರಾರು ಹೂತು ಹಾಕಿರುವ ನೆಲದೊಳಗಿನ ಹೆಜ್ಜೆಗಳ ಹುಳುಕುಜಾರಿ ಬೀಳುವುದರ ಹಿಂದಿರಬೇಕು ನುಂಗಿಬಿಡಬೇಕೆನ್ನುವ ಪಾಪದ ಕೊಂಕುಸುರುಳಿ ಸುರುಳಿಯೊಳಗಡಗಿದೆ ಕಾಲನ ನಿಗೂಢ ಚುಳುಕು
Subscribe to:
Comments (Atom)
ಚಹಾ ಮತ್ತು ನಾನು
ಚಹಾ ಮತ್ತು ನಾನು ದೂರವಾಗು ಎಂದರೆ ನಮ್ಮಿಬ್ಬರಿಗೂ ಸಾಧ್ಯವೇ ಪ್ರಿಯೆ ಪ್ರಾಣದಿಂದ ಬೇರೆಯಾದವರುಂಟೆ? ಕಾಣುವುದಿಲ್ಲ ಛಾಯೆ ಆತ್ಮದಿಂದ ಹೊರನಡೆದವರುಂಟೆ ? ನೀನೊಂದು ಮಾಯೆ ರಸ...
-
ಕುಲದ ನೆಲೆಯನರಸುತ್ತಾ.... ನಮ್ಮ ನಾಡಿನ ಖ್ಯಾತ ಸಾಹಿತಿಗಳು, ಚಿಂತಕರಾದ ಡಾ.ಗುರುಲಿಂಗ ಕಾಪಸೆ ಯವರು " ಪಂಪ ರನ್ನ ರಂತಹ ವ...
-
ಚಹಾ ಮತ್ತು ನಾನು ದೂರವಾಗು ಎಂದರೆ ನಮ್ಮಿಬ್ಬರಿಗೂ ಸಾಧ್ಯವೇ ಪ್ರಿಯೆ ಪ್ರಾಣದಿಂದ ಬೇರೆಯಾದವರುಂಟೆ? ಕಾಣುವುದಿಲ್ಲ ಛಾಯೆ ಆತ್ಮದಿಂದ ಹೊರನಡೆದವರುಂಟೆ ? ನೀನೊಂದು ಮಾಯೆ ರಸ...
-
ಭಾವಯಾನ 'ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ| ಎಳ್ಳು ಜೀರಿಗೆ ಬೆಳೆಯೋಳ |ಭೂಮಿತಾಯಿ ಎದ್ದೊಂದು ಘಳಿಗೆ ನೆನೆದೇನ' ಎಂದು ಹಾಡುವ ಜನಪದರು ಬೆಳಗಾಗೆದ...