Total Pageviews
Thursday, 17 November 2022
ದಿಗಂಬರವೇ ದಿವ್ಯಾಂಬರ
ಪಂಪ ರನ್ನ ಜನ್ನರು ಸಾಕು ಅರಿವುದು ಸೌಜನ್ಯಕೋಟಿ ಜೀವರಾಶಿಗಳ ಜಗದಲ್ಲಿ ಮನುಷ್ಯನೇ ವಿಶ್ವಮಾನ್ಯ ಸಾವಿರ ಗ್ಯಾಲಕ್ಸಿಗಳ ಬ್ರಹ್ಮಾಂಡದಲ್ಲಿ ನಾವು ತೃಣ ಸಾಮಾನ್ಯನ್ಯಾಯದ ಗುಡಿಯಿದು ಪರಿಮಳದ ಶ್ರೀಗಂಧದ ಅರಣ್ಯ
ಕೋಮಲವಾಗಿ ಬಳುಕುವ ಬಿಳಿಯಿರುವುದೆಲ್ಲವೂ ಹಾಲಲ್ಲ ಎಂದರಂದು ಕುವೆಂಪು ಸಚಿವ ಮಂಡಲವೆಂದೂ ಶಾಶ್ವತವಲ್ಲನಂಬದಿರಿ ಕಿವಿ ಕಚ್ಚಿ ಹಾಡುವ ಹಾಲುಗಲ್ಲಎದುರಾಗುವವರೆಲ್ಲರೂ ಬಾಗುವ ಸಣ್ಣತನಗಳ ಜಾಳಲ್ಲ
ತಲ್ಲಣಿಸದಿರು ಕಂಡ್ಯ ತಾಳು ಮನವೆಂದರು ದಾಸರುಹೊರಡುವ ಹಾದಿಯೊಂದೇ ನಾವು ಭಗವಂತನ ದಾಸರುಭುವನ ಗೆದ್ದ ತಥಾಗತನಿಗೆ ಹೆಸರು ಮಂದಹಾಸರುಕಾಯಕವೇ ಕೈಲಾಸ ಬೇಕೆ ಹಂಗಿನರಮನೆಯ ಹೆಸರು ?
ವಿಚಾರಿಸಿದರೆ ತಪ್ಪು ಒಪ್ಪುಗಳ ಪ್ರಶ್ನೆ ಅನಂತಆರಾಧಿಸಿದರೆ ಸಾಕು ಸರಸ್ವತಿಯ ಏಕಾಂತದಿಗಂಬರವೇ ದಿವ್ಯಾಂಬರ ಅಕ್ಕಮಹಾದೇವಿಯ ಪಂಥತಿದ್ದಿ ಬೆಳಕಾಗಬೇಕೆನ್ನುವುದೇ ಭುವನದ ಮನುಜ ಮತ
Friday, 14 January 2022
ಸಂಕ್ರಮಣ
ಸಂಕ್ರಮಣ
ಸಂಕ್ರಮಣವೆಂದಾರಂಭಿಸಿದ ಆಗಂತುಕ ಪಯಣ
ಅನಂತದವರೆಗೂ ಸೆಳೆದುಕೊಂಡ ಸತ್ಯಗಳ ಅರುಣ
ಕಂಡ ದಾರಿಯದೋ ಬಲು ಹಿತ ಒಮ್ಮೊಮ್ಮೆ ದಾರುಣ
ಎಲ್ಲಿರುವನೋ ಆವರಿಸಿ ಹಸಿಯಾಗಿಸುವ ಚೈತನ್ಯದ ವರುಣ
ಹೊರಟ ಹಾದಿ ಹೊರಳಿತಲ್ಲ ಕಾಲವೇ ನೀ ಕಾರಣ
ಏರಿದರೂ ಮುಗಿಯದು; ಇದೆಂತಹ ಚಿರ ಚಾರಣ
ತೊಟ್ಟಂತಿಹುದು ಇಳೆಯಿಂದು ಬಿಸಿಲ ಸ್ವರ್ಣದಾಭರಣ
ಕ್ಷಣ ಕ್ಷಣವೂ ಹೊಸದು ; ಕಾಲವೇ ನಿನ್ನ ಪವಿತ್ರ ಚರಣ
ಹೊರಳಿದಾಗೊಮ್ಮೆ ನಿನ್ನಂತಾಗಬೇಕು; ರಹಸ್ಯವೇನು ತರುಣ
ನೇಸರನಿಗೂ ದಯಪಾಲಿಸಿರುವೆ ; ನಿತ್ಯೋತ್ಸವ ಜನನ
ಹಾದಿಯಲ್ಲೊಮ್ಮೆ ಮೈಲುಗಲ್ಲಾದೆ; ತೀರಿಸುವುದೆಂತು ಋಣ
ಜೀವವಿದು ನಿತ್ಯ ಹರಿದು ಪರಿಚಲಿಸುವ ಹೊಂಬಾಣ
ಭುವಿ ತಿರುಗುವ ಸದ್ದೆಲ್ಲಿಹುದೋ ಪುನೀತವಾಗಬೇಕಿವೆ ಕರಣ
ಪ್ರಾಣವೆಲ್ಲವೂ ಅರಿತರಿಯದಂತೆ ನಿನ್ನೊಳಗೆ ಹರಣ
ಕಾಯುವೆಯಾ ಕೊನೆಯವರೆಗೂ; ನಂಬಿದೆ ನಾಗಾಭರಣ
ಉತ್ತರಾಯಣದ ಪ್ರಶ್ನೆಗಳಿಂದರಿತೆ ಸೃಷ್ಟಿಯ ಧಾರಣ
ಬಯಸಿದ ಬೀದಿಯೆಲ್ಲವೂ ವಿಸ್ಮಯದ ಹೂರಣ
ಹಾಡಬೇಕೆನ್ನಿಸಿದೆ ಹಕ್ಕಿಗಳೊಂದಿಗೆ ರಸರಾಗ ತಾನನ
ಶಿಶುಪುಷ್ಯನಿಗೆಲ್ಲದೆ ನಿತ್ಯ ಭೋಗಿಸುವ ಭಾಗ್ಯದ ಭೋಜನ
ಗಿಡಮರಗಳಿಗೆ ಮೈಸವರುವ ಸಮಯವಿದುವೇ ಅಭ್ಯಂಜನ
Subscribe to:
Comments (Atom)
ಚಹಾ ಮತ್ತು ನಾನು
ಚಹಾ ಮತ್ತು ನಾನು ದೂರವಾಗು ಎಂದರೆ ನಮ್ಮಿಬ್ಬರಿಗೂ ಸಾಧ್ಯವೇ ಪ್ರಿಯೆ ಪ್ರಾಣದಿಂದ ಬೇರೆಯಾದವರುಂಟೆ? ಕಾಣುವುದಿಲ್ಲ ಛಾಯೆ ಆತ್ಮದಿಂದ ಹೊರನಡೆದವರುಂಟೆ ? ನೀನೊಂದು ಮಾಯೆ ರಸ...
-
ಕುಲದ ನೆಲೆಯನರಸುತ್ತಾ.... ನಮ್ಮ ನಾಡಿನ ಖ್ಯಾತ ಸಾಹಿತಿಗಳು, ಚಿಂತಕರಾದ ಡಾ.ಗುರುಲಿಂಗ ಕಾಪಸೆ ಯವರು " ಪಂಪ ರನ್ನ ರಂತಹ ವ...
-
ಚಹಾ ಮತ್ತು ನಾನು ದೂರವಾಗು ಎಂದರೆ ನಮ್ಮಿಬ್ಬರಿಗೂ ಸಾಧ್ಯವೇ ಪ್ರಿಯೆ ಪ್ರಾಣದಿಂದ ಬೇರೆಯಾದವರುಂಟೆ? ಕಾಣುವುದಿಲ್ಲ ಛಾಯೆ ಆತ್ಮದಿಂದ ಹೊರನಡೆದವರುಂಟೆ ? ನೀನೊಂದು ಮಾಯೆ ರಸ...
-
ಭಾವಯಾನ 'ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ| ಎಳ್ಳು ಜೀರಿಗೆ ಬೆಳೆಯೋಳ |ಭೂಮಿತಾಯಿ ಎದ್ದೊಂದು ಘಳಿಗೆ ನೆನೆದೇನ' ಎಂದು ಹಾಡುವ ಜನಪದರು ಬೆಳಗಾಗೆದ...

